ಉಪೇಂದ್ರ ಆದ ನಾನು ಈ ರಾಜ್ಯದ ಮುಖ್ಯಮಂತ್ರಿಯಾಗಿ!!!

5 years ago

ಉಪೇಂದ್ರ ಎಂಬ ನಾನು ಈ ರಾಜ್ಯದ ಮುಖ್ಯ…… ಎಂದರೆ ಮುಂದಿನ ಪದ ಏನು ಎಂದು ಯಾರಿಗೆ ಅರ್ಥವಾಗಲಿಕ್ಕಿಲ್ಲ. ಮುಖ್ಯಮಂತ್ರಿ ತಾನೇ? ಯೆಸ್. ನಿಮ್ಮ ಊಹೆ ಸರಿ. ರಿಯಲ್ ಸ್ಟಾರ್ ಉಪೇಂದ್ರ ಹೀಗೊಂದು ಪತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಅವರ ಪತ್ರದಲ್ಲೇನಿದೆ ನೀವೇ ಓದಿ.

ನಾನು ಉಪೇಂದ್ರ.……… ಈ ರಾಜ್ಯದ ಮುಖ್ಯಮಂತ್ರಿ (CM) ಆಗ್ಬೇಕು… ನಾನು ಚುನಾವಣೇಲಿ ಸ್ಪರ್ಧಿಸಿದರೆ? ನೀವು ನನ್ನನ್ನ ಗೆಲ್ಲಸ್ತೀರಾ?

ನೋಡಿ ನಾನು ಸಮಾಜ ಸೇವೆ ಮಾಡ್ತಿದೀನಿ!

ರೈತರಿಂದ ಬೆಳೆ ಕೊಂಡು ಉಚಿತವಾಗಿ ಕಷ್ಟದಲ್ಲಿರೋರಿಗೆ ಹಂಚಿದೀನಿ, ಚುನಾವಣೆ ಸಮಯದಲ್ಲಿ ಹೋರಾಟಾನೂ ಮಾಡ್ತೀನಿ, ಆಡಳಿತ ಪಕ್ಷ, ವಿರೋಧ ಪಕ್ಷ ಜನರಿಗೆ ಏನೂ ಮಾಡ್ದೆ ಸಂಪೂರ್ಣ ವಿಫಲ ಆಗಿದೆ ಅಂತ ಮಾಧ್ಯಮದಲ್ಲಿ ಕೂಗಿ ಹೇಳೀನಿ, ಇವರನ್ನೆಲ್ಲಾ ಕಿತ್ತಾಕಿ ನನಗೆ ಒಂದು ಅವಕಾಶ ಕೊಡಿ.

ನಿಮ್ಮ ಮುಂದಿನ ಉಜ್ವಲ ಭವಿಷ್ಯಕ್ಕೆ ನಾನು ಕೆಲಸ ಮಾಡ್ತೀನಿ, ಹಗಲು ರಾತ್ರಿ ಕಷ್ಟಪಟ್ಟು ಸುವರ್ಣ ಕರ್ನಾಟಕ ಮಾಡ್ತೀನಿ! ನನ್ನನ್ನ ಗೆಲ್ಲಸ್ತೀರಾ????

ನೀವು ನನ್ನನ್ನ ಗೆಲ್ಲಸ್ತೀರೋ ಸೋಲಸ್ತೀರೋ….? ಆದ್ರೆ….. ನಾನು ಎಲೆಕ್ಷನ್ ಗೆ ನಿಲ್ಲಲ್ಲ..

ಹಾಗಾದ್ರೆ ಉತ್ತಮ ಪ್ರಜಾಕೀಯ ಪಕ್ಷ ಯಾಕೇ? ಅಂತ ಕೇಳ್ತೀರಾ? ಪ್ರಜಾಕೀಯದಿಂದ ದೊಡ್ಡ ಸಮಾಜ ಸೇವೆ ಮಾಡಿ ಹೆಸರು ಮಾಡಿರೋರು ಫೇಮಸ್ ವ್ಯಕ್ತಿಗಳು ಮೇಲೆ ಹೇಳಿದ ಯಾವ ಕ್ವಾಲಿಟೀ ಇರೋ ನಾಯಕರು ನಿಲ್ಲಲ್ಲ, ದೊಡ್ಡ ನಾಯಕರನ್ನ ಕೊಡೋದು ರಾಜಕೀಯ!

ಪ್ರಜಾಕೀಯದಲ್ಲಿ ನಿಮಗೆ ಗೊತ್ತಿಲ್ಲದಿರೊ ಸಾಮಾನ್ಯರು ಚುನಾವಣೆಗೆ ನಿಲ್ತಾರೆ., ಬರೀ ಪ್ರಜಾಕೀಯ ವಿಚಾರ ತಳ್ಕೊಂಡು ಓಟ್ ಹಾಕಿ ಅವರಿಗೆ ಕೆಲಸ ಕೊಟ್ರೆ ನಿಮ್ ಜೊತೆ ನಿರಂತರ ಸಂಪರ್ಕದಲ್ಲಿದ್ದು, ನಿಮಗೆ ಬೇಕಾದ ಕೆಲಸ ಪೈಸ ಪೈಸ ಲೆಕ್ಕ ಕೊಟ್ಟು ಸಂಪೂರ್ಣ ಪಾರದರ್ಶಕತೆಯಿಂದ ಮಾಡ್ತಾರೆ.

ಪ್ರಜಾಕೀಯದ (SOP) ಕಾರ್ಯವೈಖರಿ ತರ ಕೆಲಸ ಮಾಡ್ಲಿಲ್ಲ, ನಿಮಗೆ ಅವನ/ಅವಳ ಕೆಲಸ ಇಷ್ಟ ಆಗ್ಲಿಲ್ಲ ಅಥವಾ ಹಣ, ಅಧಿಕಾರದ ಆಸೆಗೆ ಬೇರೆ ಪಕ್ಷದ ಜೊತೆ ಜಂಪ್ ಆಗೋಕೆ ಹೋದ್ರೆ… ನಾನು ಉಪೇಂದ್ರ C M ಆಗಿ ನಿಮ್ ಜೊತೆ ನಿಲ್ತೀನಿ,

ನಿಮ್ ಜೊತೆ ಉಗ್ರ ಹೋರಾಟ ಮಾಡಿ, ಅಂತಾ ಭ್ರಷ್ಟ ಪ್ರತಿನಿಧಿ ರಾಜೀನಾಮೆ ಕೊಡೋತರ ಮಾಡ್ತೀನಿ. ಈ ವ್ಯವಸ್ಥೆ ಸರೀ ಹೋಗೋಕೆ ಎರಡು ಎಲೆಕ್ಷನ್ ಜಾಸ್ತಿ ಆಗ್ಲಿ…. ಜನಕ್ಕೆ ಪ್ರಜಾಪ್ರಭುಗಳಿಗೆ ಅಭ್ಯರ್ಥಿ ಇಷ್ಟ ಆಗ್ದಿದ್ರೆ ಅವನು/ ಅವಳು ಕೆಳಗಿಳೀಬೇಕು ಅಂತಾ ಕಾನೂನು ಬರ್ಬೇಕು. ಅದಕ್ಕೆ ನಿಮ್ ಜೊತೆ ನಾನು ಯಾವಾಗೂ ಇರೋ permanent C M (ಕಾಮನ್ ಮ್ಯಾನ್) ಜನ ಸಾಮಾನ್ಯ….? ಇಲ್ಲ ಇಲ್ಲ. ಜನ ಅಸಾಮಾನ್ಯರಲ್ಲಿ ಒಬ್ಬನಾಗಿರ್ತೀನಿ. ಸರೀನಾ?

  • ಉಪೇಂದ್ರ

Leave a Reply