ಪದವಿ, ಉನ್ನತ ಶಿಕ್ಷಣದ ಕತೆ ಮುಗಿಯಿತು, ಈಗ ಶಾಲಾ ಶಿಕ್ಷಣದ ಸರದಿ. ಶಾಲಾ ಹಂತದಲ್ಲಿ ಎನ್ ಇಪಿ 2020 ಜಾರಿಗೊಳಿಸಲು , ಪಠ್ಯಕ್ರಮ ರೂಪಿಸಲು ರಾಜ್ಯ ಶಿಕ್ಷಣ ಇಲಾಖೆಯು 26 ಫೋಕಸ್ ಗ್ರೂಪ್ ರಚಿಸಿ ಸುತ್ತೋಲೆ ಹೊರಡಿಸಿದೆ.
ಬಾಣಂತಿಯರ ಮತ್ತು ಮೂರರಿಂದ ಆರು ವಯಸ್ಸಿನ ಮಕ್ಕಳ ಪೌಷ್ಟಿಕಾಂಶ ಮತ್ತು ರೋಗ ನಿರೋಧ (nutrition & immunisation) ಉದ್ದೇಶವುಳ್ಳ ಅನೌಪಚಾರಿಕ (informal) ಶಿಕ್ಷಣ ವ್ಯವಸ್ಥೆಯ ಅಂಗನವಾಡಿಯನ್ನು ಔಪಚಾರಿಕ ಶಾಲಾ ವ್ಯವಸ್ಥೆಗೆ (formal school system) ಸೇರಿಸಿ ಅದರ ಮೂಲ ಉದ್ದೇಶವನ್ನು ನಾಶ ಮಾಡುವ ಮತ್ತು icds ನ್ನು ಮುಚ್ಚುವ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಭವಿಷ್ಯವೇ ಡೋಲಾಯಮಾನವಾಗಿರುವ ಗುರಿಯುಳ್ಳ ಈ ಎನ್ ಇಪಿ ಕುರಿತು 5, 7, 8 ತರಗತಿಯನ್ನು ಸಾಮಾನ್ಯ ಪರೀಕ್ಷೆ ನಡೆಸಲು ಮತ್ತು ಆ ಮೂಲಕ ಮಕ್ಕಳನ್ನು ಶಿಕ್ಷಣದಿಂದ ಹೊರದೂಡುವ ಡಿಸೈನ್ ಇರುವ ಎನ್ ಇಪಿ ಕುರಿತು
18 ವಯಸ್ಸಿನವರೆಗೆ ಮಕ್ಕಳು ಭಾಷೆ, ಸಾಹಿತ್ಯ, ಸಮಾಜ, ವಿಜ್ಞಾನ, ಗಣಿತ ಒಳಗೊಂಡ ಶಿಕ್ಷಣ ಪಡೆಯಬೇಕೆಂಬ ವೈಜ್ಞಾನಿಕ ನೀತಿಯನ್ನು ಬುಡಮೇಲುಗೊಳಿಸಿ 6ನೇ ತರಗತಿಯಿಂದಲೇ (12ನೇ ವಯಸ್ಸು) ವೃತ್ತಿಪರ ಶಿಕ್ಷಣ (vocational training) ಕೊಡಲು ಮುಂದಾಗಿರುವ ಮತ್ತು ನೇರವಾಗಿ ಬಾಲ ಕಾರ್ಮಿಕ ಪದ್ದತಿಗೆ ಕಾರಣವಾಗುವ ಎನ್ ಇಪಿ ಕುರಿತು
ಮಕ್ಕಳು ಶಿಕ್ಷಣದ ಸಹ ನಿರ್ಮಾತೃಗಳು (co constructers) ಎಂದು ಹೇಳಿದ ಫ್ರೌರೆಯ ಆಶಯವನ್ನು, ‘ಮಕ್ಕಳ ಮೆದುಳು ಧಾನ್ಯ ತುಂಬುವ ಗೋಣಿಚೀಲವಲ್ಲ, ಧಾನ್ಯ ಬೆಳೆಯುವ ಗದ್ದೆಯಾಗಬೇಕು’ ಎಂದು ಆಶಿಸಿದ ಕುವೆಂಪು ವಿಚಾರವನ್ನು ಸುಳ್ಳು ಮಾಡಿ ಮಕ್ಕಳನ್ನು ಕೇವಲ ಯಂತ್ರಗಳ ಮಟ್ಟಕ್ಕಿಳಿಸುವ ಎನ್ ಇಪಿ ಕುರಿತು ಶಾಲಾ ಶಿಕ್ಷಣದಲ್ಲಿರುವ ಮಹಾ ಅಸಮಾನತೆ, ರಾಜ್ಯ ಪಠ್ಯಕ್ರಮ, ಸಿಬಿಎಸ್ ಸಿ, ಐಸಿಎಸ್ ಸಿ, ಸರಕಾರಿ ಶಾಲೆ, ಅನುದಾನಿತ ಶಾಲೆ, ಖಾಸಗಿ ಶಾಲೆ ಇತ್ಯಾದಿ ತರತಮಗಳ ಕುರಿತು ಮೌನವಾಗಿರುವ ಎನ್ ಇಪಿ ಕುರಿತು
ಇತ್ಯಾದಿ, ಇತ್ಯಾದಿ…
ಶಿಕ್ಷಣದ ಭಾಗೀದಾರರಾದ ಪೋಷಕರು, ಶಿಕ್ಷಕರು, ಎಸ್ ಡಿಎಂಸಿ, ಸ್ಥಳೀಯ ಸಂಸ್ಥೆಗಳು ಮುಂತಾದವರಿಗೆ ಎನ್ ಇ ಪಿ ಕುರಿತು ಪ್ರಾಥಮಿಕ ಮಾಹಿತಿಯೂ ಗೊತ್ತಿಲ್ಲ. ಆದರೆ ಹಠದಿಂದ ಜಾರಿಗೊಳಿಸಲು ಮುಂದಾಗಿದೆ ಸರಕಾರ.
ಹೇಳಲು ಮತ್ತೇನಿಲ್ಲ…
Turning and turning in the widening gyre
The falcon cannot hear the falconer;
Things fall apart; the centre cannot hold;
Mere anarchy is loosed upon the world,
The blood-dimmed tide is loosed, and everywhere
The ceremony of innocence is drowned;
The best lack all conviction,
while the worst
Are full of passionate intensity.
— w.b.yeats
– ಶ್ರೀಪಾದ ಭಟ್, ಸಾಮಾಜಿಕ ಹೋರಾಟಗಾರ




