ಬಿಜೆಪಿಯಲ್ಲಿ ಪೂರ್ಣಾವಧಿ ಆಡಳಿತ ನಡೆಸಬಲ್ಲ ನಾಯಕರ ಕೊರತೆ ಇದೆಯೇ?: ಪ್ರಿಯಾಂಕ್ ಖರ್ಗೆ

4 months ago

ಬಿಜೆಪಿಯು ಕರ್ನಾಟಕದಲ್ಲಿ ಒಮ್ಮೆಯೂ ಸಹ ಸ್ವಂತ ಬಲದಲ್ಲಿ ಸಂಪೂರ್ಣ ಬಹುಮತದೊಂದಿಗೆ ಅಧಿಕಾರ ಬಂದಿರುವ ಇತಿಹಾಸವಿಲ್ಲ. ಆಪರೇಷನ್ ಕಮಲದ ಮೂಲಕ ವಾಮಮಾರ್ಗದಲ್ಲಿ ಅಧಿಕಾರ ಕಬಳಿಸಿಕೊಂಡ ಎರಡೇ ಅವಧಿಗಳಲ್ಲಿ ಒಟ್ಟು ಐದು ಬಾರಿ ಮುಖ್ಯಮಂತ್ರಿಗಳನ್ನು ಬದಲಾವಣೆ ಮಾಡಿದೆ. ಅವರಲ್ಲಿ ಪೂರ್ಣಾವಧಿ ಆಡಳಿತ ನಡೆಸಬಲ್ಲ ನಾಯಕರ ಕೊರತೆ ಇದೆಯೇ?

ಇಂತಹ ವಿಷಯಗಳ ಕುರಿತು ವಿಪಕ್ಷ ನಾಯಕರು ಚರ್ಚೆ ಮಾಡಲು ಸಿದ್ಧರಿದ್ದಾರೆಯೇ? ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಬ್ಯಾಂಕ್ವೆಟ್ ಹಾಲ್‌ನಿಂದ ಕಣ್ಣೀರಿಟ್ಟು ಹೊರಟು ಹೋಗಿದ್ದು ಏಕೆ ಎಂಬುದಕ್ಕೆ ಈವರೆಗೂ ಬಿಜೆಪಿ ನಾಯಕರಿಂದ ಉತ್ತರ ಬಂದಿಲ್ಲ.

ಕಾಂಗ್ರೆಸ್ ಪಕ್ಷದೊಳಗಿನ ಯಾವುದೇ ಗೊಂದಲಗಳನ್ನು ಪರಿಹರಿಸುವುದಕ್ಕೆ ಸಮರ್ಥವಾದ ಹೈಕಮಾಂಡ್ ಇದೆ. ಆದರೆ ಮನೆಯೊಂದು ನೂರು ಬಾಗಿಲಾಗಿರುವ ಬಿಜೆಪಿಯವರು ನಮಗೆ ಪಾಠ ಹೇಳಿಕೊಡಲು ಬರುತ್ತಿದ್ದಾರೆ. ಅವರು ವಿರೋಧ ಪಕ್ಷವಾಗಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಮೊದಲು ತಮ್ಮಲ್ಲಿನ ಹುಳುಕುಗಳನ್ನು ಸರಿಪಡಿಸಿಕೊಳ್ಳಲಿ.

– ಪ್ರಿಯಾಂಕ್ ಖರ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ

Leave a Reply