ಸಂಕಷ್ಟದಲ್ಲಿ ಇರುವ ಜನರಿಗೆ ಸಹಾಯ ಮಾಡುವುದು ಜೀವನದ ನಿಜವಾದ ಅರ್ಥ: ಆರೋಗ್ಯ ಸಚಿವ
ಮಹಾನಗರ ಪಾಲಿಕೆ ಮಾಜಿ ಸದಸ್ಯ ಟಿ.ಮಲ್ಲೇಶ್ ಹುಟ್ಟುಹಬ್ಬದ ಸಂಭ್ರಮಾಚರಣೆ
ಬೆಂಗಳೂರು: ಗಾಂಧಿನಗರ ವಿಧಾನಸಭಾ ಕ್ಷೇತ್ರದ ಸುಶಾಷ್ ನಗರ ವಾರ್ಡ್ ನಲ್ಲಿ ಮಹಾನಗರ ಪಾಲಿಕೆ ಮಾಜಿ ಸದಸ್ಯ, ಕಾಂಗ್ರೆಸ್ ಪಕ್ಷದ ಮುಖಂಡ ಟಿ.ಮಲ್ಲೇಶ್ ಹುಟ್ಟುಹಬ್ಬದ ಸಂಭ್ರಮ ಮತ್ತು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಸೌಲಭ್ಯ, ಸೌವಲತ್ತು ವಿತರಣಾ ಕಾರ್ಯಕ್ರಮ ನಡೆಯಿತು.
ಬೀದಿ ಬದಿಯ ವ್ಯಾಪಾರಿಗಳಿಗೆ ತಳ್ಳುವ ಗಾಡಿ, ವಿಧವಾ ವೇತನ, ವೃದ್ಧಾಪ್ಯ ವೇತನ ಮತ್ತು ಔಷಧಿ, ದೃಷ್ಟಿದೋಷ ಇರುವವರಿಗೆ ಕನ್ನಡಕ ಹಾಗೂ ಆಟೋ ಚಾಲಕರಿಗೆ ಸಮವಸ್ತ್ರ, ಮಹಿಳೆಯರಿಗೆ ಸೀರೆ ವಿತರಣೆ ಮಾಡಲಾಯಿತು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್, ಆರ್.ಗುಂಡೂರಾವ್ ಫೌಂಡೇಷನ್ ಸಂಸ್ಥಾಪಕಿ ತಬೂ ದಿನೇಶ್ ಗುಂಡೂರಾವ್, ಅನ್ಯನಾ ರಾವ್, ಮಹಾನಗರ ಪಾಲಿಕೆ ಮಾಜಿ ಸದಸ್ಯ, ಕಾಂಗ್ರೆಸ್ ಪಕ್ಷದ ಮುಖಂಡ ಟಿ.ಮಲ್ಲೇಶ್ ವಿತರಿಸಿದರು.
ಇದೇ ವೇಳೆ ಮಾತನಾಡಿದ ದಿನೇಶ್ ಗುಂಡೂರಾವ್, ಕಷ್ಟದಲ್ಲಿ ಇರುವ ಜನರಿಗೆ ಸಹಾಯ, ಸಹಕಾರ ನೀಡುವುದು ಜೀವನದ ನಿಜವಾದ ಅರ್ಥ. ಜನರ ಒಳಿತಿಗಾಗಿ ಕಾರ್ಯಕ್ರಮ ಯೋಜನೆ ರೂಪಿಸಬೇಕು. ಸಾಮಾಜಿಕ ಜೀವನದಲ್ಲಿ ಎಲ್ಲರು ಕಳಕಳಿಯಿಂದ ಸೇವೆ ಮಾಡಬೇಕು ಎಂದು ಅಭಿಪ್ರಾಯಪಟ್ಟರು.
ಜನರ ಸಹಕಾರದಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಿದೆ. 2000 ಮನೆಯ ಯಾಜಮಾನಿ, 200 ಯೂನಿಟ್ ವಿದ್ಯುತ್ ಉಚಿತ, ಮಹಿಳೆಯರಿಗೆ ಬಸ್ ಪ್ರಯಾಣ ಉಚಿತ. ಅನ್ನಭಾಗ್ಯ ಯೋಜನೆ ಅಕ್ಕಿ ಮತ್ತು ಧನಭಾಗ್ಯ ವಿತರಿಸಲಾಗುತ್ತಿದೆ ಎಂದು ಹೇಳಿದರು.
ರಾಜ್ಯದಲ್ಲಿ ಮಹಿಳೆಯರು ಬಹಳ ಸಂತೋಷದಿಂದ ಜೀವನ ಸಾಗುತ್ತಿದ್ದಾರೆ. 50ರಿಂದ 60 ಸಾವಿರ ಕೋಟಿ ರೂಪಾಯಿ ಜನರ ಉಪಯೋಗಕ್ಕೆ ಖರ್ಚು ಮಾಡಲಾಗುತ್ತಿದೆ. ನಮ್ಮ ಗ್ಯಾರಂಟಿ ಯೋಜನೆಯಿಂದ ಪ್ರತಿ ಕುಟುಂಬಕ್ಕೆ 6000 ರೂಪಾಯಿ ಆರ್ಥಿಕ ಸಹಾಯ ಸಿಗುತ್ತಿದೆ. ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದಿದೆ, ಜನರ ನೋವುಗಳಿಗೆ ಸ್ಪಂದಿಸಿ ಸರ್ಕಾರವಾಗಿದೆ. ಆದರೆ ವಿರೋಧ ಪಕ್ಷದವರು ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ ಎಂದು ಹೇಳಿದರು.
ಜಕ್ಕರಾಯನಕೆರೆ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ, ಜಕ್ಕರಾಯನ ಕೆರೆ ಆಟದ ಮೈದಾನ ಸಾರ್ವಜನಿಕರ ಉಪಯೋಗಕ್ಕೆ ಮೀಸಲು ಇಡಲಾಗುವುದು ಎಂದು ಹೇಳಿದರು
ಟಿ.ಮಲ್ಲೇಶ್ ಮಾತನಾಡಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರಾದ ದಿನೇಶ್ ಗುಂಡೂರಾವ್ ನಾಡು ಕಂಡ ಶೇಷ್ಠ ರಾಜಕಾರಣಿ. ಮುಂದಿನ ದಿನಮಾನದಲ್ಲಿ ಮುಖ್ಯಮಂತ್ರಿಯಾಗುವ ಎಲ್ಲ ಅರ್ಹತೆ ಅವರಿಗೆ ಇದೆ ಎಂದು ಹೇಳಿದರು.
ಜೀವನದಲ್ಲಿ ಮನುಷ್ಯ ನೊಂದವರ, ದೀನದಲಿತರ ಸೇವೆ ಮಾಡಿದಾಗ ಮಾತ್ರ ಜೀವನ ಧ್ಯನವಾಗುತ್ತದೆ. ಹುಟ್ಟು ಉಚಿತ ಸಾವು ಖಚಿತ. ನಡುವೆ ಜೀವನದಲ್ಲಿ ಮಾಡಿದ ಸಾಧನೆ ಚಿರಸ್ಥಾಯಿಯಾಗಿ ಉಳಿಯುತ್ತದೆ. ಅಧಿಕಾರ ಇರಲಿ, ಇಲ್ಲದೇ ಇರಲಿ ಜನರ ಸೇವೆ ಮಾಡುವುದು ನನ್ನ ಧರ್ಮ ಎಂದರು.
ರಾಜಕೀಯ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿ ಮೇಲೆ ಬರಬೇಕು, ಜನರ ನಡುವೆ ಇದ್ದು ಜನಪರ ಕೆಲಸ ಮಾಡಿದಾಗ ಅವರು ನಮ್ಮನ್ನ ಗುರುತಿಸುತ್ತಾರೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ಮುಖಂಡರುಗಳು, ಮಹಾನಗರ ಪಾಲಿಕೆ ಮಾಜಿ ಸಗಸ್ಯರುಗಳು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳು ಭಾಗವಹಿಸಿದ್ದರು.




