ನಾವು ಪ್ರಧಾನಿ ನರೇಂದ್ರ ಮೋದಿಯವರಂತೆ ಸುಳ್ಳು ಭರವಸೆಗಳನ್ನು ನೀಡುವವರಲ್ಲ: ಬಿ ಕೆ ಹರಿಪ್ರಸಾದ್

2 years ago

ಬೆಂಗಳೂರು: ಜನರಿಗೆ ನಾವು ಭರವಸೆಗಳನ್ನ ನೀಡಿದ್ದೇವೆ ಅದರಂತೆ ನಡೆದುಕೊಳ್ಳುತ್ತಿದ್ದೇವೆ ಎಂದು ವಿಧಾನ ಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು, ಪ್ರಧಾನಿ ನರೇಂದ್ರ ಮೋದಿಯವರಂತೆ ಸುಳ್ಳು ಭರವಸೆಗಳನ್ನು ನೀಡುವವರಲ್ಲ. ಸತ್ಯವನ್ನು ಸುಳ್ಳು ಮಾಡುವುದು, ಸುಳ್ಳನ್ನು ಸತ್ಯವಾಗಿಸುವುದು ಬಿಜೆಪಿ ಪಕ್ಷ ಕರಗತ ಮಾಡಿಕೊಂಡಿರುವ ಕಲೆ ಎಂದರು.

ಗುತ್ತಿಗೆಯಲ್ಲಿ ಕೇವಲ ಮುಸ್ಲಿಂ ಸಮುದಾಯಕ್ಕೆ 4% ಮೀಸಲಾತಿ ನೀಡಲಾಗಿದೆ ಎಂಬ ಸುಳ್ಳನ್ನು ಬಿಜೆಪಿ ಅಪಪ್ರಚಾರ ನಡೆಸುತ್ತಿದೆ. ಆದರೆ ಅಲ್ಪಸಂಖ್ಯಾತ ಸಮುದಾಯಗಳಾದ ಕ್ರಿಸ್ಚಿಯನ್, ಜೈನ್, ಬೌದ್ಧ, ಸಿಖ್ಖರು ಹಾಗೂ ಮುಸ್ಲಿಂ ಸೇರಿದಂತೆಯೂ ಅನೇಕ ಸಮುದಾಯಗಳು ಗುತ್ತಿಗೆಯಲ್ಲಿ ಮೀಸಲಾತಿ ಪಡೆದುಕೊಳ್ಳಬಹುದು. ಈಗಾಗಲೇ ಎಸ್ಸಿ ಎಸ್ಟಿ ಸಮುದಾಯಗಳಿಗೂ ಕೂಡ ಗುತ್ತಿಗೆಯಲ್ಲಿ ಕಾಂಗ್ರೆಸ್ ಸರ್ಕಾರ ಮೀಸಲಾತಿ ನೀಡಿದೆ ಎಂದರು.

ಜಿಎಸ್ಟಿ ತೆರಿಗೆಯ ನಂತರ ಪ್ರತಿಯೊಬ್ಬರಿಗೂ ಅವರ ಪಾಲನ್ನು ಪಡೆಯುವ ಹಕ್ಕಿದೆ. ಸಾಮಾನ್ಯ ಭಿಕ್ಷುಕ ಕೂಡ ಜಿಎಸ್ಟಿ ಕಟ್ಟುತ್ತಿದ್ದಾರೆ. ಬಡ, ಹಿಂದುಳಿ, ದೀನ ದಲಿತರನ್ನು ಸಬಲೀಕರಣ ಮಾಡುವುದಕ್ಕಾಗಿ ಸಂವಿಧಾನದಲ್ಲಿ ಅವಕಾಶ ನೀಡಿದೆ ಎಂದರು.

EWS ಮೂಲಕ ಆರ್ಥಿಕವಾಗಿ ಹಿಂದುಳಿದಿರುವ ಕಾರಣ ನೀಡಿ ಕೆಲವು ಸಮುದಾಯಗಳಿಗೆ 10% ಮೀಸಲಾತಿ ನೀಡಿದಾಗ ಬಿಜೆಪಿ ಪಕ್ಷ ಯಾಕೆ ಪ್ರಶ್ನಿಸಲಿಲ್ಲ. ಬಿಜೆಪಿ ಪಕ್ಷ ಇಂತಹ ದ್ವಿಮುಖ ನೀತಿಗೆ ಮೊದಲು ಸ್ಪಷ್ಟಪಡಿಸಲಿ. ಬಡ, ಮಧ್ಯಮ ವರ್ಗದವರ ಪರವಾದ ನಿಲುವುಗಳನ್ನ ಬಿಜೆಪಿ ಎಷ್ಟೇ ವಿರೋಧ ಮಾಡಿದರು ನಾವು ನಮ್ಮ ಕಾರ್ಯಕ್ರಮಗಳನ್ನು ಮುಂದುವರೆಸುತ್ತೇವೆ ಎಂದರು.

Leave a Reply