33 ವರ್ಷಗಳ ಅಮೋಘ ರಾಜಕೀಯ ಪಯಣಕ್ಕೆ ಮಾಜಿ ಪ್ರಧಾನಿ, ಜಗತ್ತು ಕಂಡ ಶ್ರೇಷ್ಠ ಅರ್ಥ ಶಾಸ್ತ್ರಜ್ಞ, ಮುತ್ಸದ್ಧಿ ರಾಜಕಾರಣಿ ಮನಮೋಹನ್ ಸಿಂಗ್ ಅವರು ವಿದಾಯ ಹೇಳಿದ್ದಾರೆ. ಅವರು ಇವತ್ತು ರಾಜ್ಯ ಸಭೆಯ ಸದಸ್ಯತ್ವದ ಕೊನೆಯ ದಿನ ಪೂರ್ತಿಗೊಳಿಸಿ ನಿವೃತ್ತಿಯಾಗಿದ್ದಾರೆ.
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
- ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ
- ಜನಸಹಭಾಗಿತ್ವದೊಂದಿಗೆ ಸ್ವಚ್ಛತಾ ಅಭಿಯಾನಕ್ಕೆ ಸಜ್ಜು
- UPI ಡಿಜಿಟಲ್ ಮೇಲಿನ ಹೆಚ್ಚುವರಿ ಶುಲ್ಕ ಪ್ರಸ್ತಾವನೆ ಹಿಂಪಡೆಯಬೇಕು
- ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬ: ಪೌರ ಕಾರ್ಮಿಕರಿಗೆ ಸನ್ಮಾನ
ಬರೊಬ್ಬರಿ 10 ವರ್ಷಗಳ ಕಾಲ ಪ್ರಧಾನಿಯಾಗಿ ಭಾರತವನ್ನು ಸದೃಢವಾದ ಆರ್ಥಿಕ ಶಕ್ತಿಯಾಗಿ ರೂಪಿಸಿದ್ದರಲ್ಲಿ ಮನಮೋಹನ್ ಸಿಂಗ್ ಅವರ ಪಾತ್ರ ತುಂಬ ದೊಡ್ಡದು.

ಮನಮೋಹನ್ ಸಿಂಗ್ ಅವರು ವಿತ್ತ ಸಚಿವರಾಗಿದ್ದಾಗ 1991ರಲ್ಲಿ ಅಳವಡಿಸಿದ ಉದಾರೀಕರಣ ನೀತಿ ಭಾರತದ ಆರ್ಥಿಕ ಬೆಳವಣಿಗೆಗೆ ಭದ್ರ ಬುನಾದಿಯಾಗಿದ್ದು ಈಗ ಇತಿಹಾಸ.

ಭಾರತವನ್ನು ಶ್ರೇಷ್ಠವಾಗಿಸಿದ ಮುತ್ಸದ್ಧಿ, ಅಜಾತಶತ್ರು ರಾಜಕಾರಣಿ ಡಾ. ಮನಮೋಹನ್ ಸಿಂಗ್ ಅವರ ನಿವೃತ್ತಿ ಜೀವನ ನೆಮ್ಮದಿಯಾಗಿರಲಿ. ಅವರ ಅಪಾರ ಜ್ಞಾನ ಭಾರತಕ್ಕೆ ಸಿಗುತ್ತಿರಲಿ. ಅವರು ಉತ್ತಮ ಆರೋಗ್ಯದಿಂದ ನೂರ್ಕಾಲ ಬಾಳಲಿ ಎಂದು ಹಾರೈಸುತ್ತೇನೆ.
– ಸಂತೋಷ್ ಲಾಡ್, ಸಚಿವರು




