ಕೆ.ಪಿ.ಎಸ್.ಸಿಯಲ್ಲಿ ತೇರ್ಗಡೆಯಾದ 64 ವಿದ್ಯಾರ್ಥಿಗಳಿಗೆ ಸನ್ಮಾನ
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗವು 2022 ನೇ ಸಾಲಿನ ಫಲಿತಾಂಶವನ್ನು ಪ್ರಕಟಿಸಿದ್ದು, ಇಂಡಿಯಾ ಫಾರ್ ಐಎಎಸ್ ಅಕಾಡೆಮಿಯಲ್ಲಿ ಮಾರ್ಗದರ್ಶನ ತರಬೇತಿ ಪಡೆದ 64 ಅಭ್ಯರ್ಥಿಗಳು ಯಶಸ್ಸು ಗಳಿಸಿದ್ದಾರೆ. ಈ ಸಂದರ್ಭದಲ್ಲಿ ಇಂಡಿಯಾ ಫಾರ್ ಐ.ಎ.ಎಸ್. ಅಕಾಡೆಮಿಯಿಂದ ಸನ್ಮಾನವನ್ನು ನಡೆಸಲಾಯಿತು.
ಕೆ.ಪಿ.ಎಸ್.ಸಿ. ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಸಾಧಕರಿಗೆ ಗೌರವ ಸನ್ಮಾನ ಜೊತೆಗೆ, ಕರ್ನಾಟಕದ ಯುವಜನತೆಯನ್ನು ಪ್ರೋತ್ಸಾಹಿಸಿ ಸ್ಫೂರ್ತಿ ಕಾರ್ಯಕ್ರಮವನ್ನು ಆಡಳಿತ ಮಂಡಳಿಯ ಉಪಾಧ್ಯಕ್ಷ ಡಾ.ಜಿ.ಎನ್ ಶ್ರೀ ಕಂಠಯ್ಯ IRS(R) ಅವರ ನೇತೃತ್ವದಲ್ಲಿ ನಡೆಸಲಾಯಿತು. ಅಕಾಡೆಮಿಯ ಆಡಳಿತ ಮಂಡಳಿ ಸದಸ್ಯ ಸಿ.ಇ.ಓ ಶ್ರೀನಿವಾಸ್, ನಿರ್ದೇಶಕರಾದ ನಯನ್.ಎಸ್ ಮತ್ತು ನವೀನ್ ಕೆ.ಎಂ. ಬಾಬು ಸಂದೀಪ್, ಪ್ರಶಾಂತ್ ಮೊದಲಾದವರು ಭಾಗವಹಿಸಿದ್ದರು.
ಕರ್ನಾಟಕ ಯುವ ಸಮೂಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚು ಪಾಲ್ಗೊಳ್ಳುವುದಿಲ್ಲ, ಇದರಿಂದ ಉನ್ನತ ಹುದ್ದೆಗಳು ಅನ್ಯ ರಾಜ್ಯದ ವಿದ್ಯಾರ್ಥಿಗಳ ಪಾಲಿಗೆ ಹೋಗುತ್ತವೆ. ಪ್ರತಿಭಾವಂತ ವಿದ್ಯಾರ್ಥಿಗಳ ಕೊರತೆ ಇಲ್ಲ. ಸರಿಯಾದ ಮಾರ್ಗದರ್ಶನ ತರಬೇತಿ ನೀಡಿದರೆ ಕೇಂದ್ರ, ರಾಜ್ಯ ಸರ್ಕಾರದ ಆಡಳಿತದಲ್ಲಿ ಕನ್ನಡಿಗರು ಪಾರುಪತ್ಯ ಮೆರೆಯಬಹುದು. ಈ ನಿಟ್ಟಿನಲ್ಲಿ ಇಂಡಿಯಾ ಫಾರ್ ಐ.ಎ.ಎಸ್. ಸಂಸ್ಥೆ ಶ್ರಮಿಸುತ್ತಿದೆ ಎಂದು ಡಾ.ಜಿ.ಎನ್ ಶ್ರೀ ಕಂಠಯ್ಯ ಹೇಳಿದರು.
ನಮ್ಮ ಸಂಸ್ಥೆಯಲ್ಲಿ ತರಬೇತಿ ಪಡೆದ 40 ವಿದ್ಯಾರ್ಥಿಗಳು ಐ.ಎ.ಎಸ್., ಐ.ಆರ್.ಎಸ್. ಮತ್ತು ಐ.ಎಫ್.ಎಸ್. ಅಧಿಕಾರಿಗಳಾಗಿದ್ದಾರೆ ಇದೀಗ ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ 64 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಈ ವಿದ್ಯಾರ್ಥಿಗಳು ಇಂಡಿಯಾ ಫಾರ್ ಐ.ಎ.ಎಸ್. ತರಬೇತಿ ಪಡೆದವರು ಎಂಬ ಹೆಮ್ಮೆ ಇದೆ ಎಂದರು.




