ದೆಹಲಿ: ಹೆತ್ತ ತಾಯಿಯನ್ನೇ ಮಗ ಗುಂಡಿಟ್ಟು ಕೊಲ್ಲಲು ಯತ್ನಿಸಿದ ಅಮಾನವೀಯ ಘಟನೆ ದೆಹಲಿ ಹೊರವಲಯದ ಮುಂಡಕಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಗುಂಡಿನ ದಾಳಿ ವೇಳೆ ರೋಹಿಣಿ (55) ಗಂಭೀರವಾಗಿ ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ರೋಹಿಣಿ ಪುತ್ರ ಸಂದೀಪ್ (30) ಗುಂಡಿನ ದಾಳಿ ನಡೆಸಿ ನಾಪತ್ತೆಯಾಗಿದ್ದಾನೆ ಎಂದು ಡಿಸಿಪಿ ಪರ್ವಿಂದರ್ ಸಿಂಗ್ ಮಾಹಿತಿ ನೀಡಿದ್ದಾರೆ. ನಿರುದ್ಯೋಗಿಯಾಗಿದ್ದ ಸಂದೀಪ್ ನಿನ್ನೆ ರಾತ್ರಿ ತಾಯಿ ಜೊತೆಗೆ ಹಣಕಾಸಿನ ವಿಷಯಕ್ಕೆ ಜಗಳವಾಡಿದ್ದಾನೆ. ಜಗಳ ತಾರಕ್ಕೇರಿ ಅನಾಹುತಕಾರಿ ನಿರ್ಧಾರ ಕೈಗೊಂಡು ಗುಂಡುಹಾರಿಸಿ ನಾಪತ್ತೆಯಾಗಿದ್ದಾನೆ.



