ಬೆಂಗಳೂರು: “ಜಟ್ಟಿ ಕೆಳಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ” ಎಂಬಂತೆ ಸಿಎಂ @siddaramaiah ನವರು ಅಪರೂಪಕ್ಕೆ ಒಮ್ಮೊಮ್ಮೆ ತಮ್ಮ ಪ್ರಗಾಢ ನಿದ್ದೆಯಿಂದ ಎದ್ದು ತಮ್ಮ ಅಹಂಕಾರ, ದರ್ಪ ಪ್ರದರ್ಶನ ಮಾಡುತ್ತಿರುತ್ತಾರೆ ಎಂದು ಪಕ್ಷ ನಾಯಕ ಆರ್ ಅಶೋಕ ಹೇಳಿದ್ದಾರೆ.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಸಾಮಾಜಿಕ ಜಾಲತಾಣಗಳಲ್ಲಿ ತಾವು ನೀಡುತ್ತಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿರುವ ಅವರು, ಗ್ಯಾರೆಂಟಿಗಳು ಸೋತಿದೆ, ಗ್ಯಾರೆಂಟಿಗಳು ನಮಗೆ ಮತ ತಂದು ಕೊಟ್ಟಿಲ್ಲ, ಗ್ಯಾರೆಂಟಿಗಳ ಬಗ್ಗೆ ಪರಾಮರ್ಶೆ ಮಾಡಬೇಕು ಎಂದು ಹೇಳುತ್ತಿರುವುದು ನಾನಲ್ಲ ಸಿದ್ದರಾಮಯ್ಯನವರೇ, ನಿಮ್ಮ ಸಚಿವರುಗಳು, ಶಾಸಕರುಗಳೇ ಗ್ಯಾರೆಂಟಿಗಳ ಬಗ್ಗೆ ಅಪಸ್ವರ ಎತ್ತುತ್ತಿದ್ದಾರೆ ಎಂದಿದ್ದಾರೆ.
ಇಡೀ ದೇಶದಲ್ಲಿ 40 ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಸುಳ್ಳು, ಅಪಪ್ರಚಾರ ಮಾಡಿದರೂ ಬಿಜೆಪಿ ತನ್ನ ಸ್ವಂತ ಬಲದ ಮೇಲೆ ಪಡೆದಷ್ಟು ಸೀಟುಗಳನ್ನೂ INDI ಮೈತ್ರಿಕೂಟ ಪಡೆಯಲಾಗಲಿಲ್ಲ. ರಾಹುಲ್ ಗಾಂಧಿ ಅವರನ್ನು ಎಷ್ಟು ಬಾರಿ ರೀಲಾಂಚ್ ಮಾಡಿದರೂ ಕಾಂಗ್ರೆಸ್ ತಕ್ಕಡಿ ಎರಡಂಕಿ ದಾಟಲಿಲ್ಲ. ಈಗ ಹೇಳಿ ಸೋತಿದ್ದು ಯಾರು ಗೆದಿದ್ದು ಯಾರು? ಹಿಂದು ಪ್ರಶ್ನೆಸಿದ್ದಾರೆ.
ಇನ್ನು ರಾಜ್ಯದ ವಿಚಾರಕ್ಕೆ ಬರೋಣ. ರಾಜ್ಯದ 154 ವಿಧಾನಸಭಾ ಕ್ಷೇತ್ರಗಳಲ್ಲಿ ಎನ್ ಡಿಎ ಮೈತ್ರಿಕೂಟಕ್ಕೆ ಮುನ್ನಡೆ ಸಿಕ್ಕಿದೆ. 17 ಸಂಪುಟ ಸಚಿವರ ತಮ್ಮ ಸ್ವಂತ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಲೀಡ್ ಕೊಡಿಸಲು ವಿಫಲರಾಗಿದ್ದಾರೆ. ಸಚಿವರ ಮಕ್ಕಳು, ತಮ್ಮಂದಿರು, ಕುಟುಂಬ ಸದಸ್ಯರು ಸೋತಿದ್ದಾರೆ. ಈಗ ಹೇಳಿ ಸೋತಿದ್ದು ಯಾರು, ಗೆದ್ದಿದ್ದು ಯಾರು? ಎಂದು ಕೇಳಿದ್ದಾರೆ.
ಕಾಂಗ್ರೆಸ್ ಪಕ್ಷ ಗೆದ್ದರೆ ಇವಿಎಂ ಸರಿಯಿದೆ. ಕಾಂಗ್ರೆಸ್ ಪಕ್ಷ ಸೋತರೆ ಇವಿಎಂ ಸರಿಯಿಲ್ಲ. ಇದು ನಿಮ್ಮ ಕಾಂಗ್ರೆಸ್ ಪಕ್ಷದ ಗೋಸುಂಬೆ ರಾಜಕಾರಣ. ಶತಾಯ ಗತಾಯ ಹೇಗಾದರೂ ಮಾಡಿ ಗೆಲ್ಲಲೇಬೇಕು ಎಂದು ನೀವು ನೀಡಿದ ಸುಳ್ಳು ಭರವಸೆಗಳಿಂದ ದೇಶಾದ್ಯಂತ ಹೆಣ್ಣುಮಕ್ಕಳ ನಿಮ್ಮ ಪಕ್ಷಕ್ಕೆ ಹೇಗೆ ಶಾಪ ಹಾಕುತ್ತಿದ್ದಾರೆ ಎಂದು ಇಡೀ ದೇಶವೇ ನೋಡುತ್ತಿದೆ ಎಂದಿದ್ದಾರೆ.
ಕಾಂಗ್ರೆಸ್ ಪಕ್ಷ ಚುನಾವಣೆಗೆ ಹೋಗಿದ್ದು ಮೋದಿ ಅವರನ್ನು ಸೋಲಿಸಲು. ಎನ್ ಡಿಎ ಚುನಾವಣೆಗೆ ಹೋಗಿದ್ದು ದೇಶವನ್ನ ಗೆಲ್ಲಿಸಲು. ಆದ್ದರಿಂದ ದೇಶ ಗೆದ್ದಿದೆ, INDI ಸೋತಿದೆ ಎಂದಿದ್ದಾರೆ.
ಗ್ಯಾರೆಂಟಿಗಳ ಬಗ್ಗೆ ಬೇಸರ, ಸಿಟ್ಟು, ಅನುಮಾನ ಇವೆಲ್ಲಾ ಇರುವುದು ನಮಗಲ್ಲ, ನಿಮ್ಮ ಸಚಿವರಿಗೆ ಮತ್ತು ನಿಮ್ಮ @inckarnataka ಶಾಸಕರಿಗೆ ಎಂದಿದ್ದಾರೆ.




