ಸರ್ಕಾರ ಯಾರ ರಕ್ಷಕ ಎಂಬುದು ಜನರಿಗೆ ಮನವರಿಕೆಯಾಗುತ್ತದೆ: ವಿಜಯೇಂದ್ರ

1 year ago

ಭದ್ರಾವತಿಯ ಘಟನೆ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಬದುಕುತ್ತಿರುವ ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ. ಕರ್ತವ್ಯ ನಿರತ ಮಹಿಳಾ ಅಧಿಕಾರಿಯೊಬ್ಬರ ಮೇಲೆ ಶಾಸಕರ ಪುತ್ರನೆಂಬ ಅಹಂಕಾರದಿಂದ ಅವಾಚ್ಯ ಶಬ್ದಗಳನ್ನು ಬಳಸಿ ಬೆದರಿಕೆ ಹಾಕಿರುವುದು ಭದ್ರಾವತಿ ಗೂಂಡಾಗಿರಿಯಲ್ಲಿ ನಲುಗುತ್ತಿರುವುದನ್ನು ಸಾಕ್ಷೀಕರಿಸಿದೆ.

ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಸ್ತ್ರೀಕುಲದ ಮೇಲೆ ನಡೆಯುತ್ತಿರುವ ದೌರ್ಜನ್ಯ ಒಂದು ಕಡೆಯಾದರೆ, ಸರ್ಕಾರದ ಮಹಿಳಾ ಅಧಿಕಾರಿ/ಸಿಬ್ಬಂದಿಗಳಿಗೂ ಯಾವ ರಕ್ಷಣೆಯೂ ಇಲ್ಲ ಎನ್ನುವುದಕ್ಕೆ ನಿನ್ನೆಯ ಘಟನೆ ಕನ್ನಡಿ ಹಿಡಿದಿದೆ, ಭದ್ರಾವತಿಯ ಗುಂಡಾಗಿರಿ ಆಡಳಿತ ಸಮರ್ಥಿಸುವ ರೀತಿಯಲ್ಲಿ ಸರ್ಕಾರ ಈವರೆಗೂ ಶಾಸಕರ ಪುತ್ರನ ವಿರುದ್ಧ ಯಾವುದೇ ಕ್ರಮ ಜರುಗಿಸದೇ ಇರುವುದನ್ನು ಗಮನಿಸಿದರೆ  ಈ ಸರ್ಕಾರ ಯಾರ ರಕ್ಷಕ ಎಂಬುದು ಜನರಿಗೆ ಮನವರಿಕೆಯಾಗುತ್ತದೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಿಗೆ ಅಪಮಾನವಾಯಿತೆಂದು ನಮ್ಮ ಪಕ್ಷದ ಶಾಸಕರ ವಿರುದ್ಧ ಕ್ಷಣಮಾತ್ರದಲ್ಲಿ ನಿಯಮ ಮೀರಿ ಕ್ರಮ ಜರುಗಿಸಲು ಮುಂದಾದ ಸರ್ಕಾರ, ಸರ್ಕಾರದ ಮಹಿಳಾ ಅಧಿಕಾರಿಯ ಮೇಲೆ ನೇರಾ ನೇರ ದುಶ್ಯಾಸನ ದಾಳಿ ನಡೆದಿರುವಾಗ ಕಣ್ಣು ಮುಚ್ಚಿ ಕುಳಿತಿರುವುದೇಕೆ? ಈ ಸಂಬಂಧ ಮಹಿಳಾ ಆಯೋಗ ಕೂಡ ಈ ಕ್ಷಣದವರೆಗೂ ಮೌನ ವಹಿಸಿ ಕುಳಿತಿರುವುದೇಕೆ?

– ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ

Leave a Reply