ಸುದೀಪ್ ಚಲನಚಿತ್ರ, ಜಾಹೀರಾತು, ಟಿವಿ ಶೋ ನಿಯಂತ್ರಿಸುವಂತೆ ಮನವಿ
ಗೆ.
ಮಾನ್ಯ ಚುನಾವಣಾ ಆಯುಕ್ತರು,
ಚುನಾವಣಾ ಆಯೋಗ.
ಬೆಂಗಳೂರು.
ಇಂದ.
ಕೆ.ಪಿ.ಶ್ರೀಪಾಲ. Sripal Kp
ವಕೀಲರು, ರೇಣುಕಾಂಭ ಸಂಕೀರ್ಣ, 3ನೇ ತಿರುವು,
ದುರ್ಗಿಗುಡಿ ಶಿವಮೊಗ್ಗ.
,ಮೋ.9448329757.
ಮಾನ್ಯರೆ,
ವಿಷಯ: ನೀತಿ ಸಂಹಿತೆ ಅನುಸಾರ ಮಾನ್ಯ ಕಿಚ್ವ ಸುದೀಪ್ ಇವರ ಚಲನಚಿತ್ರಗಳನ್ನು , ಟಿ.ವಿ.ಶೋಗಳನ್ನು ಮತ್ತು ಅವರು ಇರುವ ಜಾಹಿರಾತುಗಳನ್ನು ಚುನಾವಣೆ ಮುಗಿಯುವ ವರೆಗೂ ತಡೆ ಹಿಡಿಯುವಂತೆ.
************
ಈ ಮೇಲ್ಕಂಡ ವಿಷಯಕ್ಕೆ ಸಂಬಂದಿಸಿದಂತೆ, ತಿಳಿಸುವುದೇನೆಂದರೆ,
ಕನ್ನಡದ ಚಲನಚಿತ್ರನಟ ಮಾನ್ಯ ಕಿಚ್ಚ ಸುದೀಪ್ ರವರು ಭಾರತೀಯ ಜನತಾ ಪಕ್ಷದ ಸ್ಟಾರ್ ಪ್ರಚಾರಕರಾಗಿರುವುದರಿಂದ ಚುನಾವಣೆ ಮುಗಿಯುವ ವರೆಗೂ ಅವರ ನಟನೆಯ ಯಾವುದೇ ಚಲನ ಚಿತ್ರಗಳು ಚಿತ್ರ ಮಂದಿರಗಳಲ್ಲಿ ಮತ್ತು ಟಿ.ವಿ.ಗಳಲ್ಲಿ ಪ್ರದರ್ಶನವಾಗದಂತೆ, ಅವರು ನಡೆಸಿಕೊಡುವ ಟಿ.ವಿ.ಶೋಗಳು ಪ್ರಸಾರವಾಗದಂತೆ ಮತ್ತು ಅವರು ನಟಿಸಿರುವ ಜಾಯಿರಾತುಗಳು ಸಹ ಪ್ರಸಾರವಾಗದಂತೆ ಚುನಾವಣಾ ಆಯೋಗ ಕಟ್ಟು ನಿಟ್ಟಿನ ಕ್ರಮಜರುಗಿಸಬೇಕು.
ಅವರು ಒಂದು ರಾಜಕೀಯ ಪಕ್ಷದ ಪರವಾಗಿ ಪ್ರಚಾರಮಾಡುತ್ತಿರುವುದನ್ನು ಅವರೆ ಘೋಷಣೆ ಮಾಡಿದ್ದರಿಂದ ಅವರ ನಟನೆಯ ಚಲನ ಚಿತ್ರಗಳು, ಮತ್ತು ಟಿ.ವಿ.ಶೋಗಳು ಹಾಗೂ ಜಾಹಿರಾತುಗಳು ಮತದಾರರ ಮೇಲೆ ಪ್ರಭಾವ ಬೀರುವುದರಿಂದ ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆ ಆಗಿರುತ್ತದೆ, ಆದ್ದರಿಂದ ತಕ್ಷದಿಂದ ಚುನಾವಣಾ ಆಯೋಗ ಈ ವಿಷಯಕ್ಕೆ ಸಂಬಂದಿಸಿದಂತೆ ತುರ್ತು ಕ್ರಮ ಜರುಗಿಸಬೇಕೆಂದು, ಒಬ್ಬ ಜವಬ್ದಾರಿಯುತ ನಾಗರೀಕನಾಗಿ ಒತ್ತಾಯಿಸುತ್ತಿದ್ದೇನೆ.
ವಂದನೆಗಳೊಂದಿಗೆ.
ಕೆ.ಪಿ.ಶ್ರೀಪಾಲ.
ವಕೀಲರು.
9448329757.
ದಿನಾಂಕ; 5-4-2023.
ಶಿವಮೊಗ್ಗ.
ಪ್ರತಿಗಳು ;
ಜಿಲ್ಲಾಧಿಕಾರಿಗಳು ಶಿವಮೊಗ್ಗ ಜಿಲ್ಲೆ, ಶಿವಮೊಗ್ಗ.




