ಅತಿಹೆಚ್ಚು ಅಂಕ ಗಳಿಸಿದ ಪತ್ರಕರ್ತರ ಮಕ್ಕಳಿಗೆ ಸನ್ಮಾನ

4 years ago

ಬೆಂಗಳೂರು: ಕರ್ನಾಟಕ ಪತ್ರಕರ್ತರ ಸಹಕಾರ ಸಂಘ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಪತ್ರಕರ್ತರ ಮಕ್ಕಳಿಗೆ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ (ಸಿಬಿಎಸ್‌ಇ) ಪರೀಕ್ಷೆಯಲ್ಲಿ ಶೇ.೯೫.೫ ರಷ್ಟು ಅಂಕ ಗಳಿಸಿ ಉತ್ತೀರ್ಣರಾದ ಮಲ್ಲೇಶ್ವರಂ ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿನಿ ಕು.ಲೋಚನಾ ಸಿ.ಎಸ್. ಅವರಿಗೆ ಕಿರುತೆರೆ ಯುವ ನಟ ಸಾಗರ್ ನಗದು, ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ರಾಘವೇಂದ್ರ, ಖಜಾಂಚಿ ಮುಂಜಾನೆ ಸತ್ಯ
ಸೇರಿದಂತೆ ಮತ್ತಿತರರ ಪದಾಧಿಕಾರಿಗಳು ಇದ್ದರು. ಕು.ಲೋಚನಾ ಸಿ.ಎಸ್. ಪತ್ರಕರ್ತ ಚೆನ್ನವೀರ ಸಗರನಾಳ ಅವರ ಪುತ್ರಿ.

Leave a Reply