ಬೆಳಗಾವಿ: ದಿಟ್ಟ ಮಹಿಳೆಯಾದ ಸಾವಿತ್ರಿಬಾಯಿ ಫುಲೆ ಜನಿಸದೇ ಇದ್ದಿದ್ದರೆ ಮಹಿಳೆಯರು ಶಿಕ್ಷಣ ಪಡೆಯಲು ವಿಳಂಬವಾಗುತ್ತಿತ್ತು. ಅವರ ಹೋರಾಟದಿಂದ ಈಗ ಮಹಿಳೆಯರು ಎಲ್ಲ ಕ್ಷೇತ್ರದಲ್ಲೂ ಬಂದಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.
ಯಮಕನಮರಡಿಯ ಶ್ರೀಗುರುಸಿದ್ಧ ಸ್ವಾಮಿಜೀ ಹುನಸಿಕೊಳ್ಳಮಠ ಸಭಾಭವನದಲ್ಲಿ ನಡೆದ ಅರಿವಿನ ತಾಯಿಗೆ ನಮನ, ಸಾವಿತ್ರಿಬಾಯಿ ಫುಲೆ ಜಯಂತೋತ್ಸವ ಮತ್ತು ಭೀಮಾ ಕೋರೆಗಾಂವ ವಿಜಯೋತ್ಸವದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತಾಡಿದ ಅವರು, ಸಾವಿತ್ರಿಬಾಯಿ ಯಾವುದೇ ಜಾತಿಗೆ ಸೀಮಿತವಾದವರಲ್ಲ. ಅವರು ಇಡೀ ಭಾರತದ ನಾಯಕಿ ಎಂದರು.
ಜೇವರ್ಗಿಯ ಗುರುಪೀಠ ಚಿಗರಹಳ್ಳಿಯ ಸಿದ್ದಬಸವ ಕಬೀರ ಸ್ವಾಮೀಜಿ ಶ್ರೀ ಜಗದ್ಗುರು ಮರಳುಶಂಕರ ದೇವರು, ಕಲಬುರಗಿಯ ಖ್ಯಾತ ಬರಹಗಾರ ವಿಠ್ಠಲ ವಗ್ಗನವರ ಮೊದಲಾದವರು ಹಾಜರಿದ್ದರು.




