EWS ಮೂಲಕ ಪ್ರತಿಕ್ರಾಂತಿ ಮುಂದುವರಿಯುತ್ತಿದೆ

2 years ago

ಯುಪಿಎಸ್ ಸಿ ಪರೀಕ್ಷೆಯ ಅಂತಿಮ ಫಲಿತಾಂಶ ಪ್ರಕಟಗೊಂಡಿದೆ. ಅದರ ವಿವರಗಳನ್ನು ಒಳಗೊಂಡ ಪಟ್ಟಿಯ ವರದಿಯನ್ನು ಸಹ ಪೋಸ್ಟ್ ಮಾಡಿದ್ದೇನೆ.

ಇದರ ಪ್ರಕಾರ ews ಅಡಿಯಲ್ಲಿ 115 ಅಭ್ಯರ್ಥಿಗಳು ಆಯ್ಕೆಯಾಗಿದ್ದರೆ, 303 ಓಬಿಸಿ, 165 ಪ. ಜಾತಿ, 86 ಪ. ಪಂಗಡದ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಇದು ಸಾಮಾಜಿಕ ನ್ಯಾಯದ ಹಿನ್ನಡೆ. ಘೋರ ದುರಂತ.

ಸಾಮಾಜಿಕ ಅಸಮಾನತೆಯ, ಕರಾಳ ews ವಿರುದ್ಧ ಸಾಮಾಜಿಕ ಸಂಘಟನೆಗಳು ಮತ್ತು ಚಿಂತಕರು ಯಾವುದೇ ಬಗೆಯ ಜನಾಂದೋಲನ ರೂಪಿಸಲು ವಿಫಲರಾದ ಕಾರಣದಿಂದ ಈಗ ews ಮೂಲಕ ಪ್ರತಿಕ್ರಾಂತಿ ಮುಂದುವರಿಯುತ್ತಿದೆ. ಮತ್ತೊಮ್ಮೆ ಶತಮಾನಗಳಿಂದ ಎಲ್ಲವನ್ನೂ ಪಡೆದುಕೊಂಡ ಬ್ರಾಹ್ಮಣರಿಗೆ ಮೀಸಲಾತಿ ಕೊಡುವುದರ ಮೂಲಕ ಚಾತುರ್ವರ್ಣ ವ್ಯವಸ್ಥೆ ಜಾರಿಗೊಳ್ಳುತ್ತಿದೆ.

ಮತ್ತೊಂದು ಪಟ್ಟಿಯಲ್ಲಿ ನೇಮಕಾತಿ ಮಾಡಿಕೊಳ್ಳಬೇಕಾದ ಹುದ್ದೆಗಳ ವಿವರಗಳಿದೆ. ಇದರ ಪ್ರಕಾರ, ಐಎಎಸ್ ಹುದ್ದೆಗಳಿಗೆ ews ನವರಿಗೆ 17 ಹುದ್ದೆಗಳು, ಪರಿಶಿಷ್ಟ ಜಾತಿ ಸಮುದಾಯಕ್ಕೆ 27, ಪರಿಶಿಷ್ಟ ಪಂಗಡದವರಿಗೆ 14 ಹುದ್ದೆಗಳು, ಓಬಿಸಿಗೆ 49 ಹುದ್ದೆಗಳು ಮತ್ತು ಸಾಮಾನ್ಯ ಕೆಟಗರಿಯಲ್ಲಿ 73 ಹುದ್ದೆಗಳು ಮೀಸಲಿಡಲಾಗಿದೆ. ಇತರೇ ವಿಭಾಗದ ವಿವರಗಳು  ಸಹ ಲಭ್ಯವಿದೆ.

ನಮ್ಮ ಕಣ್ಣೆದುರಿಗೆ ಸಾಮಾಜಿಕ ನ್ಯಾಯ ಕೊನೆಗೊಳ್ಳುತ್ತಿದೆ. ಇಂತಹ ದುರಂತಕ್ಕೆ ನಾವೆಲ್ಲರೂ ಸಾಕ್ಷಿಯಾಗಿದ್ದೇವೆ ಎನ್ನುವುದು ಎಂತಹ ನಾಚಿಗ್ಗೇಡುತನ? ಮುಂದೇನು ಒಡನಾಡಿಗಳೇ?

– ಬಿ. ಶ್ರೀಪಾದ ಭಟ್, ಸಾಮಾಜಿಕ ಹೋರಾಟಗಾರರು

Leave a Reply