ದೆಹಲಿ: ಒನ್ ನೇಶನ್ ಒನ್ ರೇಷನ್ ಕಾರ್ಡ್ ಅಡಿಯಲ್ಲಿ, ಈಗ ಫಲಾನುಭವಿಗಳು ತಮ್ಮ ಆಯ್ಕೆಯ ಪಡಿತರ ವಿತರಕರಿಂದ ಪಡಿತರವನ್ನು ಪಡೆದುಕೊಳ್ಳಲು ಅವಕಾಶ ಸಿಕ್ಕಿದೆ.
ಜಾರ್ಖಂಡ್ ನ ರಾಂಚಿಯಲ್ಲಿ ಸೆಪ್ಟೆಂಬರ್ ತಿಂಗಳಿನಿಂದಲೇ ಈ ನಿಯಮ ಜಾರಿಗೆ ಬಂದಿದ್ದು, ಗ್ರಾಹಕರ ಇಚ್ಛೆಯಂತೆ ಪಡಿತರ ವಿತರಕರನ್ನು ಬದಲಾಯಿಸಲು ಅವಕಾಶವಿದೆ. ಪಡಿತರ ಚೀಟಿಯೊಂದಿಗೆ ನ್ಯಾಯಬೆಲೆ ಅಂಗಡಿಗೆ ಆಗಮಿಸಿದ ಗ್ರಾಹಕರಿಗೆ ತಮ್ಮ ಅಂಗಡಿಯ ಫಲಾನುಭವಿಯಲ್ಲ ಎಂದು ವಾಪಾಸ್ ಕಳುಹಿಸುವಂತಿಲ್ಲ. ಪಡಿತರ ಚೀಟಿ ಇದ್ದರೆ ಯಾವ ವಿತರಕರಿದಲೂ ಪಡಿತರ ಪಡೆದುಕೊಳ್ಳಲು ಅವಕಾಶ ಸಿಕ್ಕಿದೆ. ಯಾವುದೇ ನ್ಯಾಯಬೆಲೆ ಅಂಗಡಿ ಮಾಲೀಕ ಪಡಿತರ ವಿತರಿಸಲು ನಿರಾಕರಿಸಿದಲ್ಲಿ ಅಂತವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಲಿದೆ.




