ಸಾಹಿತ್ಯಪ್ರೇಮಿಯ ಅನಾರೋಗ್ಯ ನಿವಾರಣೆಗೆ ನೆರವಿಗೆ ಮನವಿ

4 years ago

ಇತ್ತೀಚಿನ ಸಾಹಿತ್ಯದ ಸಂಘಟನೆಗಳ ಕಾರ್ಯವೈಖರಿಯ ಕುರಿತು ಈ ಹಿಂದೆ ಇಲ್ಲಿ ಮತ್ತು ಒಂದೆರಡು ಪತ್ರಿಕೆಗಳಲ್ಲಿ ಬರೆದುಕೊಂಡಿದ್ದ ಲೇಖನ ಪ್ರಕಟಿಸಿದ ನೈಜ ಪತ್ರಕರ್ತರಿಗೆ ವಂದಿಸುತ್ತಾ….

ಬಹುಶಃ ೨೦೧೯ರ ಸಮಯದಲ್ಲಿ ಸಕಲೇಶಪುರದ ಕವಯಿತ್ರಿಯೊಬ್ಬರು ಆಹ್ವಾನ ಪತ್ರಿಕೆಯನ್ನು ಕಳುಹಿಸಿದ್ದರು. ಅದೊಂದು ಸಂಘಟನೆಯ ಸಕಲೇಶಪುರ ತಾಲೂಕಿನ ಅಧ್ಯಕ್ಷರಾಗಿ ಆಯ್ಕೆಯಾದ ಕವಯಿತ್ರಿ ತನ್ನ ತನು ಮನ ಧನವನ್ನು ಮನಃಪೂರ್ವಕವಾಗಿ ಆ ಸಂಘಟನೆಯ ಉದ್ದೇಶಗಳನ್ನು ಸಾಧಿಸಲು ತನ್ನ ಪತಿಯ ಸಹಕಾರ ಕೋರಿದ್ದಾರೆ. ಖ್ಯಾತ ಲೇಖಕರ ಅಧ್ಯಕ್ಷತೆಯಲ್ಲಿ ಪ್ರಥಮ ಸಮ್ಮೇಳನ ಎಂದು ಹೆಸರಿಸಿ ಬೀದರಿನ ಕೆಲವು ಹಿರಿಯ ಕಿರಿಯ ಕವಿಗಳಿಂದ ಹಿಡಿದು ಹಲವಾರು ಜನರನ್ನು ಕರೆಸಿ ಕಾರ್ಯಕ್ರಮದ ಆಯೋಜಕರ ಖರ್ಚಿನಲ್ಲಿ ಸನ್ಮಾನ ಮಾಡಿಸಿದ ಬಳಗದ ರಾಜ್ಯಾಧ್ಯಕ್ಷರು ಮತ್ತು ನಿರ್ದೇಶಕರು ಬಹು ಹೆಮ್ಮೆಯಿಂದ ಬೀಗಿಕೊಂಡರು.

ಕಾಲಚಕ್ರದ ಹೊಡೆತಕ್ಕೆ ಸಿಲುಕಿದ ಕವಯಿತ್ರಿ ಫರ್ಜಾನಾ ರಿಜ್ವಾನ್ ಅವರ ಪತಿ (ಅಂದಿನ ಸಮಾರಂಭದ ಸಂಪೂರ್ಣ ಖರ್ಚು ವೆಚ್ಚ ಭರಿಸಿದ್ದರು) ಇಂದು ಕ್ಯಾನ್ಸರ್ ಕಾಯಿಲೆಗೆ ತುತ್ತಾಗುವ ಮೂಲಕ ಕವಯಿತ್ರಿ ಫರ್ಜಾನ ರಿಜ್ವಾನ್ರವರ ಪಾಲಿಗೆ ನರಕವನ್ನೇ ಸೃಷ್ಟಿಸಿ ಹಾಸಿಗೆಯಲ್ಲಿ ಮಲಗಿದ್ದಾರೆ.

ಅಂದು ಸನ್ಮಾನಿಸಿದವರು ನನ್ನನ್ನೂ ಸೇರಿಸಿ ಸನ್ಮಾನಿಸಿಕೊಂಡವರು ಮತ್ತು ಹೆಮ್ಮೆಯಿಂದ ಬೀಗಿದ ರಾಜ್ಯಾಧ್ಯಕ್ಷರು ,ನಿರ್ದೇಶಕರೆಲ್ಲರೂ ಫರ್ಜಾನ ರಿಜ್ವಾನ್ರವರ ಪತಿಯ ಪರಿಸ್ಥಿತಿಯನ್ನು ತಿಳಿದೂ ತಿಳಿಯದವರಂತೆ ಕಣ್ಣು ಮುಚ್ಚಿ ಕುಳಿತಿದ್ದೇವೆ. ಇತ್ತೀಚೆಗೆ ಅಕಸ್ಮಾತ್ತಾಗಿ ಫರ್ಜಾನ ಅವರೊಂದಿಗೆ ಮಾತನಾಡುವ ಸಂದರ್ಭದಲ್ಲಿ ಈ ವಿಚಾರವೆಲ್ಲಾ ತಿಳಿಯಿತು.

#ಕೇವಲಪ್ರಶಸ್ತಿಸನ್ಮಾನಗಳಹಿಂದೆಹೋಗುವ_ಕವಿಗಳು
ಎಂದು ಕರೆಸಿಕೊಳ್ಳುವ ನಾವು ನಾಚಿಕೆಯೇ ಇಲ್ಲದಂತೆ ಇರುವುದು ನಿಜವಾಗಿಯೂ ನನಗೆ ಅಸಹ್ಯ ಎನಿಸುತ್ತದೆ. ಅಂದು ಸನ್ಮಾನಿಸಿಕೊಳ್ಳಲು ಮತ್ತು ಬಳಗದ ಹೆಸರು ಬಹುಬೇಗ ಜಗತ್ತಿನಾದ್ಯಂತ ಹರಡಲಿ ಎಂದು ಬಯಸಿದವರು ಇಂದು ಫರ್ಜಾನ ರಿಜ್ವಾನ್ರವರ ಪಾಲಿಗೆ ಅಲ್ಪ ನೆಮ್ಮದಿಯನ್ನು ನೀಡುವಂತಾದರೆ ನನ್ನ ಈ ಲೇಖನ ಸಾರ್ಥಕವಾದಂತೆ

ಅವರ ಗೂಗಲ್ ಪೇ ಮತ್ತು ಪೋನ್ ಪೇ ಖಾತೆಯ ಸಂಖ್ಯೆ 9008947969 ಆಗಿದ್ದು ಸಹಾಯಹಸ್ತ ನೀಡುವವರು ಸಹಕರಿಸಿ.

– ವೈಲೇಶ ಪಿ ಯೆಸ್ ಕೊಡಗು, ಬರಹಗಾರರು

Leave a Reply