ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಜನ ಸಂಪರ್ಕ ಕಛೇರಿಯಲ್ಲಿ ದಕ್ಷಿಣ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರು, ನಿಕಟಪೂರ್ವ ಬಿಬಿಎಂಪಿ ಸದಸ್ಯರಾದ ಕೆ.ಉಮೇಶ್ ಶೆಟ್ಟಿ ಅವರು ಹುಟ್ಟುಹಬ್ಬದ ಆಚರಣೆಯನ್ನು ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು, ಸ್ನೇಹಿತರು ಅದ್ದೂರಿಯಾಗಿ ಅಚರಿಸಿದರು.
- ಸರಳ, ವೇಗ, ಪಾರದರ್ಶಕ, ಜನಸ್ನೇಹಿ ಆಸ್ತಿ ದಾಖಲೆ ವ್ಯವಸ್ಥೆ ಇ-ಆಸ್ತಿ 2.0: ಕೃಷ್ಣ ಬೈರೇಗೌಡ
- ರೈತರಿಗೆ ನಿರಂತರ 6 ತಾಸು ಸಮರ್ಪಕ ವಿದ್ಯುತ್ ಕುಡಿಯುವ ನೀರು ಪೂರೈಕೆಗೆ ಆದ್ಯತೆ
- ಕೆಟಿವಿಎ ಗೃಹ ಪತ್ರಿಕೆ ಟಿವಿ – ಠೀವಿ ಪುನರಾರಂಭ
- ಸಿಎನ್ಎನ್, ಎಂಎಸ್ಎನ್ಬಿಸಿ, ಪಾಲಿಟಿಕೋಗೆ ಶ್ವೇತಭವನ ಪ್ರವೇಶ ನಿಷೇಧಿಸಿದ ಟ್ರಂಪ್
- ಕೆರೆಗಳ ಪುನಶ್ಚೇತನಕ್ಕೆ ₹150 ಕೋಟಿ ವೆಚ್ಚದ ವಿಶ್ವಬ್ಯಾಂಕ್ ಯೋಜನೆ: ಈಶ್ವರ್ ಖಂಡ್ರೆ
ಕೆ.ಉಮೇಶ್ ಶೆಟ್ಟಿ ಅವರನ್ನು ಮಾಜಿ ಪಾಲಿಕೆ ಸದಸ್ಯರುಗಳಾದ ಗಂಗಭೈರಯ್ಯ, ರಾಮಪ್ಪ,ಬಿಜೆಪಿ ಮುಖಂಡರುಗಳಾದ ಆರ್.ಜೆ.ರವಿ, ಭರತ್ ಗೌಡ, ಪ್ರವೀಣ್ ರೈ, ಕೃಷ್ಣಮೂರ್ತಿ, ಉಲ್ಲಾಸ್, ಪ್ರಸನ್ನ ಶೆಟ್ಟಿ, ಕಿರಣ್ ರವರು ಆತ್ಮೀಯವಾಗಿ ಸನ್ಮಾನಿಸಿ ಹುಟ್ಟುಹಬ್ಬದ ಶುಭಾಶಯ ಕೋರಿದರು.
ಇದೇ ಸಂದರ್ಭದಲ್ಲಿ ಕೆ.ಉಮೇಶ್ ಶೆಟ್ಟಿ ಅವರು ಮಾತನಾಡಿ ಬಾಲ್ಯದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಒಡನಾಟ ಮತ್ತು ದೇಶ ಮೊದಲು ಪಕ್ಷ ನಂತರ ಎಂದು ದೇಶ ಭಕ್ತಿ ಹೇಳಿಕೊಟ್ಟ ಬಿಜೆಪಿ ಪಕ್ಷದ ಕಾರ್ಯಕರ್ತ ಎಂದು ಹೇಳುವುದಕ್ಕೆ ಹೆಮ್ಮೆ ಎನ್ನಿಸುತ್ತದೆ.
ಕಳೆದ 10ವರ್ಷದಲ್ಲಿ ವಿಶ್ವದ ಬಲಿಷ್ಠ ಪ್ರಧಾನಿ ನರೇಂದ್ರಮೋದಿ ಅವರ ನೇತೃತ್ವದಲ್ಲಿ ದೇಶ ಅಭಿವೃದ್ದಿ ಪಥದತ್ತ ಸಾಗುತ್ತಿದೆ. ದೇಶದಲ್ಲಿ 25ಕೋಟಿ ಜನರನ್ನು ಬಡತನ ರೇಖೆಯಿಂದ ಮುಕ್ತ ಮಾಡಿ ಆರ್ಥಿಕವಾಗಿ ಸಬಲರಾಗಿ ಮಾಡಲಾಗಿದೆ.
ಪಿ.ಎಂ.ವಿಶ್ವಕರ್ಮ, ಉಜ್ವಲ, ಜನಧನ್, ಮುದ್ರ ಯೋಜನೆ ಪ್ರಧಾನಿ ಅವಾಸ್ ಯೋಜನೆ, ಜನೌಷಧಿ ಆಯುಷ್ಮಾನ್ ಭಾರತ್ ಹಲವಾರು ಯೋಜನೆಗಳು ದೇಶದ ಕೊಟ್ಯಂತರ ಜನರಿಗೆ ತಲುಪಿದೆ.
ವಿಶ್ವದಲ್ಲಿ ಆರ್ಥಿಕ ಪರಿಸ್ಥಿತಿಯಲ್ಲಿ ದೇಶ ಉತ್ತಮ ಸ್ಥಾನದಲ್ಲಿ ಇದೆ. 500ವರ್ಷಗಳ ಸತತ ಹೋರಾಟದ ಫಲದಿಂದ ಅಯೋಧ್ಯೆಯಲ್ಲಿ ಭವ್ಯ ಬಾಲರಾಮನಾ ಮಂದಿರ ನಿರ್ಮಾಣವಾಗಿರುವುದು.
ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಬಿಜೆಪಿ 400ಕ್ಕೂ ಹೆಚ್ಚು ಸ್ಥಾನಗಳಲ್ಲಿ ಜಯಭೇರಿ ಬಾರಿಸಲಿದೆ.
ಕೇಂದ್ರದಲ್ಲಿ ಮೋದಿ, ದಕ್ಷಿಣದಲ್ಲಿ ಸೂರ್ಯ, ಭವ್ಯ ಭಾರತದ ನಿರ್ಮಾಣ ಬಿಜೆಪಿ ಪಕ್ಷದ ಸಂಕಲ್ಪವಾಗಿದೆ ಎಂದು ಹೇಳಿದರು.




