ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ

3 years ago

ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ಮಾಡಿರುವ ರಾಜ್ಯ ಸರ್ಕಾರ, ಹಿರಿಯ ಅಧಿಕಾರಿ ರಾಮಚಂದ್ರ ರಾವ್, ಮಾಲಿನಿ ಕೃಷ್ಣಮೂರ್ತಿ ಸೇರಿದಂತೆ 15 ಹಿರಿಯ ಐಪಿಎಸ್ ಅಧಿಕಾರಗಳನ್ನು  ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಡಾ. ಕೆ. ರಾಮಚಂದ್ರರಾವ್- ಎಡಿಜಿಪಿ,ಅವರನ್ನು ಕರ್ನಾಟಕ ರಾಜ್ಯ ಪೊಲೀಸ್ ಹೌಸಿಂಗ್ ಕಾರ್ಪೊರೇಷನ್  ಬೆಂಗಳೂರು ಇದರ ವ್ಯವಸ್ಥಾಪಕರ ನಿರ್ದೇಶಕರಾಗಿ ನೇಮಿಸಲಾಗಿದೆ.
ಮಾಲಿನಿ ಕೃಷ್ಣಮೂರ್ತಿ- ಎಡಿಜಿಪಿ, ಅವರನ್ನು ಕಾರಾಗೃಹ ವಿಭಾಗದ ಮುಖ್ಯಸ್ಥರಾಗಿ ನೇಮಕ ಮಾಡಲಾಗಿದೆ.

ಅರುಣ್ ಚಕ್ರವರ್ತಿ- ಎಡಿಜಿಪಿ, ಮಾನವ ಹಕ್ಕುಗಳ ಜಾರಿ ನಿರ್ದೇಶನಾಲಯ, ಬೆಂಗಳೂರು.

ಮನೀಶ್ ಖರ್ಬೀಕರ್- ಎಡಿಜಿಪಿ, ಆರ್ಥಿಕ ಅಪರಾಧಗಳು

ಸಿಐಡಿ ಎಂ.ಚಂದ್ರಶೇಖರ್ – ಐಜಿಪಿಯಿಂದ ಎಡಿಜಿಪಿಗೆ ಬಡ್ತಿ ನೀಡಿ ಆಂತರಿಕ ಭದ್ರತಾ ವಿಭಾಗಕ್ಕೆ ವರ್ಗಾವಣೆ.

ವಿಪುಲ್ ಕುಮಾರ್ – ಹೆಚ್ಚುವರಿ ಪೊಲೀಸ್ ಆಯುಕ್ತರು, ಪೂರ್ವ, ಬೆಂಗಳೂರು ನಗರ.

ಪ್ರವೀಣ್ ಮಧುಕರ್ ಪವಾರ್- ಐಜಿಪಿ, ಸಿಐಡಿ.

ಎನ್.ಸತೀಶ್ ಕುಮಾರ್- ಹೆಚ್ಚುವರಿ ಆಯುಕ್ತರು, ಪಶ್ಚಿಮ ಬೆಂಗಳೂರು ನಗರ.

ಸಂದೀಪ್ ಪಾಟೀಲ್- ಐಜಿಪಿ, ಕೆಎಸ್‍ಆರ್‍ಪಿ.

ವಿಕಾಶ್ ಕುಮಾರ್ ವಿಕಾಶ್- ಐಜಿಪಿ, ಆಂತರಿಕ ಭದ್ರತಾ ವಿಭಾಗ.

ರಮಣ್ ಗುಪ್ತಾ- ಐಜಿಪಿ, ಉತ್ತರ ವಲಯ, ಬೆಳಗಾವಿ.

ಎಸ್.ಎನ್.ಸಿದ್ದರಾಮಪ್ಪ- ಐಜಿಪಿ, (ಎಚ್‍ಕ್ಯೂ-1) ಪೊಲೀಸ್ ಪ್ರಧಾನ ಕಛೇರಿ, ಬೆಂಗಳೂರು.

ಬೋರಲಿಂಗಯ್ಯ- ಡಿಐಜಿ, ದಕ್ಷಿಣ ವಲಯ, ಮೈಸೂರು.

ಸಿ.ವಂಶಿಕೃಷ್ಣ- ಡಿಐಜಿ, ಆರ್ಥಿಕ ಅಪರಾಧಗಳು, ಸಿಐಡಿ.

ಸಿ.ಬಿ.ರಿಶ್ಯಂತ್- ಎಸ್‍ಪಿ, ದಕ್ಷಿಣ ಕನ್ನಡ, ಮಂಗಳೂರು

Leave a Reply