ಬೆಂಗಳೂರು: ಹಿರಿಯ ಪತ್ರಕರ್ತ, ಅಂಕಣಕಾರ ದಿನೇಶ್ ಅಮಿನ್ ಮಟ್ಟು ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿಸಬೇಕು ಎಂದು ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ನಡೆಸಿದ್ದಾರೆ. ದಿನೇಶ್ ಅಮೀನ್ ಮಟ್ಟು ಅಭಿಮಾನಿ ಬಳಗ ಮಂಗಳೂರು ಹೆಸರಿನ ಬ್ಯಾನರ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗಿವೆ.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
“ಮಟ್ಟು ಅವರನ್ನು ಎಂ ಎಲ್ ಸಿ ಮಾಡುವ ಮುಖಾಂತರ ಕಾಂಗ್ರೆಸ್ ಪಕ್ಷದ ಹಣವುಳ್ಳ ರಾಜಕಾರಣಿಗಳ ಸೊಕ್ಕು ಮುರಿಯುವುದು ಇಂದಿನ ಆದ್ಯತೆಯಾಗಬೇಕಿದೆ” ಒತ್ತಾಯಿಸಿದ್ದಾರೆ.

ಕಾಂಗ್ರೆಸ್ ಪಕ್ಷದಿಂದ ದಕ್ಷಿಣ ಕನ್ನಡ ಜಿಲ್ಲೆಗೊಂದು MLC ಸ್ಥಾನ ಕೊಡುವುದಾದರೆ ಅದನ್ನು ದಿನೇಶ್ ಅಮಿನ್ ಮಟ್ಟು ಅವರಿಗೇ ಕೊಡಿ ಎನ್ನುವುದು ಅವರ ಅಭಿಮಾನಿ ಬಳಗದ ಹಕ್ಕೊತ್ತಾಯವಾಗಿದೆ. ಏಕೆಂದರೆ ಕಾಂಗ್ರೆಸ್ ಪಕ್ಷದ ಇಂದಿನ ರಾಜಕಾರಣಿಗಳ ಹಣ, ಅಧಿಕಾರ, ದುಷ್ಟ ರಾಜಕಾರಣ, ಜಾತಿ, ಕುತಂತ್ರ, ದರ್ಪಗಳಿಗೆ ಹೋಲಿಸಿದರೆ ಮಟ್ಟು ಅವರು ಅಪ್ಪಟ ವಜ್ರದಂತೆ ಹೊಳೆಯುವ ಬೆಳ್ಳಿಯಾಗಿದ್ದಾರೆ ಎಂದು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಇದೇ ಒತ್ತಾಯದೊಂದಿಗೆ ಒಂದು ಬೃಹತ್ ಹೋರಾಟ ಮಾಡುವುದಾದಲ್ಲಿ ಅಲ್ಲಿ ಸೇರುವ ಜನರಿಗೆ ಊಟೋಪಚಾರ, ಸಂಜೆಯ ಖರ್ಚು ಹಾಗೂ ಬಿಸಿಲು ಮಳೆಯಿಂದ ರಕ್ಷಿಸಿಕೊಳ್ಳಲು ಬೃಹತ್ ಪೆಂಡಾಲ್ ವ್ಯವಸ್ಥೆ ಸೇರಿದಂತೆ ಹಲವಾರು ವ್ಯವಸ್ಥೆಗಳನ್ನು ಮಾಡಲೇಬೇಕಾಗುತ್ತದೆ. ಅದಕ್ಕೆ ಸಾಕಷ್ಟು ಹಣದ ಅವಶ್ಯಕತೆಯೂ ಇರುತ್ತದೆ ಎಂದಿದ್ದಾರೆ.

ಆ ಖರ್ಚು ವೆಚ್ಛಗಳಿಗಾಗಿ ರಾಜ್ಯಾದ್ಯಂತ ಇರುವ ಮಟ್ಟು ಅಭಿಮಾನಿಗಳು ಜೀಪೇ ಅಥವಾ ಫ಼ೋನ್ ಪೇ ಮಾಡಲು ಆಸಕ್ತಿ ತೋರಿದಲ್ಲಿ ಮುಂದಿನ ಹೋರಾಟದ ರೂಪುರೇಷೆಗಳನ್ನು ತಯಾರಿಸಲು ಹೋರಾಟಗಾರರಿಗೆ ಅನುಕೂಲವಾಗಲಿದೆ. ಈ ವಿಷಯವಾಗಿ MLC ಆಕಾಂಕ್ಷಿಗಳಾದ ಮಟ್ಟು ಅವರೂ ಶಕ್ತಿ ಮೀರಿ ಸಹಕರಿಸಲಿದ್ದಾರೆ ಎನ್ನುವುದು ಹೋರಾಟಗಾರರ ನಂಬಿಕೆಯಾಗಿದೆ ಎಂದಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗಿರುವ ಪೋಸ್ಟರ್ ಗಳನ್ನು ಮತ್ತು ಜಾಲತಾಣಗಳಲ್ಲಿ ಹಂಚಿಕೆಯಾದ ಪೋಸ್ಟ್ ಅನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ ಇದೊಂದು ಕಿಡಿಗೇಡಿಗಳ ಕೃತ್ಯ ಎಂದು ಕಂಡುಬರುತ್ತದೆ.




