ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರ ಮುಷ್ಕರ

3 years ago

ಬೆಂಗಳೂರು: ನಮ್ಮನ್ನು ಸರ್ಕಾರಿ ನೌಕರರು ಎಂದು ಘೋಷಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮತ್ತೆ ಮುಷ್ಕರ ಹೂಡಲು ಸಾರಿಗೆ ನೌಕರರು ಸಿದ್ದವಾಗಿದ್ದಾರೆ.

ಈ ಹಿಂದೆ ತಮ್ಮ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದ ಸರ್ಕಾರ  ಮಾತು ತಪ್ಪಿದೆ ಎಂದು ಆರೋಪಿಸಿರುವ ನೌಕರರು ಸರ್ಕಾರದ ವಿರುದ್ಧ ಮುಷ್ಕರದ ಅಸ್ತ್ರ ಪ್ರಯೋಗಿಸಲು ತೀರ್ಮಾನಿಸಿದ್ದಾರೆ.

ಆರನೇ ವೇತನ ಆಯೋಗದ ಮಾದರಿಯಲ್ಲಿ ಶಿಫಾರಸು ಮಾಡಿ ಜಾರಿಗೊಳಿಸದೇ ಇರುವುದು, ವೈದ್ಯಕೀಯ ಸೌಲಭ್ಯಗಳನ್ನು ನೀಡದಿರುವುದು, ವಜಾಗೊಂಡ ನೌಕರರ ಮರು ನೇಮಕ ಮಾಡದೆ ಇರುವುದ, ನಿವೃತ್ತಿ ಆಗಿ 30 ತಿಂಗಳು ಕಳೆದರೂ ಗ್ರಾಚ್ಯೂಟಿ ಹಣ ನೀಡದೆ ಇರುವುದು,ಕೊರೊನಾದಿಂದ ಮೃತಪಟ್ಟ ನೌಕರರ ಕುಟುಂಬಸ್ಥರಿಗೆ ಪರಿಹಾರ ನೀಡದೆ ಇರುವುದು, ಖಾಲಿ ಹುದ್ದೆಗಳ ನೇಮಕಾತಿ ಭರ್ತಿ ಮಾಡದೆ ಇರುವುದು, ಕೆಎಸ್‍ಆರ್ ಟಿಸಿ ಖಾಸಗೀಕರಣಕ್ಕೆ ಸರ್ಕಾರದ ಪ್ಲಾನ್ ಹಾಗೂ ಸಾರಿಗೆ ನೌಕರರ ಹಾಗು ಕುಟುಂಬ ಸದಸ್ಯರ ಮೇಲೆ ಹಾಕಿರೋ ಪೊಲೀಸ್ ಕೇಸ್ ಹಿಂಪಡೆಯದೇ ಇರೋದು ಮುಂತಾದವು ತಮ್ಮ ಪ್ರಮುಖ ಬೇಡಿಕೆಯಾಗಿದೆ ಎಂದು ಹೇಳಿದ್ದಾರೆ.

ಇವುಗಳನ್ನು ಈಡೇರಿಸುವುದಾಗಿ ಕೊಟ್ಟ ಮಾತು ತಪ್ಪಿರುವ ಸರ್ಕಾರದ ನಿರ್ಲಕ್ಷ್ಯ ಧೋರಣೆ ಖಂಡಿಸಿ ರಾಜ್ಯ ವ್ಯಾಪಿ ಮುಷ್ಕರ ನಡೆಸುವುದಾಗಿ ಕೆಎಸ್ಆರ್‌ಟಿಸಿ ಸಾರಿಗೆ ನೌಕರರ ಸಂಘಟನೆ ಮುಖಂಡರು ತಿಳಿಸಿದ್ದಾರೆ.

Leave a Reply