ಗುರುಲಿಂಗಸ್ವಾಮಿ ಹೊಳಿಮಠ ಅವರ ನಿಧನಕ್ಕೆ ಡಾ. ಮಹೇಶ ಜೋಶಿ ಕಂಬನಿ

4 years ago

ಬೆಂಗಳೂರು: ಪತ್ರಕರ್ತ, ಸಿಎಂ ಮಾಧ್ಯಮ ಸಂಯೋಜಕ ಗುರುಲಿಂಗಸ್ವಾಮಿ ಹೊಳಿಮಠ ಅವರ ಅಕಾಲಿಕ ನಿಧನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮಹೇಶ ಜೋಶಿ ಸಂತಾಪ ವ್ಯಕ್ತಪಡಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ರಾಮದುರ್ಗದವರಾದ ಗುರುಲಿಂಗಸ್ವಾಮಿ ಹೋಳಿಮಠ ಅವರು ಕಳೆದ ಎರಡೂವರೆ ದಶಕಗಳಿಂದ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸಿದ್ದರು. ಅವರು ಸ್ನೇಹಜೀವಿಯಾಗಿದ್ದರು. ಶ್ರದ್ಧೆ, ಸಾಮಾಜಿಕ ಕಳಕಳಿಯುಳ್ಳ ಪತ್ರಕರ್ತರಾಗಿದ್ದರು ಎಂದಿದ್ದಾರೆ.

ಕನ್ನಡ ನಾಡು, ನುಡಿಯ ಕುರಿತು ಅಪಾರ ಗೌರವ ಹೊಂದಿದ್ದ ಗುರುಲಿಂಗಸ್ವಾಮಿಯವರು ಅದ್ಭುತ ರಾಜಕೀಯ ವಿಶ್ಲೇಷಕರಾಗಿದ್ದರು. ತಾವು ನಡೆಸಿಕೊಡುವ ಸಂದರ್ಶನಗಳಲ್ಲಿ ವ್ಯಕ್ತಿತ್ವಕ್ಕೆ ಘಾಸಿಯಾಗದ ರೀತಿಯಲ್ಲಿ ನಿರ್ವಹಿಸುತ್ತಿದ್ದರು. ಮುಖ್ಯಮಂತ್ರಿಯವರ ಮಾಧ್ಯಮ ಸಂಯೋಜಕರಾದ ಬಳಿಕ ಕನ್ನಡ ಸಾಹಿತ್ಯ ಪರಿಷತ್ತಿನ ಜತೆಗಿನ ಸಂಬಂಧವನ್ನು ಗಟ್ಟಿಯಾಗಿಸಿದ್ದ ಅವರು ಪರಿಷತ್ತಿನ ಅಭಿವೃದ್ಧಿಗೆ ಪೂರಕವಾಗಿ ಸ್ಪಂದಿಸುತ್ತಿದ್ದುದು ಮರೆಯಲಾಗದು ಎಂದು ಹೇಳಿದ್ದಾರೆ.

ಗುರುಲಿಂಗಸ್ವಾಮಿ ಹೊಳಿಮಠ ಅವರು ತಂದೆ, ತಾಯಿ, ಪತ್ನಿ, ಸಣ್ಣ ವಯಸ್ಸಿನ ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದು, ಅವರ ಕುಟುಂಬಕ್ಕೆ ಅಗಲಿಕೆಯ ನೋವು ಸಹಿಸುವ ಶಕ್ತಿಯನ್ನು ದೇವರು ಶಾಂತಿ ನೀಡಲಿ ಎಂದಿದ್ದಾರೆ.

Leave a Reply