೨೦೨೩-೨೪ರಲ್ಲಿ ಎಲ್ಲಾ ರಾಶಿಯವರಿಗೂ ಒಂದೇ ಭವಿಷ್ಯ

3 years ago

೨೦೨೩-೨೪ರಲ್ಲಿ ಎಲ್ಲಾ ರಾಶಿಯವರಿಗೂ ಒಂದೇ ಭವಿಷ್ಯ:

೨೦೨೩-೨೪ರ ಆರ್ಥಿಕ ವರ್ಷ ಇಂದಿನಿಂದ ಆರಂಭವಾಗಿದೆ. ಈ ವರ್ಷದಲ್ಲಿ ಎಲ್ಲ ರಾಶಿಯವರ ಭವಿಷ್ಯವೂ ಒಂದೇ ಇರುವ ಸಾಧ್ಯತೆಗಳು ನಿಚ್ಚಳವಾಗಿವೆ. ನಮ್ಮದು ʼಆತ್ಮ ನಿರ್ಭರ ಭಾರತʼ ಹೌದಾದರೂ ಅಂತಾರಾಷ್ಟ್ರೀಯ ಪರಿಸ್ಥಿತಿಗಳು ಬದಲಾಗುತ್ತಿರುವ ಕಾರಣ ವಸ್ತುಗಳ ಮೇಲಿನ ವೆಚ್ಚಗಳೂ ಏರಿಕೆಯಾಗುತ್ತಿವೆ.
1. ಇವತ್ತಿನಿಂದ ಟೋಲ್ ದರ ೭% ಹೆಚ್ಚಳವಾಗಿದೆ.
2. ಔಷಧಗಳ ದರ ೧೨% ಹೆಚ್ಚಿದೆ. ಇದರಿಂದಾಗಿ ಆಸ್ಪತ್ರೆಗಳು ಇನ್ನಷ್ಟು ದುಬಾರಿ ಆಗಲಿವೆ.
3. ಹಾಲಿನ ದರ ಮತ್ತೆರಡು ರೂಪಾಯಿ ಹೆಚ್ಚಲಿದೆಯೆಂದು ಹೇಳಲಾಗುತ್ತಿದೆ.
4. ವಿದ್ಯುತ್ ದರದಲ್ಲಿ ಹೆಚ್ಚಳ ಆಗಲಿದೆ.
5. ದೆಹಲಿಯಲ್ಲಿ ತರಕಾರಿ ಬೆಲೆ ಶೇಕಡಾ ೨೫ರಷ್ಟು ಹೆಚ್ಚಿದೆ.
6. ಕಡಿಮೆಯಾಗಿದ್ದ ಅಡುಗೆ ಎಣ್ಣೆ ಬೆಲೆ ಮತ್ತೆ ಏರಿದೆ.
7. ಪ್ಯಾಕ್ ಮಾಡಿದ ಉತ್ಪನ್ನಗಳ ಬೆಲೆ ಆಗಲೇ ಏರಿಕೆಯಾಗುತ್ತಲಿದೆ.
8. ಗ್ಯಾಸ್ ಸಿಲಿಂಡರ್ ಬೆಲೆ ಈ ವರ್ಷಾಂತ್ಯಕ್ಕೆ ರೂಪಾಯಿ ೨೦೦ರಷ್ಟು ಏರಲಿದೆ.
9. ಆಹಾರ ಹಣದುಬ್ಬರ ಶೇಕಡಾ ೯ರಷ್ಟು ಏರಿಕೆಯಾಗಲಿದೆಯಂತೆ!
10. ಪ್ರತಿ ದಿನ ಕುಡಿಯುವ ಕಾಫಿಯಿಂದ ಹಿಡಿದು ಎಲ್ಲಾ ತಿಂಡಿಗಳು ಶೇಕಡಾ ೫ರಷ್ಟು ದುಬಾರಿ ಆಗಲಿವೆ.
11. ಹೊಸ ಆರ್ಥಿಕ ವರ್ಷದಲ್ಲಿ ವಾಹನಗಳ ಬೆಲೆ ಇನ್ನಷ್ಟು ಹೆಚ್ಚಲಿವೆ.
12. ಉಕ್ಕು, ತಾಮ್ರ, ಅಲ್ಯೂಮಿನಿಯಂ ಮತ್ತು ಇತರ ಬಹೂಪಯೋಗಿ ಲೋಹಗಳ ಬೆಲೆ ಹೆಚ್ಚಾಗಲಿವೆ.
13. ದೊಡ್ಡ ಸಂಖ್ಯೆಯಲ್ಲಿ ಉದ್ಯೋಗ ಸೃಷ್ಟಿ ಆಗುವ ಸಾಧ್ಯೆತೆಗಳು ಕಂಡು ಬರುತ್ತಿಲ್ಲ.

ಹಿಂದೆ ಬೆಲೆ ಏರಿಕೆ ಆದಾಗ ಜನರು ಪ್ರತಿಭಟಿಸುತ್ತಿದ್ದುದರಿಂದ ಸರಕಾರ ಬಹಳ ಯೋಚಿಸಿ ಬೆಲೆ ಏರಿಕೆ ಮಾಡುತ್ತಿತ್ತು. ಆದರೆ ಈಗ ಬೆಲೆ ಏರಿಕೆಯನ್ನೇ ಸಮರ್ಥಿಸುವ ದೊಡ್ಡ ಜನವರ್ಗವೊಂದು ಭಾರತದಲ್ಲಿ ಸೃಷ್ಟಿಯಾಗಿರುವುದರಿಂದ ಸರಕಾರಕ್ಕೆ ಬೆಲೆ ಹೆಚ್ಚಿಸಲು ಯಾವುದೇ ಭಯವಿಲ್ಲ.
ಮುಂದಿನ ರಾಮ ನವಮಿಯ ಹೊತ್ತಿಗೆ ಅಯೋಧ್ಯೆಯಲ್ಲಿ ರಾಮಮಂದಿರದ ಉದ್ಘಾಟನೆ ಆಗಲಿದೆ. ಅಷ್ಟು ಹೊತ್ತಿಗೆ ಮಥುರಾದ ಕೃಷ್ಣ ಜನ್ಮ ಭೂಮಿ ವಿಷಯ ಮುಂದಕ್ಕೆ ಬರುವ ಎಲ್ಲ ಸಾಧ್ಯತೆಗಳು ಕಂಡು ಬರುತ್ತಿವೆ. ಈ ಘಟನೆಗಳು ಬೆಲೆ ಏರಿಕೆಯನ್ನು ಮರೆಗೆ ಸರಿಸಿ ಕೇಂದ್ರದಲ್ಲಿ ಮತ್ತೆ ಬಿಜೆಪಿ ಅಧಿಕಾರ ಹಿಡಿಯಲು ಸಹಾಯ ಮಾಡುತ್ತವೆ.
ಎಲ್ಲರಿಗೂ ಹೊಸ ಆರ್ಥಿಕ ವರ್ಷದ ಶುಭಾಶಯಗಳು.
ಖರ್ಚು ಕಡಿಮೆ ಮಾಡಿ. ಆರ್ಥಿಕ ಭವಿಷ್ಯ ನಿರೀಕ್ಷಿಸಿದಷ್ಟು ತೃಪ್ತಿಕರವಾಗಿಲ್ಲ ಎಂಬುದನ್ನು ಯಾವತ್ತೂ ಮರೆಯದಿರಿ.

– ಪುರುಷೋತ್ತಮ ಬಿಳಿಮಲೆ, ಹಿರಿಯ ಜಾನಪದ ವಿದ್ವಾಂಸರು

Leave a Reply