ಸಹಸ್ರಾರು ರೋಗಿಗಳ ಪಾಲಿಗೆ ಸಾಕ್ಷಾತ್ ಮಂಜುನಾಥ್ ನಂತೆ ಕಂಡವರು ಜಯದೇವದ ಡಾ. ಮಂಜುನಾಥ್. 65 ರ ವಯಸ್ಸಿನಲ್ಲೂ, ಅವರ ಸೇವಾ ಮನೋಭಾವಕ್ಕೆ ನಮ್ಮ ಸೆಲ್ಯೂಟ್.
@CMofKarnataka @siddaramaiah ಹಾಗೂ ಆರೋಗ್ಯ ಸಚಿವ @dineshgrao ಅವರಿಗೆ ಧನ್ಯವಾದಗಳು, ರಾಜಕೀಯ ಬೆರಸದೆ ಡಾ. ಮಂಜನಾಥ್ ಅವರ ಅಧಿಕಾರವಧಿಯನ್ನ ವಿಸ್ತರಿಸಿದ್ದಕ್ಕೆ.
ಕಪೋಲ ಕಲ್ಪಿತವಾಗಿ ವೈ.ಎಸ್.ಟಿ ಟ್ಯಾಕ್ಸ್ ಎಂದು ಮಾತಾಡಿದ್ದ @hd_kumaraswamy ಅವರೇ ನಿಮ್ಮ ಆತ್ಮವನ್ನ ಒಮ್ಮೆ ಕೇಳಿಕೊಳ್ಳಿ. ನಿಮ್ಮ ಸಂಬಂಧಿಯಾಗಿರುವ ಡಾ. ಮಂಜುನಾಥ್ ಅವರನ್ನ ಬೇಕಾದ್ರೆ ಕೇಳಿ ತಿಳಿದುಕೊಳ್ಳಿ.
ಡಾ. ಮಂಜುನಾಥ್ ಅವರು ಎಷ್ಟು ವೈ.ಎಸ್.ಟಿ ಟ್ಯಾಕ್ಸ್ ಕಟ್ಟಿದ್ದಾರಂತೆ..? @ಎಚ್.ಡಿ.ಕೆ ಉತ್ತರಿಸುವಿರಾ?
ಡಾ. ಮಂಜುನಾಥ್ ದೇವೇಗೌಡರ ಅಳಿಯರಾಗಿದ್ರೂ, ಅವರನ್ನ ಜೀವ ಉಳಿಸುವ ವೈದ್ಯರಾಗಿಯೇ ನೋಡಿದ್ದೇವೆ.
ಕ್ಷಮಿಸಿ ಡಾ. ಮಂಜುನಾಥ್ ಅವರೇ.. ನಿಮ್ಮನ್ನ ಈ ವಿಚಾರದಲ್ಲಿ ಎಳೆದು ತರಲು ಮನಸಿಲ್ಲ. ಆದರೆ, ಎಚ್.ಡಿ ಕುಮಾರಸ್ವಾಮಿ ಅವರಿಗೆ ತಿಳಿ ಹೇಳಲು ನಿಮಗಿಂತ ಉತ್ತಮ ಉದಾಹರಣೆ ಇನ್ನೊಂದಿಲ್ಲ.
ಒಳ್ಳೆ ಕೆಲಸ ಮಾಡುವ ಯಾವ ಅಧಿಕಾರಿಯಾದರೂ, ಅವರ ರಕ್ಷಣೆಗೆ ಸರ್ಕಾರ ಇರಲಿದೆ ಎಂದು ಸ್ವತಃ ಆರೋಗ್ಯ ಸಚಿವರೇ ಹೇಳಿದ್ದಾರೆ. ಆಯಕಟ್ಟಿನ ಸ್ಥಳಗಳಲ್ಲಿ ಒಳ್ಳೆಯ ಅಧಿಕಾರಿಗಳನ್ನ ಹಾಕಿದರೆ ಎಚ್.ಡಿ.ಕೆ ಅವರಿಗೆ ಸಹಿಸಿಕೊಳ್ಳಲಾಗುತ್ತಿಲ್ಲ. ಕಳಂಕಿತರನ್ನ ಒಳ್ಳೆಯವರು ಎಂದು ಬಿಂಬಿಸುವ ಎಚ್.ಡಿ.ಕೆಯವರ ಡೋಂಗಿ ರಾಜಕಾರಣವನ್ನ ಜನ ಅರಿತಿದ್ದಾರೆ.
– ಎ ಎನ್ ನಟರಾಜ್ ಗೌಡ, ಮುಖ್ಯ ವಕ್ತಾರ ಕೆಪಿಸಿಸಿ




