ದೇಶದಲ್ಲಿ ಇಷ್ಟು ದಿನ ವಾತಾವರಣ ಹೇಗಿತ್ತು? ಬಿಜೆಪಿ ಕನಿಷ್ಠ 50 ಸೀಟು ಕಳೆದುಕೊಂಡು 250ಕ್ಕೆ ಕುಸಿಯಬಹುದು; ಎನ್ ಡಿ ಎ ಒಕ್ಕೂಟ ಇಡಿಯಾಗಿ ಸರಳ ಬಹುಮತದ ಆಸುಪಾಸಿಗೆ ತಲುಪಲು ಏದುಸಿರು ಬಿಡಬಹುದು ಅನ್ನೋ ಲೆಕ್ಕಾಚಾರಗಳಿದ್ದವು ಮತ್ತು ಅವು ಸತ್ಯಕ್ಕೆ ಹತ್ತಿರವಾಗಿದ್ದವು.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಅಂಥಾ ಸಮಯದಲ್ಲಿ ಬಿಜೆಪಿ ಇವಿಎಂಗಳ ನೆರವಿನಿಂದ 290 ಅಥವಾ 300 ಸೀಟು ಗಳಿಸಿದ್ದರೆ ನಾವೆಲ್ಲ ಏನು ಮಾಡುತ್ತಿದ್ದೆವು? ಬಿಜೆಪಿ ಚುನಾವಣಾ ಅಕ್ರಮ ನಡೆಸಿದೆ, ಆಯೋಗವನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ಆರೋಪಿಸುತ್ತಿದ್ದೆವು. ಅಂಥಾ ಆರೋಪಕ್ಕೆ ಬಿಜೆಪಿ ಅರ್ಹವೂ ಆಗಿರುತ್ತಿತ್ತು. ಬಿಜೆಪಿ ವಿರುದ್ಧ ಒಂದು ಜನಾಭಿಪ್ರಾಯ ಭುಗಿಲೇಳುತ್ತಿತ್ತು.
ಆದರೆ ಈಗ ಎಕ್ಸಿಟ್ ಪೋಲುಗಳು, ಬಿಜೆಪಿಯ 250ರ ಸತ್ಯದ ಸಾಮರ್ಥ್ಯವನ್ನು 350-400ರ ಮಿಥ್ಯದ ಗಡಿ ತಲುಪಿಸಿವೆ. ಈಗ ಬಿಜೆಪಿ ಅದೇ ಇವಿಎಂ ತಂತ್ರಗಾರಿಕೆಯಿಂದ ಅದೇ 290-300 ಸೀಟು ಗಳಿಸಿತು ಎಂದಿಟ್ಟುಕೊಳ್ಳಿ. ಆಗ ನಾವೆಲ್ಲ ಎಕ್ಸಿಟ್ ಪೋಲುಗಳ ಲೋಪದ ವಿರುದ್ಧ ತಿರುಗಿಬೀಳುತ್ತೇವೆ. ಅವುಗಳ ಸುಳ್ಳುಕೋರತನವನ್ನು ಆಡಿಕೊಳ್ಳುತ್ತಲೇ, ಬಿಜೆಪಿ 300ಕ್ಕೆ ಸೀಮಿತವಾದ ನೆಮ್ಮದಿ ಕಂಡುಕೊಳ್ಳುತ್ತೇವೆ. ಬಿಜೆಪಿಯ ಚುನಾವಣಾ ಅಕ್ರಮದ ಬಗ್ಗೆ ನಾವೂ ಮಾತನಾಡುವುದಿಲ್ಲ, ಜನರೂ ತಲೆ ಕೆಡಿಸಿಕೊಳ್ಳುವುದಿಲ್ಲ.
ಇದೊಂಥರಾ ಪೆಟ್ರೋಲ್ ಡೀಸೆಲ್ ರೇಟನ್ನು ದಿಢೀರ್ 25 ರೂಪಾಯಿ ಹೆಚ್ಚಿಸಿ, ಆಮೇಲೆ 15 ರೂಪಾಯಿ ಇಳಿಸಿ, ತಾನಂದುಕೊಂಡ 10 ರೂಪಾಯಿಯ ಲಾಭವನ್ನು ಯಾವ ತಕರಾರೂ ಇಲ್ಲದೆ ಸಾಧಿಸಿಕೊಂಡಂತೆ. 15 ರೂಪಾಯಿಯ ಕುಸಿತದ ಬಗ್ಗೆ ನಾವೆಲ್ಲ ನೆಮ್ಮದಿ ಕಾಣುತ್ತೇವೆಯೆ ವಿನಾ ಹೊರೆಯಾದ 10 ರೂಪಾಯಿ ದೊಡ್ಡದೆನಿಸದು…
ಬಿಜೆಪಿಯ ಅಕ್ರಮವನ್ನು ಮುಚ್ಚಿಹಾಕಲು ಎಕ್ಸಿಟ್ ಪೋಲುಗಳು ಮಾಡುತ್ತಿರೋದು ಇದೇ ಕೆಲಸವನ್ನು.
ಈಗ ಯೋಚಿಸಿ, ನಾವು ಸಿದ್ದರಾಗಬೇಕಿರುವ ಸಂಗತಿಗಳು ಬೇರೆಯದೆ ಇದೆ, ಈ ಎಕ್ಸಿಟ್ ಪೋಲುಗಳಲ್ಲ…
– ವಿಶ್ವಾರಾಧ್ಯ ಕನ್ನಿಗಾನಳ್ಳಿ




