ಕರ್ನಾಟಕ ಇತಿಹಾಸ ಸಾರುವ ನುಡಿ ಕನ್ನಡ ಗೀತೆ ಬಿಡುಗಡೆ

3 years ago

ಬೆಂಗಳೂರು: 67ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಎಮ್.ಶಿವರಾಜು ಹಾಡಿರುವ ನುಡಿ ಕನ್ನಡ ಗೀತೆಯನ್ನು ಇಂದು ಬಿಡುಗಡೆಗೊಳಿಸಿದರು.

ಇದೇ ವೇಳೆ ಎಮ್.ಶಿವರಾಜುರವರು ಮಾತನಾಡಿ, ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ನಮ್ಮ ಕನ್ನಡ ಭಾಷೆ ಸರಳ, ಸುಂದರ ಭಾಷೆಯಾಗಿದೆ. ಕನ್ನಡ ನಾಡಿಗೆ, ಕನ್ನಡ ಭಾಷೆಗೆ ಸೇವೆ ಸಲ್ಲಿಸಿದ ಮಹನೀಯರುಗಳ ಶ್ರಮದಿಂದ ಇಂದು ಈ ನಾಡು ಸಮ್ಮದ್ಧಿ, ಸುಭಿಕ್ಷವಾಗಿದೆ ಎಂದರು.

ಕಲೆ, ಸಾಹಿತ್ಯ ಹೋರಾಟಗಳಲ್ಲಿ ಅಪ್ರತಿಮ ಸಾಧಕರುಗಳಾದ ಕಿತ್ತೂರುರಾಣಿ ಚನ್ನಮ್ಮ, ಕನಕದಾಸರು,
ಸಂಗೊಳ್ಳಿ ರಾಯಣ್ಣ, ನಾಡಪ್ರಭು ಕೆಂಪೇಗೌಡ, 8 ಜ್ಞಾನ ಪೀಠ ಪ್ರಶಸ್ತಿ ಪಡೆದ ಪುರಸ್ಕೃತರು, ಮೇರುನಟ ಡಾ.ರಾಜ್ ಕುಮಾರ್, ಸಾಹಸಸಿಂಹ ವಿಷ್ಣುವರ್ಧನ್, ರೆಬಲ್ ಸ್ಟಾರ್ ಅಂಬರೀಷ್, ಶಂಕರ್ ನಾಗ್, ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಕೋಟ್ಯಂತರ ಕನ್ನಡಿಗರ ತ್ಯಾಗ ಮನೋಭಾವನೆಯಿಂದ ಇಂದು ಕನ್ನಡ ಭಾಷೆಗೆ ವಿಶ್ವಮಾನ್ಯತೆ ಸಿಕ್ಕಿದೆ ಎಂದರು.

ಕನ್ನಡ ಭಾಷೆ ಉಳಿಸಿ, ಬೆಳಸಲು ಪ್ರತಿಯೊಬ್ಬ ಕನ್ನಡಿಗನು ಶ್ರಮಿಸಬೇಕು, ಅನ್ಯ ಭಾಷಿಕರಿಗೆ ಕನ್ನಡ ಭಾಷೆ ಕಲಿಯಬೇಕು. ಆಗ ಮಾತ್ರ ಭಾಷೆ ಬೆಳಯಲು ಸಾಧ್ಯ ಎಂದರು.

ನುಡಿ ಕನ್ನಡ ಗೀತೆಯನ್ನು ನಟ, ನಿರ್ಮಾಪಕ, ನಿರ್ದೇಶಕ ಎಸ್.ನಾರಾಯಣ್ ಸಂಗೀತ ಸಂಯೋಜನೆ, ಗೀತೆ ರಚನೆ ಮಾಡಿದ್ದಾರೆ.

Leave a Reply