ಕಲೆ, ಸಾಹಿತ್ಯ ಅಧ್ಯಯನದಿಂದ ಭಾರತದ ಇತಿಹಾಸ ತಿಳಿಯುತ್ತದೆ: ಶ್ರೀವತ್ಸ

4 years ago

ಬೆಂಗಳೂರು: ಭಾರತದ 75ನೇ ಸ್ವಾತಂತ್ರ್ಯ ಆಚರಣೆ ಅಂಗವಾಗಿ “ಆಜಾದಿ ಕಾ ಅಮೃತ ಮಹೋತ್ಸವ” ಮತ್ತು ಇಂಟರ್ ನ್ಯಾಶನಲ್ ಆರ್ಟ್ಸ್ ಅಂಡ್ ಕಲ್ಚರಲ್ ಫೌಂಡೇಶನ್ ಸಂಸ್ಥೆಯ ದಶಮಾನೋತ್ಸವದ ಅಂಗವಾಗಿ ಇಂಟರ್ನ್ಯಾಷನಲ್ ಆರ್ಟ್ಸ್ ಅಂಡ್ ಕಲ್ಚರಲ್ ಫೌಂಡೇಶನ್ ವತಿಯಿಂದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಅಮೃತ್ ಕಲಾ ಮಹೋತ್ಸವದಲ್ಲಿ ವಿವಿಧ ಸಾಂಸ್ಕೃತಿಕ ಉತ್ಸವ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಇಂಟರ್ ನ್ಯಾಷನಲ್ ಆರ್ಟ್ಸ್ ಅಂಡ್ ಕಲ್ಚರಲ್ ಫೌಂಡೇಷನ್ ನಿರ್ದೇಶಕ ಶ್ರೀವತ್ಸ ಶಾಂಡಿಲ್ಯ, ಡಾ. ರಘು ಅಕಮಂಚಿ, ಡಾ.ರಘು ಮತ್ತು ಕೆ.ಆರ್.ಎಮ್.ಎಸ್.ಎಸ್. ಸಂದೀಪ ಬೂದಿಹಾಳ ಕಲಾವಿದರೊಂದಿಗೆ ಕಲಾ ಉತ್ಸವಕ್ಕೆ ಚಾಲನೆ ನೀಡಿದರು.

 ಶ್ರೀವತ್ಸ ಮಾತನಾಡಿ, ಭಾರತೀಯ ಕಲೆಯಾದ ಭರತನಾಟ್ಯ ,ಕೂಚುಪುಡಿ ಮತ್ತು ವಿವಿಧ ಕಲಾ ಪ್ರಕಾರಗಳು ವೇದಪುರಾಣಗಳ ಕಾಲದಿಂದಲೂ ಇವೆ. ಭಾರತೀಯ ಸಂಸ್ಕೃತಿ ಸಂಪ್ರಾದಯ ಇತಿಹಾಸ ತಿಳಿಯಬೇಕಾದರೆ ಪುರಾತನ ಕಲೆ, ಸಾಹಿತ್ಯ ಅಭ್ಯಾಸ ಮಾಡಿದರೆ ತಿಳಿಯತ್ತದೆ ಎಂದರು.

ಆಜಾದಿ ಕಾ ಅಮೃತ್ ಮಹೋತ್ಸವದ ಶುಭ ಸಂದರ್ಭದಲ್ಲಿ ನಮ್ಮ ಫೌಂಡೇಷನ್ ವತಿಯಿಂದ ನಮ್ಮ ಭಾರತೀಯ ಕಲಾ ಪ್ರದರ್ಶನ ಏರ್ಪಡಿಸಲಾಗಿದೆ. ಭಾರತೀಯ ನೃತ್ಯ ಕಲೆಯಲ್ಲಿ ಸಮಾಜಕ್ಕೆ ಸಂದೇಶ ಸಾರುವ ಅಂಶವಿದೆ. ಇಂದಿನ ಯುವಕರು ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ ಮತ್ತು ಭರತನಾಟ್ಯ, ಕೂಚುಪುಡಿ ಭಾರತೀಯ ವಿವಿಧ ಕಲೆಗಳನ್ನು ಕಲೆಯುವುದರಿಂದ ಮಾನಸಿಕ, ದೈಹಿಕವಾಗಿ ಬಲಿಷ್ಠರಾಗುತ್ತಾರೆ ಮತ್ತು ಉತ್ತಮ ಪ್ರಜೆಗಳಾಗಿ ಜೀವನ ಸಾಗಿಸಬಹುದು ಎಂದರು.

Leave a Reply