ಈ ದೇಶದ ಯಾವುದೇ ಸಮಸ್ಯೆಗಳಿಗೆ ಕೇಂದ್ರ ಸರ್ಕಾರವಾಗಲಿ, ವಿಶ್ವಗುರು ಮೋದಿಯವರಾಗಲಿ ಹೊಣೆಗಾರಿಕೆಯನ್ನು ಹೊರುವುದಿಲ್ಲ! ಹೊಣೆಗಾರಿಕೆಯನ್ನು ನೆನಪಿಸಿದರೆ ಬಿಜೆಪಿಯವರು ಸಹಿಸುವುದೂ ಇಲ್ಲ.
- ಸರಳ, ವೇಗ, ಪಾರದರ್ಶಕ, ಜನಸ್ನೇಹಿ ಆಸ್ತಿ ದಾಖಲೆ ವ್ಯವಸ್ಥೆ ಇ-ಆಸ್ತಿ 2.0: ಕೃಷ್ಣ ಬೈರೇಗೌಡ
- ರೈತರಿಗೆ ನಿರಂತರ 6 ತಾಸು ಸಮರ್ಪಕ ವಿದ್ಯುತ್ ಕುಡಿಯುವ ನೀರು ಪೂರೈಕೆಗೆ ಆದ್ಯತೆ
- ಕೆಟಿವಿಎ ಗೃಹ ಪತ್ರಿಕೆ ಟಿವಿ – ಠೀವಿ ಪುನರಾರಂಭ
- ಸಿಎನ್ಎನ್, ಎಂಎಸ್ಎನ್ಬಿಸಿ, ಪಾಲಿಟಿಕೋಗೆ ಶ್ವೇತಭವನ ಪ್ರವೇಶ ನಿಷೇಧಿಸಿದ ಟ್ರಂಪ್
- ಕೆರೆಗಳ ಪುನಶ್ಚೇತನಕ್ಕೆ ₹150 ಕೋಟಿ ವೆಚ್ಚದ ವಿಶ್ವಬ್ಯಾಂಕ್ ಯೋಜನೆ: ಈಶ್ವರ್ ಖಂಡ್ರೆ
ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿ ಕಬ್ಬು ಬೆಳೆಗಾರರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದಕ್ಕಾಗಿ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರು ಪ್ರಧಾನಿಯವರ ಭೇಟಿಗೆ ಸಮಯ ಕೇಳಿ ಪತ್ರ ಬರೆದಿದ್ದಾರೆ.
ಕೇಂದ್ರ ಸರ್ಕಾರದ ಮಧ್ಯಪ್ರವೇಶಕ್ಕೆ ಕೇಳುವುದು ಮೂರ್ಖತನ ಎಂದಿದ್ದಾರೆ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ. ಮಹಾರಾಷ್ಟ್ರ ಮುಖ್ಯಮಂತ್ರಿಗಳಾದ ದೇವೇಂದ್ರ ಫಡ್ನವೀಸ್ ಅವರು ಕಬ್ಬು ಬೆಳೆಗಾರರಿಗೆ MSP ಮತ್ತು FRP ನಿಗದಿಪಡಿಸಲು ಆಗ್ರಹಿಸಿ ಸ್ವತಃ ಪ್ರಹ್ಲಾದ್ ಜೋಶಿಯವರಿಗೇ ಪತ್ರ ಬರೆದಿದ್ದರು.

ದೇವೇಂದ್ರ ಫಡ್ನವೀಸ್ ಅವರದ್ದೂ ಮೂರ್ಖತನವೇ?
BJP ಸಂಸದರು ಕೇಂದ್ರ ಸರ್ಕಾರದ ಪ್ರತಿನಿಧಿಯಾಗಿ ರಾಜ್ಯದ ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಿ, ಅದು ಬಿಟ್ಟು ಆರೋಪ ಮಾಡುವುದೇ ರಾಜಕೀಯದ ಪರಮೋದ್ದೇಶ ಎಂಬ ಧೋರಣೆಯನ್ನು ಸರಿಯಲ್ಲ.
ಅಥವಾ
ಕೇಂದ್ರ ಸರ್ಕಾರದ ಸಹಕಾರ ಮತ್ತು ಸ್ಪಂದನೆ ಕೇವಲ ಬಿಜೆಪಿ ಆಡಳಿತದ ರಾಜ್ಯಗಳಿಗೆ ಮಾತ್ರ ಇರುತ್ತದೆ ಎಂಬ ನಿಮ್ಮ ಆಂತರಿಕ ನೀತಿಯನ್ನು ಬಹಿರಂಗ ಘೋಷಣೆಯನ್ನಾದರೂ ಮಾಡಿಬಿಡಿ!
– ಪ್ರಿಯಾಂಕ್ ಖರ್ಗೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ




