#75ನೇ_ವರ್ಷದ_ಸ್ವಾತಂತ್ರ್ಯೋತ್ಸವ: ಅಹೋರಾತ್ರಿ ಕಾರ್ಯಕ್ರಮ

4 years ago

ಸಿಐಟಿಯು ಬೆಂಗಳೂರು ಉತ್ತರ-ದಕ್ಷಿಣ-ರಾಮನಗರ ಜಿಲ್ಲಾ ಸಮಿತಿಗಳಿಂದ #75ನೇ_ವರ್ಷದ_ಸ್ವಾತಂತ್ರ್ಯೋತ್ಸವ: ಅಹೋರಾತ್ರಿ ಕಾರ್ಯಕ್ರಮ – ಟೌನ್ ಹಾಲ್ ಮುಂಭಾಗ, ಬೆಂಗಳೂರು. ಭೂಮಿ ತಾಯಿ ಬಳಗದಿಂದ ದೇಶಪ್ರೇಮಿ ಹಾಡುಗಳನ್ನು ಪ್ರಸ್ತುತಪಡಿಸಲಾಯಿತು.

ಹಿರಿಯ ಸಾಹಿತಿಗಳಾದ ಎಸ್.ಜಿ.ಸಿದ್ದರಾಮಯ್ಯರವರಿಂದ ಉದ್ಘಾಟನೆ,
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಕಾರ್ಮಿಕ ಮುಖಂಡರಾದ ಹೆಚ್.ಎನ್.ಗೋಪಾಲಗೌಡರವರಿಂದ ರಾಷ್ಟ್ರ ಧ್ವಜದ ಧ್ವಜಾರೋಹಣ: ರಾಷ್ಟ್ರ ಗೀತೆ. – ಸಂವಿಧಾನ ಪೀಠಿಕೆಯ ಪ್ರತಿಜ್ಞಾ ಸ್ವೀಕಾರ ನಡೆಯಿತು.

ಪ್ರಗತಿಪರ ಚಿಂತಕರು, ಗಾಂಧಿವಾದಿ ವಿ.ಪಿ.ಮೇನನ್, ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ, ಸಿಐಟಿಯು ರಾಜ್ಯ & ರಾಷ್ಟ್ರೀಯ ಮುಖಂಡರಾದ ಕೆ.ಎನ್.ಉಮೇಶ್, ಸಿಐಟಿಯು ರಾಜ್ಯ ಉಪಾಧ್ಯಕ್ಷರಾದ ಡಾ.ಪ್ರಕಾಶ್. ಕೆ, DHS ನ ರಾಜ್ಯ ಸಂಚಾಲಕರಾದ ಗೋಪಾಲಕೃಷ್ಣ ಅರಹಳ್ಳಿ, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ದೇವಿ ರವರು ಕಾರ್ಯಕ್ರಮದಲ್ಲಿ ಸೇರಿದ್ದ ನೂರಾರು ಜನರನ್ನು ಉದ್ದೇಶಿಸಿ ಮಾತನಾಡಿದರು.

ಕಾರ್ಯಕ್ರಮದ ಸ್ವಾಗತ ವನ್ನು ಸಿಐಟಿಯು ಬೆಂ.ದಕ್ಷಿಣ ಜಿಲ್ಲಾ ಅಧ್ಯಕ್ಷರಾದ ಬಿ.ಎನ್.ಮಂಜುನಾಥ್, ನಿರೂಪಣೆಯನ್ನು ಉತ್ತರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಪ್ರತಾಪ್ ಸಿಂಹ, ದಕ್ಷಿಣ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜು, ಉತ್ತರ ಜಿಲ್ಲಾ ಕಾರ್ಯದರ್ಶಿ ಪಿ.ಮುನಿರಾಜು ಹಾಗೂ ವಂದನಾರ್ಪಣೆ ಯನ್ನು ರಾಮನಗರ ಜಿಲ್ಲಾ ಅಧ್ಯಕ್ಷರಾದ ರಾಘವೇಂದ್ರ ಮಾಡಿದರು.

ಕಾರ್ಯಕ್ರಮದಲ್ಲಿ ಸಿಐಟಿಯು ರಾಜ್ಯ ಮುಖಂಡರಾದ ಕೆ.ಮಹಂತೇಶ್, ಟಿ.ಲೀಲಾವತಿ, ಮಾಲಿನಿ ಮೇಸ್ತಾ, ವಿವಿಧ ಸಂಘಟನೆಗಳ ರಾಜ್ಯ ಮುಖಂಡರಾದ ಜಿ.ಎನ್‌.ನಾಗರಾಜ್, ನಿತ್ಯಾನಂದಸ್ವಾಮಿ, ಚಂದ್ರಪ್ಪ ಹೋಸ್ಕೆರಾ, ಗೌರಮ್ಮ, ಕೆ.ಎಸ್.ವಿಮಲ, ಟಿ.ಸುರೇಂದ್ರ ರಾವ್ ಹಾಗೂ ಸಿಐಟಿಯು ಜಿಲ್ಲಾ, ವಿವಿಧ ಸಂಘಗಳ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.

Leave a Reply