ಬೆಂಗಳೂರು: ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯ ಕ್ರೀಡಾಂಗಣದಲ್ಲಿ ಪಿನಾಕಲ್ ಗ್ರೂಪ್ ಆಫ್ ಇನ್ಸಿಟ್ಯೂಟ್ ಮತ್ತು ಪಿನಾಕಲ್ ಇನ್ಸಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಆಂಡ್ ಸೈನ್ಸ್ ಹಾಗೂ ಮಹೇಶ್ ಪಿ.ಯು.ಕಾಲೇಜು ವತಿಯಿಂದ ಎರಡು ದಿನಗಳ ಕಾಲ ವಾರ್ಷಿಕ ಕ್ರೀಡಾಕೂಟ-2023 ಆಯೋಜಿಸಲಾಗಿತ್ತು.

ಈ ವೇಳೆ ಮಾತಾಡಿದ, ಸಿ.ಎಂ.ರಾಜಪ್ಪ, ಶಿಕ್ಷಣದ ಜೊತೆಯಲ್ಲಿ ವಿದ್ಯಾರ್ಥಿಗಳಿಗೆ ಕ್ರೀಡಾ ಚಟುವಟಿಕೆಗಳು ಮುಖ್ಯ. ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸುವುದರಿಂದ ಮಾನಸಿಕ, ದೈಹಿಕವಾಗಿ ಸಧೃಡವಾಗಿ ಇರುತ್ತಾರೆ. ಆದ್ದದರಿಂದ ನಮ್ಮ ಕಾಲೇಜಿನಲ್ಲಿ ಕಾಲೇಜ್ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಕ್ರೀಡಾ ಚಟುವಟಿಕೆಗಳಿಗೆ ಆಡಳಿತ ಮಂಡಳಿ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.

ಕ್ರೀಡಾ ಸೌಲಭ್ಯಗಳು ದೊರಕಿದರೆ ಸಾಧನೆ ಮಾಡಲು ಸಾಧ್ಯ. ದೈಹಿಕವಾಗಿ ಸಾಮ್ಯರ್ಥವಿದ್ದಾಗ ಯೋಚನೆ, ಅಲೋಚನೆ ಮಾಡಿ ಜೀವನದಲ್ಲಿ ಸಾಧನೆ ಮಾಡಬಹುದು. ಶಿಸ್ತು, ಸಂಯಮದಿಂದ ವಿದ್ಯಾರ್ಥಿಗಳು ಪಾಲಿಸಬೇಕು. ಶಿಕ್ಷಕರು ಹೇಳಿ ಕೊಡುವ ಪಾಠ ಆಲಿಸಬೇಕು, ವಿದ್ಯೆ ಕಲಿತ ನಂತರ ಜೀವನದಲ್ಲಿ ಉತ್ತಮ ನಾಗರಿಕರಾಗಿ ಮುಂದೆ ಬರಲು ಸಾಧ್ಯ ಎಂದರು.

ಪ್ರಧಾನ ವ್ಯವಸ್ಥಾಪಕಿ ರೀತೂ ಎ.ಪಾಟಕ್, ರಾಷ್ಟ್ರೀಯ ಕ್ರೀಡಾಪಟು ಜುನೇದ್, ಜಂಟಿ ಕಾರ್ಯದರ್ಶಿ ಕೆ.ಎಸ್.ಆರ್.ಎ.ಮುತ್ತುರಾಯ ರೆಡ್ಡಿ, ಪ್ರಾಂಶುಪಾಲ ಜಿ.ಎಲ್.ಕುಮಾರಪ್ಪ ಮೊದಲಾದವರು ಹಾಜರಿದ್ದರು. ಕ್ರೀಡಾಕೂಟದಲ್ಲಿ ರನ್ನಿಂಗ್ ರೇಸ್ , ರಿಲೇ, ಹೈಜಂಪ್ ವಿವಿಧ ಕ್ರೀಡೆಗಳು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.





