ದೆಹಲಿ: ಆರಂಭಿಕ ಹಂತದಲ್ಲಿ ಪ್ರಧಾನಿ ಸ್ವಾಮಿತ್ವ ಯೋಜನೆನ್ನು ಮಧ್ಯಪ್ರದೇಶ, ಉತ್ತರ ಪ್ರದೇಶ, ಮಹಾರಾಷ್ಟ್ರ, ಉತ್ತರಾಖಂಡ್, ರಾಜಸ್ಥಾನ, ಹರಿಯಾಣ, ಪಂಜಾಬ್ ಮತ್ತು ಕರ್ನಾಟಕ ರಾಜ್ಯದ ಕೆಲವು ಹಳ್ಳಿಗಳಲ್ಲಿ ಜಾರಿಗೆ ತರಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಯೋಜನೆಗೆ ಚಾಲನೆ ನೀಡಿ ಮಾತಾಡಿದ ಅವರು, 22 ಲಕ್ಷ ಕುಟುಂಬಗಳಿಗೆ ಆಸ್ತಿ ಕಾರ್ಡ್ ಮಾಡಲಾಗಿದೆ ಎಂದರು. ಮಧ್ಯಪ್ರದೇಶದ ಸ್ವಾಮಿತ್ವ ಯೋಜನೆಯ ಫಲಾನುಭವಿಗಳೊಂದಿಗೆ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದವನ್ನು ಕೂಡ ಇದೇ ವೇಳೆ ನಡೆಸಿದರು.
ಯೋಜನೆಯಡಿಯಲ್ಲಿ ಜನ ಬ್ಯಾಂಕ್ ನಿಂದ ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು. ಇದು ಉತ್ತಮ ಜೀವನಕ್ಕೆ ಅನುಕೂಲ ಮಾಡಿಕೊಡುತ್ತದೆ. ಆಸ್ತಿ ಮಾಲೀಕತ್ವದ ಸ್ಥಾಪನೆಯ ಯೋಜನೆಯಾದ ಸ್ವಾಮಿತ್ವ ಯೋಜನೆಯನ್ನು ರಾಷ್ಟ್ರೀಯ ಮಟ್ಟದಲ್ಲಿ ಜಾರಿಗೆ ತರಲಾಗುವುದು ಮತ್ತೊಂದು ಭರವಸೆಯನ್ನು ನೀಡಿದರು.




