ಶಾರ್ಜಾ: ಐಪಿಎಲ್ 14ನೇ ಆವೃತ್ತಿಯ 51ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ರಾಜಸ್ಥಾನ ರಾಯಲ್ಸ್ ತಂಡವನ್ನು ಮಣಿಸಿ, ಪ್ಲೇ ಆಫ್ ಪ್ರವೇಶಿಸುವ ಸಾಧ್ಯತೆಯನ್ನು ಉಳಿಸಿಕೊಂಡಿತು. ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ 20 ಓವರ್ ಗಳಲ್ಲಿ 9 ವಿಕೆಟ್ ಗೆ 90 ರನ್ ಗಳಿಸಲಷ್ಟೇ ಶಕ್ತವಾಯಿತು. ಎವಿನ್ ಲೂಯಿಸ್ 24 ಮತ್ತು ಯಶಸ್ವಿ ಜೈಸ್ವಾಲ್ 12 ರನ್ ಗಳಿಸಿದರೆ ಮುಂದಿನ ಆಟಗಾರರು ರನ್ ಗಳಿಸದೆ ಪೆವಿಲಿಯನ್ ಸೇರಿದರು.
ರನ್ ಚೇಸ್ ಮಾಡಿದ ಮುಂಬೈ ಪರ ನಾಯಕ ರೋಹಿತ್ ಶ್ರಮಾ 22, ಇಶಾನ್ ಕಿಶಾನ್ 50 ಹಾಗೂ ಸೂರ್ಯ ಕುಮಾರ್ 13 ರನ್ ಗಳಿಸುವ ಮೂಲಕ ಕೇವಲ 8.2 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 94 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಕೌಲ್ಟರ್ ನೈಲ್ ಪಂದ್ಯ ಪುರುಷ ಪ್ರಶಸ್ತಿ ಪಡೆದರು.




