ಕರ್ನಾಟಕ ರಾಜಕಾರಣದಲ್ಲಿ ಸಾಹಿತ್ಯ, ಸಂಸ್ಕೃತಿ, ಕಲೆಗಳಿಗೆ ಬೆಲೆ ನೀಡಿದ ಎಂಪಿ ಪ್ರಕಾಶ್
ರಾಜಕಾರಣಿಗಳು ಸಾಮಾನ್ಯವಾಗಿ ಪುಸ್ತಕಗಳನ್ನು ಓದುವುದು, ಸಂಗೀತವನ್ನು ಕೇಳುವುದು, ನಾಟಕಗಳನ್ನು ನೋಡುವುದು ಹಾಗೂ ವಿಚಾರ ಸಂಕೀರ್ಣಗಳಲ್ಲಿ ಪಾಲ್ಗೊಳ್ಳುವುದು ಅಪರೂಪವಾಗಿರುತ್ತದೆ. ಬಹಳಷ್ಟು ರಾಜಕಾರಣಿಗಳಿಗೆ ತಮ್ಮ ಕಾರ್ಯದ ನಡುವೆ ಬಿಡುವು ಸಿಗುವುದಿಲ್ಲ.
