ಬೆಂಗಳೂರು: ದೇವರಾಣೆಗೂ ನಾನು ಯಾರ ಮೇಲೂ ಅತ್ಯಾಚಾರ ಮಾಡಿಲ್ಲ. ನಾನು ಅತ್ಯಾಚಾರ ಮಾಡಿದ್ದರೆ ರಕ್ತ ಕಾರಿ ಸಾಯುತ್ತೇನೆ… ಹೀಗೆ ಹೇಳಿದ್ದು ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ಮುನಿರತ್ನ.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಅತ್ಯಾಚಾರ ಹನಿಟ್ರ್ಯಾಪ್ ಸೇರಿದಂತೆ ಹಲವು ಆರೋಪ ಪ್ರಕರಣಗಳಲ್ಲಿ ಜೈಲು ಸೇರಿ ಇದೀಗ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಅವರು, ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದರು.
ಸತ್ಯ ಮಲಗಿರಬಹುದು. ಆದರೆ ಸಾಯಲ್ಲ. ಆ ಮಾರಮ್ಮನ ಮೇಲೆ ನಾನು ಆಣೆ ಮಾಡಿ ಹೇಳುತ್ತೇನೆ. ನಾನು ತಪ್ಪು ಮಾಡಿದ್ರೆ ಕ್ಷೇತ್ರದಲ್ಲಿ ರಕ್ತ ಕಾರಿ ಸಾಯಬೇಕು ಎಂದರು.
ನನ್ನ ಬಳಿ ಬಂದು ನೀನು ರಾಜೀನಾಮೆ ಕೊಡು ನಾನು ಶಾಸಕನಾಗುತ್ತೇನೆ ಎಂದು ಹೇಳಿದ್ದರೆ ತಕ್ಷಣವೇ ರಾಜೀನಾಮೆ ಕೊಟ್ಟು ಹೋಗುತ್ತಿದ್ದೆ. ಆದರೆ ಇಂತಹ ಸುಳ್ಳು ಆರೋಪ ಮಾಡಿ ಅವರು ಶಾಸಕರಾಗಲು ಹೊರಟಿದ್ದಾರೆ. ಅದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ಕೊಡುವುದಿಲ್ಲ ಎಂದರು.
ಯಾವುದೇ ಕಾರಣಕ್ಕೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ. ನನ್ನ ವಿರುದ್ಧ ಬಂದಿರುವ ಎಲ್ಲ ಆರೋಪಗಳ ಬಗ್ಗೆ ಕಾನೂನು ರೀತಿಯಲ್ಲಿ ಹೋರಾಟ ನಡೆಸುತ್ತೇನೆ ಎಂದರು.
ಆದಿಚುಂಚನಗಿರಿ ಕಾಲಭೈರವನ ಮೇಲೆ ಆಣೆ ಮಾಡ್ತೇನೆ. ನಾನು ಗುತ್ತಿಗೆದಾರನ ಹೆಣ್ಣುಮಗಳ ಬಗ್ಗೆ ಮಾತಾಡಿದ್ದರೆ, ನಾನು ಅತ್ಯಾಚಾರ ಮಾಡಿದ್ರೆ ರಕ್ತ ಕಾರಿ ಸಾಯುತ್ತೇನೆ, ನಾನು ಏನಾದ್ರು ತಪ್ಪು ಮಾಡಿದ್ರೆ ಹಾಗೆ ಸಾಯಬಾರದು. ರಕ್ತ ಕಾರಿ ಸಾಯಬೇಕು. ಸುಳ್ಳು ದೂರು ಕೊಡಬಾರದು. ಇವರ ಸ್ವಾರ್ಥಕ್ಕೋಸ್ಕರ ಅಷ್ಟರ ಮಟ್ಟಿಗೆ ಹೋಗಿದ್ದಾರೆ. ನನ್ನ ಬಳಿ ಯಾರೇ ಬಂದ್ರೂ ಏನಮ್ಮ, ತಾಯಿ ಅಂತೇನೆ. ಈ ಎರಡು ಪದ ಬಿಟ್ಟು ಬೇರೆ ಪದ ಉಪಯೋಗಿಸಲ್ಲ ಎಂದರು.




