ಭವ್ಯಾ ನರಸಿಂಹಮೂರ್ತಿ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡದಿರುವುದು ಬೇಸರದ ಸಂಗತಿ

3 years ago

ಭವ್ಯಾ ನರಸಿಂಹಮೂರ್ತಿ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡದಿರುವುದು ಅತ್ಯಂತ ಬೇಸರದ ಸಂಗತಿ. ಆ ಪಕ್ಷ ಈಗಲೂ ಸರಿಹೋಗಿಲ್ಲ. ಒಬ್ಬ ಸಮರ್ಥ, ಅತ್ಯಂತ ವಿಚಾರಶೀಲ ಮತ್ತು ಧೈರ್ಯಶಾಲಿ ಹೆಣ್ಣುಮಗಳಿಗೆ ಟಿಕೆಟ್ ಕೊಟ್ಟು ಗೆಲ್ಲಿಸಿಕೊಂಡು ತನ್ನ ಶಕ್ತಿಯನ್ನು ಕಾಂಗ್ರೆಸ್ ಹೆಚ್ಚಿಸಿಕೊಳ್ಳಬೇಕಿತ್ತು. ಇಂತಹಾ ಹೆಣ್ಣುಮಕ್ಕಳೆಂದರೆ ಎಲ್ಲಾ ಗಂಡಸರೂ ಹೆದರುತ್ತಾರೆ ಅನಿಸತ್ತೆ. ಅದರಲ್ಲೂ ಕಾಂಗ್ರೆಸ್ ನವರಿಗೆ ಬದಲಾಗುವ ಗುಣವೇ ಇಲ್ಲವೆನಿಸತ್ತೆ. ಕಾಂಗ್ರೆಸ್ ಹೊಸ ತಲೆಮಾರಿನ ಈ ಕಾಲದ ಧರ್ಮಕ್ಕೆ ತಕ್ಕಹಾಗೆ ಅಪ್ಡೇಟ್ ಆದ ನಾಲೆಡ್ಜ್ ಇರುವ ಇಂತಹ ಪ್ರತಿಭೆಗಳನ್ನು ಕೈಬಿಟ್ಟು ದೊಡ್ಡ ತಪ್ಪು ಮಾಡುತ್ತಿದೆ. ಕೆಲವು ಹಳೆಹಡ್ಡಿಗಳು ನೆಗೆದು ಬಿದ್ದು ಹೋಗೋ ತನಕ ಅಲ್ಲಿ ಹೊಸಬರಿಗೆ ಅವಕಾಶ ಇಲ್ಲ. ಈ ಬಾರಿ ಟಿಕೆಟ್ ಕೊಟ್ಟು ರಾಜಕೀಯದ ಹೊಸ ಭಾಷ್ಯ ಬರೆಯಲು ಎಷ್ಟು ಜನ ಹೊಸ ಹೊಸ ಪ್ರತಿಭೆಗಳಿದ್ದರೂ ಆ ಪಕ್ಷದಲ್ಲಿ ನಡೆಯೋದೇ ಬೇರೆ ಅಂತಾಗಿದೆ. ಆ ಪಕ್ಷದ ಬಗ್ಗೆ ಹೊಸಬರಿಗೆ ಭರವಸೆ ಮತ್ತು ನಂಬಿಕೆಯಾದರೂ ಹೇಗೆ ಮೂಡಲು ಸಾಧ್ಯ?

ಈಗಲೂ ಎಚ್ಚೆತ್ತುಕೊಳ್ಳಲು ಅವಕಾಶ ಇದೆ. ಇಲ್ಲದೆ ಹೋದರೆ ಆ ಪಕ್ಷ ಕೇವಲ ಚರಿತ್ರೆಯ ದಾಖಲೆ ಮಾತ್ರವಾಗಿ ಕೋಮುವಾದಿಗಳು ತಿರುಚಿ ಬರೆದ ಇತಿಹಾಸದ ದುಷ್ಟ ಪಕ್ಷವಾಗಿ ಉಳಿಯುವ ಕಾಲ ದೂರವಿಲ್ಲ. ನ‌ನಗೆ ಇದು ತುಂಬಾ ಬೇಸರ ತಂದಿದೆ. ಕಾಂಗ್ರೆಸ್ ಪಕ್ಷಕ್ಕೆ ವಿಚಾರವಾದಿಗಳು ಬೇಡವೇ? ಬಂಗಾಳದ ಮೊಹುವಾ ಮೊಯಿತ್ರಾ ಅವರ ಹಾಗೆ ಕನ್ನಡದ ಮೊಹುವಾ ಮೊಯಿತ್ರಾ ನಮ್ಮ ಭವ್ಯಾ ನರಸಿಂಹಮೂರ್ತಿ ಮೇಡಮ್. ನಗುನಗುತ್ತಲೆ ವಿರೋಧ ಪಕ್ಷದವರ ಬಾಯಿ ಮುಚ್ಚಿಸುತ್ತಿದ್ದ ಈ ಜಾಣ ಮತ್ತು ಚುರುಕು ಬುದ್ದಿಯ ಹೆಣ್ಣುಮಗಳನ್ನು ಬದಿಗಿಡುತ್ತಾರೆಂದರೆ ಇವರೆಷ್ಟು ದಿವಾಳಿ ಎದ್ದುಹೋಗಿರಬೇಕು? ಇಂತಹ ಒಂದ್ ಹತ್ತು ಹೆಣ್ಣುಮಕ್ಕಳನ್ನು ಇಡೀ ರಾಜ್ಯದಲ್ಲಿ ಬೆಳೆಸಿ ನಿಲ್ಲಿಸಿದ್ದರೆ ಅದೊಂದು ಕ್ರಾಂತಿಕಾರಿ ನಿರ್ಧಾರವಾಗುತ್ತಿತ್ತು. ಜನರು ಕಾಂಗ್ರೆಸ್ ನಿಂದ ಹೊಸತನ್ನು ನಿರೀಕ್ಷಿಸುತ್ತಿದ್ದಾರೆ ಆದರೆ ಆ ಪಕ್ಷಕ್ಕೆ ತನ್ನಲ್ಲಿ ಬದಲಾವಣೆ ತಂದುಕೊಳ್ಳುವ ಉಮೇದಿಲ್ಲ. ಜನರು ತನ್ನಿಂದ ಏನು ನಿರೀಕ್ಷಿಸುತ್ತಿದ್ದಾರೆ ಎಂಬ ಪರಿಜ್ಞಾನವಿಲ್ಲ. ತಾನು ಬದಲಾಗದೆ ಬದಲಾವಣೆಯೇ ಸಾಧ್ಯವಿಲ್ಲ ಎಂಬ ಸಾಮಾನ್ಯ ಜ್ಞಾನವೇ ಇಲ್ಲ. ಕಾಂಗ್ರೆಸ್ ನ ಹಳೆಹಡ್ಡಿಗಳಿಗೆ ಒಳಗೊಳಗೆ ಇವಳ ಬಗ್ಗೆ ಭಯವಿರಬೇಕು. ಹೊಸ ತಲೆ ಮಾರಿನ ಯುವಕರನ್ನು ಬಳಸಿಕೊಂಡು ಹೀಗೆ ಜಾಡಿಸಿ ಒದೆಯುವ ಬುದ್ಧಿಯನ್ನು ಕಾಂಗ್ರೆಸ್ ಪಕ್ಷ ಮೊದಲು ಬಿಡಲಿ. ಇಂತಾ ರಾಜಕಾರಣ ಅತ್ಯಂತ ಅಸಹ್ಯ…. 😡😡😡😡

#bhavya_narasimhamurthy ಇದು ತುಂಬಾ ಅನ್ಯಾಯ…

– ಸುರೇಶ ಎನ್ ಶಿಕಾರಿಪುರ, ಚಿಂತಕರು

Leave a Reply