ಬೆಂಗಳೂರು: ರಾಯಚೂರಿನಲ್ಲಿ ಬಿಜೆಪಿ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದ ಬಿ.ವಿ.ನಾಯಕ್ ನಾಮಪತ್ರ ತಿರಸ್ಕೃತಗೊಂಡಿದೆ. ಬಿಜೆಪಿ ಪಕ್ಷದಿಂದಲೇ ನಾಮಪತ್ರ ಸಲ್ಲಿಸಿದ್ದ ಹಿನ್ನೆಲೆ ತಾಂತ್ರಿಕ ಕಾರಣಗಳಿಂದ ನಾಮಪತ್ರ ತಿರಸ್ಕತವಾಗಿದೆ. ನಾಮಪತ್ರ ಪರಿಷ್ಕರಣೆ ವೇಳೆ ಬಿ.ವಿ.ನಾಯಕ್ ನಾಮಪತ್ರ ತಿರಸ್ಕೃತಗೊಂಡಿದೆ.
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
- ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ
- ಜನಸಹಭಾಗಿತ್ವದೊಂದಿಗೆ ಸ್ವಚ್ಛತಾ ಅಭಿಯಾನಕ್ಕೆ ಸಜ್ಜು
- UPI ಡಿಜಿಟಲ್ ಮೇಲಿನ ಹೆಚ್ಚುವರಿ ಶುಲ್ಕ ಪ್ರಸ್ತಾವನೆ ಹಿಂಪಡೆಯಬೇಕು
- ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬ: ಪೌರ ಕಾರ್ಮಿಕರಿಗೆ ಸನ್ಮಾನ
ಬಿಜೆಪಿಯಿಂದಲೇ ಬಿ.ವಿ.ನಾಯಕ್ ನಾಮಪತ್ರ ಸಲ್ಲಿಸಿದ್ದರಿಂದ ಎ.ಬಿ ಫಾರ್ಮ್ ಇರಲಿಲ್ಲ. ಒಂದು ವೇಳೆ ಫಾರ್ಮ್ ಇಲ್ಲದ ಪಕ್ಷದಲ್ಲಿ 10 ಜನ ಸೂಚಕರು ಇವರ ಪರ ಇರಬೇಕು. ಆದರೆ ಬಿ.ವಿ.ನಾಯಕ್ ಪರ ಒಬ್ಬ ಸೂಚಕ ಮಾತ್ರ ಇದ್ದರು. ಇದೇ ಕಾರಣಕ್ಕೆ ನಾಮಪತ್ರ ತಿರಸ್ಕೃತಗೊಂಡಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಚಂದ್ರಶೇಖರ್ ನಾಯಕ್ ಹೇಳಿದ್ದಾರೆ.
ಬಂಡಾಯ ಅಭ್ಯರ್ಥಿ ಬಿ.ವಿ.ನಾಯಕ್ ನಾಮಪತ್ರ ತಿರಸ್ಕೃತಗೊಂಡಿರುವ ಕಾರಣ, ಬಿಜೆಪಿ ಪಾಳಯ ನಿಟ್ಟುಸಿರು ಬಿಟ್ಟಿದೆ. ಬಿವಿ ನಾಯಕರ ಬಂಡಾಯದಿಂದ ಕ್ಷೇತ್ರದಲ್ಲಿ ನೆಗೆಟಿವ್ ಅಲೆ ಶುರುವಾಗಿತ್ತು. ಆದರೀಗ ನಾಮಪತ್ರ ತಿರಸ್ಕೃತಗೊಂಡಿರುವ ಹಿನ್ನೆಲೆಯಲ್ಲಿ ಬಿಜೆಪಿ ಪಾಳಯಕ್ಕೆ ಮತ್ತಷ್ಟು ಶಕ್ತಿಬಂದಂತಾಗಿದೆ. ಈಗಾಗಲೇ ವರಿಷ್ಠರ ಸಂಧಾನಕ್ಕೆ ಒಪ್ಪಿದ್ದ ಬಿವಿ ನಾಯಕ್ ಇನ್ಮುಂದೆ ಬಿಜೆಪಿ ಪರ ಪ್ರಚಾರಕ್ಕಿಳಿಯುತ್ತಾರೆ ಎಂದು ಬಿಜೆಪಿ ಮೂಲಗಳು ಹೇಳಿವೆ.




