ಸತ್ಯ ಮತ್ತು ನ್ಯಾಯ ಸೇಡಿನ ರಾಜಕೀಯವನ್ನ ಸೋಲಿಸಿದೆ: ಬಿ ಕೆ ಹರಿಪ್ರಸಾದ್

20 seconds ago

ಸತ್ಯ ಮತ್ತು ನ್ಯಾಯ ಸೇಡಿನ ರಾಜಕೀಯವನ್ನ ಸೋಲಿಸಿದೆ. ಗಾಂಧಿ ಕುಟುಂಬವನ್ನು ರಾಜಕೀಯವಾಗಿ ಎದುರಿಸಲಾಗದ ಪ್ರಧಾನಿ Narendra Modi  ಹಾಗೂ ಕೇಂದ್ರ ಸರ್ಕಾರ, ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸುಳ್ಳು ಖಾಸಗೀ ದೂರನ್ನು ದಾಖಲಿಸಿ ತನಿಖಾ ಸಂಸ್ಥೆಗಳ ದುರಪಯೋಗ ಮಾಡಿಕೊಂಡಿರುವುದಕ್ಕೆ ದೆಹಲಿ‌ ನ್ಯಾಯಾಲಯ ಕಪಾಳಮೋಕ್ಷ ಮಾಡಿದೆ.

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರಾದ ಶ್ರೀ Rahul Gandhi  , ಶ್ರೀಮತಿ ಸೋನಿಯಾ ಗಾಂಧಿ ಹಾಗೂ ಇತರ ಐದು ಜನರ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ಸಲ್ಲಿಸಿರುವ ಅಕ್ರಮ ಹಣ ವರ್ಗಾವಣೆ ಆರೋಪಪಟ್ಟಿಯನ್ನು ಪರಿಗಣಿಸಲು ದೆಹಲಿ ನ್ಯಾಯಾಲಯ ನಿರಾಕರಿಸಿದ್ದು ಮಾತ್ರವಲ್ಲ, ಚಾರ್ಜ್ ಶಿಟ್ ಅನ್ನೇ ಸಂಪೂರ್ಣವಾಗಿ ತಿರಸ್ಕರಿಸಿದೆ.

ಗಾಂಧಿ ಕುಟುಂಬದ ಮೇಲೆ “ಮೋ-ಶಾ” ಜೋಡಿ ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದಲ್ಲಿ ಮಾಡಿರುವ ಸುಳ್ಳು ಆರೋಪಗಳಿಗೆ ನ್ಯಾಯಾಲಯವೇ ತಕ್ಕ ಉತ್ತರ ಕೊಟ್ಟಿದೆ.  ಬೆದರಿಕೆ, ಕಿರುಕುಳ, ಸೇಡಿನ ಅತ್ಯಂತ ಹೀನ ರಾಜಕಾರಣ ಮಾಡಿದ ಮೋ-ಶಾ ಜೋಡಿಗೆ ಇದೇ ಪ್ರಕರಣದಲ್ಲಿ ಕೋರ್ಟ್ ನೀಡಿರುವ ಒಂದೊಂದು ಹೇಳಿಕೆಗಳು ಕಪಾಳಮೋಕ್ಷವಾಗಿದೆ.

ಸ್ವತಂತ್ರ ಚಳುವಳಿಯಲ್ಲಿ‌ ಮಹತ್ತರ ಪಾತ್ರವಹಿಸಿದ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಮೇಲೆ ಆಧಾರ ರಹಿತ ಆರೋಪ ಮಾಡಿರುವ @BJP4India ಪಕ್ಷ ಮತ್ತು ನರೇಂದ್ರ‌ ಮೋದಿ ಸರ್ಕಾರ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು. ಸೇಡಿನ ರಾಜಕೀಯವನ್ನು ಮುಂದುವರೆಸುತ್ತಲೇ ಬರುತ್ತಿರುವ ಮೋ-ಶಾಗಳಿಗೆ ನ್ಯಾಯಲಯ ಪಾಠ ಕಲಿಸಿದೆ, ಮುಂದೆ ಜನರೇ ತಕ್ಕ ಶಾಸ್ತಿ ಮಾಡಲಿದ್ದಾರೆ.

– ಬಿ ಕೆ ಹರಿಪ್ರಸಾದ್, ವಿಧಾನ ಪರಿಷತ್ ಸದಸ್ಯ

Leave a Reply