ಬೆಂಗಳೂರು: ಕೆಲವು ಸರ್ವೇ ನಂಬರ್‌ಗಳಲ್ಲಿ ಕಂದಾಯ ಇಲಾಖೆ, ಅರಣ್ಯ ಇಲಾಖೆ ಹಾಗೂ ರೈತರ ಹೆಸರೂ ಇರುತ್ತದೆ. ಜಂಟಿ ಸರ್ವೇ ನಡೆಸಿ ಎಲ್ಲರಿಗೂ ನೂತನ ಹಿಸ್ಸಾ ನಂಬರ್ ನೀಡದೆ ಈ ಸಮಸ್ಯೆಗೆ ಶಾಶ್ವತ ಪರಿಹಾರ ಇಲ್ಲ. ಹೀಗಾಗಿ ಸರ್ವೇ ಕೆಲಸಗಳನ್ನು ವೇಗಗೊಳಿಸುವ ನಿಟ್ಟಿನಲ್ಲಿ ಎಲ್ಲಾ ತಾಲೂಕಿಗೂ ರೋವರ್‌ಗಳನ್ನು ನೀಡಲಾತ್ತಿದೆ. ಪ್ರತಿ ತಾಲೂಕಿಗೆ ಮೂರು ರೋವರ್‌ಗಳನ್ನು ನೀಡಲು ಟೆಂಡೆರ್ ಕರೆತಯಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
- ಸಾಲ ಮನ್ನಾ ಮಾಡಿ ರೈತರ ಹಿತ ಕಾಪಾಡಿದ್ದ ಡಾ.ಮನಮೋಹನ್ ಸಿಂಗ್
- ರಾಜ್ಯದ ಅಭಿವೃದ್ಧಿಗೆ ಆರ್.ಅಶೋಕ್ ಅಡ್ಡಗಾಲು: ಕೆಪಿಸಿಸಿ
- ಎನ್ಜಿಟಿಯಲ್ಲಿ ವಕೀಲರನ್ನು ನೇಮಿಸಿ ಹೋರಾಟ ಮಾಡಬೇಕು: ಆರ್.ಅಶೋಕ
- ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ
- ಮೈಸೂರು ದಸರಾ: ಕನ್ನಡ ಪುಸ್ತಕಗಳ ರಿಯಾಯಿತಿ ಮಾರಾಟ
ವಿಧಾನಸೌಧದ ಬ್ಯಾಂಕ್ವೆಂಟ್ ಹಾಲ್‌ನಲ್ಲಿ ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ ಹಾಗೂ ಕಂದಾಯ ಆಯುಕ್ತಾಲಯ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹೊಸದಾಗಿ ಆಯ್ಕೆಯಾದ 1,000 ಪರವಾನಗಿ ಭೂಮಾಪಕರುಗಳಿಗೆ ಪರವಾನಗಿ ಪ್ರಮಾಣ ಪತ್ರ ಹಾಗೂ ಗ್ರಾಮ ಆಡಳಿತಾಧಿಕಾರಿಗಳಿಗೆ ಲ್ಯಾಪ್‌ಟಾಪ್ ವಿತರಿಸಿ ಅವರು ಮಾತನಾಡಿದರು.
ಮೊಘಲರ ಕಾಲದಲ್ಲಿ ಚೈನ್‌ನಲ್ಲಿ ಭೂ ಅಳತೆ ಮಾಡಲಾಗುತ್ತಿತ್ತು. ಈಗಲೂ ಅದೇ ಪದ್ದತಿ ಅನುಸರಿಸುವುದು ತರವಲ್ಲ. 18-19ನೇ ಶತಮಾನದ ರೀತಿ ಕೆಲಸ ಮಾಡಿದರೆ ಎಷ್ಟೇ ಸಿಬ್ಬಂದಿ ಇದ್ದರೂ ಸಾಲದು. ಈಗಾಗಿ ಎಲ್ಲರೂ 21ನೇ ಶತಮಾನದ ಎಲ್ಲಾ ತಂತ್ರಜ್ಞಾನ ಬಳಸಿಕೊಂಡು ಕೆಲಸ ಮಾಡಬೇಕು. ಅದೇ ಕಾರಣಕ್ಕೆ ಸರ್ವೇ ಕೆಲಸದಲ್ಲಿ ರೋವರ್ ಬಳಕೆಯನ್ನು ಅಳವಡಿಸಲಾಗಿದೆ ಎಂದರು.
ರೋವರ್ ಸರ್ವೇ ಮೂಲಕ ಕೆಲಸದ ವೇಗ ಮೂರರಿಂದ ಐದು ಪಟ್ಟು ಹೆಚ್ಚಾಗುತ್ತದೆ. ಒಬ್ಬ ವ್ಯಕ್ತಿ ಒಂದೇ ದಿನಕ್ಕೆ ಐದಕ್ಕೂ ಹೆಚ್ಚು ಸರ್ವೇ ನಡೆಸಬಹುದು. ಅಲ್ಲದೆ, ಸರ್ವೇ ಸಹಾಯದಿಂದ ಮುಂದಿನ ಎರಡು ತಿಂಗಳಲ್ಲಿ ಎಲ್ಲಾ ಆಖಾರ್ ಬಂದ್‌ಗಳನ್ನೂ ಡಿಜಿಟಲೀಕರಣಗೊಳಿಸಲಾಗುವುದು. ಕಾಲಂ 3-9 ವಿಸ್ತೀರ್ಣ ಹೊಂದಾಣಿಕೆ ಬಗೆಹರಿಸಿ ಹೊಸ ಸರ್ವೇ ನಂಬರ್ ನೀಡಲಾಗುವುದು. ಈ ಕೆಲಸ ಮಾಡಲೇಬೇಕು, ಜನರಿಗೆ ನೆಮ್ಮದಿ ನೀಡಲೇಬೇಕು ಎಂದರು.



