ಬೆಂಗಳೂರು: ಪ್ರಜ್ವಲ್ ರೇವಣ್ಣ ನೂರಾರು ಮಹಿಳೆಯರನ್ನು ಲೈಂಗಿಕ ಶೋಷಣೆಗೆ ಬಳಸಿಕೊಳ್ಳಲು ಸಹಾಯಕವಾಗಿದ್ದು ಆತನ ಹುದ್ದೆ, ಆತನ ಕುಟುಂಬದ ಹಿನ್ನೆಲೆ, ಆತನ ಕುಟುಂಬದ ಪ್ರಭಾವ ಎಂದು ಕೆಪಿಸಿಸಿ ಹೇಳಿದೆ.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ಕೆಪಿಸಿಸಿ, ಆತನಿಗೆ ಈ ಧೈರ್ಯ ಬರುವುದರಲ್ಲಿ ಕುಮಾರಸ್ವಾಮಿಯವರ ಪಾಲೂ ಇದೆ, ಕುಮಾರಸ್ವಾಮಿಯವರಿಗೆ ಅವರ ಕುಟುಂಬ ಸದಸ್ಯನೊಬ್ಬನ ಹೇಯ ಕೃತ್ಯದ ಹೊಣೆಯ ಪಾಲನ್ನೂ ಹೊರಬೇಕಿದೆ ಎಂದಿದೆ.
ರಾಜ್ಯದ ಒಬ್ಬ ಮಾಜಿ ಮುಖ್ಯಮಂತ್ರಿಯಾಗಿ ತಮ್ಮ ಕುಟುಂಬದವರ ಕುಕೃತ್ಯಕ್ಕೆ ಕ್ಷಮೆ ಕೇಳುವ ಸೌಜನ್ಯ ತೋರಲಿಲ್ಲ ಎಂದರೆ ಇದು ನೈತಿಕ ಹಾಗೂ ಹೊಣೆಗಾರಿಕೆಯ ರಾಜಕಾರಣಕ್ಕೆ ಮಾಡಿದ ಮಹಾ ಅಪಚಾರ ಎಂದು ಅಸಮಾಧಾನ ವ್ಯಕ್ತಪಡಿಸಿದೆ.
ತಮಗೂ ತಮ್ಮ ಅಣ್ಣನ ಮಗ ಪ್ರಜ್ವಲ್ ಕೃತ್ಯಕ್ಕೂ ಸಂಬಂಧವಿಲ್ಲ ಎಂಬಂತೆ ಮಾತನಾಡುವ ಕುಮಾರಸ್ವಾಮಿಯವರು ಅದೇ ಪ್ರಕರಣದಲ್ಲಿ ಒಕ್ಕಲಿಗ ಸಮುದಾಯದ ಸಂಬಂಧ ಜೋಡಿಸಲು ಹೊರಡುತ್ತಾರೆ ಎಂದಿದೆ.
ತಮ್ಮ ಅಣ್ಣನ ಮಗನ ಕೃತ್ಯಕ್ಕೆ ಸಂಬಂಧವಿಲ್ಲ ಎನ್ನುವುದಾದರೆ ತಮ್ಮವರ ಮೇಲಿನ ಆರೋಪ ಒಂದಿಡೀ ಸಮುದಾಯಕ್ಕೆ ಹೇಗೆ ಸಂಬಂಧಿಸುತ್ತದೆ? ಇದ್ಯಾವ ಥಿಯರಿ? ಎಂದು ಪ್ರಶ್ನಿಸಿದೆ.




