ಜಂಗಮರ ಎಸ್.ಸಿ. ಹೋರಾಟ ಬೆಂಬಲಿಸಲು ಪ್ರಲ್ಹಾದ್ ಜೋಷಿಯವರಿಗೆ ಮನವಿ

4 years ago

ಹುಬ್ಬಳ್ಳಿ: ಕಲಘಟಗಿ ತಾಲೂಕು ಧಾರವಾಡ ಜಿಲ್ಲೆಯ ಜಂಗಮರು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರನ್ನು ಭೇಟಿ ಮಾಡಿ ಬೆಂಗಳೂರಿನಲ್ಲಿ ಬಿ ಡಿ ಹಿರೇಮಠ್ ನೇತೃತ್ವದಲ್ಲಿ ನಡೆಯುತ್ತಿರುವ ಬೇಡ ಜಂಗಮ ಸತ್ಯ ಪ್ರತಿಪಾದನಾ ಸತ್ಯಾಗ್ರಹ ಹೋರಾಟದ ಬಗ್ಗೆ ಚರ್ಚಿಸಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಈ ವಿಷಯವಾಗಿ ಚರ್ಚಿಸಿ ಧರಣಿ ಕುಳಿತ ಸಮಾಜಕ್ಕೆ ನ್ಯಾಯ ದೊರಕಿಸಿಕೊಡಲು ವಿನಂತಿ ಮಾಡಿದರು.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಲಘಟಗಿ ತಾಲೂಕ ಬಿಜೆಪಿ ನಾಯಕ ಹಾಗೂ ಜಂಗಮ ಸಮಾಜದ ತಾಲೂಕ ಪ್ರಧಾನ ಕಾರ್ಯದರ್ಶಿ ಶಿವಾನಂದ್ ಹಿರೇಮಠ, ಸಚಿವರು ನಮ್ಮ ಮನವಿಯನ್ನು ಆಲಿಸಿ ನಿಮ್ಮ‌ ಸಮಾಜದ ಬಗ್ಗೆ ನನಗೂ ಕೂಡ ನಿಮ್ಮ ಜಂಗಮ ಸಮಾಜದ ಬಗ್ಗೆ ಅಪಾರವಾದ ಗೌರವವಿದೆ ಎಂದಿದ್ದಾರೆ ಎಂದರು.

ಮುಖ್ಯಮಂತ್ರಿಗಳ ಜೊತೆ ಶೀಘ್ರವಾಗಿ ಮಾತನಾಡಿ ಸಮಸ್ಯೆ ಬಗೆಹರಿಸಲು ಪ್ರಮಾಣಿಕ ಪ್ರಯತ್ನ ಮಾಡುತ್ತೇನೆಂದು ಹೇಳಿದರು ಎಂದರು.

ಜೊತೆಗೆ ಮೊನ್ನೆ ಫ್ರೀಡಂ ಪಾರ್ಕಿಗೆ ಹೋದರು ಕೂಡ ತಾವು ನಮ್ಮ ಸಮಾಜದ ಹಿರಿಯರಾದ ಬಿ ಡಿ ಹಿರೇಮಠ ಅವರ ಸತ್ಯಾಗ್ರಹಕ್ಕೆ ಹೋಗದೆ ಹಾಗೆ ಬಂದಿರುವುದು ನಮ್ಮ ನಮ್ಮ ಸಮಾಜದ ಬಾಂಧವರಿಗೆ ಮನಸ್ಸಿಗೆ ನೋವು ತಂದಿದೆ ಎಂದು ಹೇಳಿದಾಗ ನನಗೆ ಈ ವಿಷಯವಾಗಿ ಯಾರೂ ತಿಳಿಸದ ಕಾರಣ ಅಲ್ಲಿ ಹೋಗಲು ಸಾಧ್ಯವಾಗಲಿಲ್ಲ ಆದಕಾರಣ ತಾವು ತಪ್ಪು ತಿಳಿಯಬಾರದು ಎಂದರು ಎಂದು ಹೇಳಿದರು.

ಇಂದು ಬೆಳಿಗ್ಗೆ ಕಲಘಟಗಿ ತಾಲೂಕಿನ ಜಂಗಮ ಹಿರಿಯರಾದ ಎಸ್ ವಿ ತಡಸ್ಮಠ ಚೆನ್ನಯ್ಯ ಹಿರೇಮಠ, ಶಿವಾನಂದ್ ಹಿರೇಮಠ, ಅಜ್ಜಯ್ಯ ಹಿರೇಮಠ್, ಬಿ ಸಿ ಪಾಟೀಲ್, ಪಿ ಎಂ ಚಿಕ್ಕಮಠ್, ಬಸಯ್ಯ ಹಿರೇಮಠ ಇನ್ನು ಮುಂತಾದ ಸಮಾಜ ಬಾಂಧವರು ಸುದೀರ್ಘವಾಗಿ ಚರ್ಚಿಸಿ ಮನವರಿಕೆ ಮಾಡಿಕೊಟ್ಟಿದೆ ತಕ್ಷಣ ಮಾನ್ಯ ಮುಖ್ಯಮಂತ್ರಿಗಳ ಜೊತೆ ಈ ವಿಷಯವಾಗಿ ಮಾತನಾಡಲು ತಿಳಿಸಲಾಯಿತು. ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ಎಂದರು.

Leave a Reply