ಬೆಂಗಳೂರು: ಮುಂಗಾರು ಮಳೆಯ ಅಬ್ಬರದ ನಡುವೆ ರಾಜ್ಯದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವಿನ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಂಡಿದೆ.
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
- ನಮ್ಮ ಪ್ರತಿಭೆಗಳು ದೆಹಲಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವುದು ಸಂತಸದ ವಿಷಯ: ಕೆ.ಸುಧಾಕರ್
ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಮತ್ತು ಜೆಡಿಎಸ್ ನಾಳೆಯಿಂದ ಬೆಂಗಳೂರಿನಿಂದ ಮೈಸೂರುವರೆಗೆ ಪಾದಯಾತ್ರೆ ನಡೆಸಲು ವೇದಿಕೆ ಸಿದ್ಧಗೊಳಿಸಿದ್ದರೆ, ಅದಕ್ಕಿಂತ ಒಂದು ದಿನ ಮೊದಲೇ ಕಾಂಗ್ರೆಸ್ ಜನಾಂದೋಲನ ಯಾತ್ರೆ ಮೂಲಕ ಬಿಜೆಪಿಗೆ ತಿರುಗೇಟು ಕೊಟ್ಟಿದೆ.
ಬಿಜೆಪಿ ಪಾದಯಾತ್ರೆ ಸಾಗುವ ಮಾರ್ಗದಲ್ಲಿ ಒಂದು ದಿನ ಮೊದಲು ಜನಾಂದೋಲನ ಸಮಾವೇಶದ ಮೂಲಕ ಕೇಂದ್ರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯಗಳು ಮತ್ತು ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಹಗರಣಗಳ ಬಗ್ಗೆ ಪ್ರಶ್ನಿಸಲು ಕಾಂಗ್ರೆಸ್ ಮುಂದಾಗಿದೆ.
ಅದರಂತೆ ಬಿಡದಿಯಲ್ಲಿ ಮೊದಲ ಜನಾಂದೋಲನ ಸಮಾವೇಶ ನಡೆಯಿತು. ಸಮಾವೇಶ ಉದ್ದೇಶಿಸಿ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಬಿಜೆಪಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಪ್ರಹಾರ ನಡೆಸಿದರು.
ಮುಡಾ ನಿವೇಶನ ಹಗರಣದ ಹೆಸರಲ್ಲಿ ಪಾದಯಾತ್ರೆ ಮಾಡುವ ಮೂಲಕ ಬಿಜೆಪಿ ಹಿಂದುಳಿದ ಸಮುದಾಯಕ್ಕೆ ಸೇರಿದ ಮುಖ್ಯಮಂತ್ರಿ ವರ್ಚಸ್ಸಿಗೆ ಮಸಿ ಬೆಳೆಯುವ ಪ್ರಯತ್ನ ನಡೆಸಿದೆ ಎಂದರು.
ಈ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಯಾವುದೇ ರೀತಿಯ ಪಾತ್ರ ಹೊಂದಿಲ್ಲ. ಬಿಜೆಪಿ ಸರ್ಕಾರ ಇದ್ದ ಅವಧಿಯಲ್ಲಿ ನಿಯಮ ಅನುಸರಿಸಿ ಸಿಎಂ ಪತ್ನಿಗೆ ಪರ್ಯಾಯ ನಿವೇಶನ ನೀಡಿದೆ. ಆದರೆ ಅದನ್ನು ಈಗ ರಾಜಕೀಯ ಕಾರಣಕ್ಕೆ ಬಳಸಿಕೊಳ್ಳಲು ಹೊರಟಿದ್ದಾರೆ ಎಂದರು.
ಬಿಜೆಪಿ ಮತ್ತು ಜೆಡಿಎಸ್ ನಡೆಸುತ್ತಿರುವ ಪಾದಯಾತ್ರೆ ಭ್ರಷ್ಟಾಚಾರಿಗಳ ಜೊತೆ ಭ್ರಷ್ಟರು ಸೇರಿಕೊಂಡು ಭ್ರಷ್ಟರಿಗಾಗಿ ನಡೆಸುತ್ತಿರುವ ಪಾದಯಾತ್ರೆ ಎಂದು ಆರೋಪಿಸಿದ ಅವರು, ಈ ಮೂಲಕ ಬಿಜೆಪಿ ಮತ್ತು ಜೆಡಿಎಸ್ ನ ಭ್ರಷ್ಟಾಚಾರಗಳ ಬಗ್ಗೆ ಜನರಿಗೆ ತಿಳಿಸಿಕೊಡುವ ಅವಕಾಶ ಕಲ್ಪಿಸಿ ಕೊಟ್ಟಿದ್ದಕ್ಕಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಕುಮಾರಣ್ಣ ನಿಮ್ಮ ತಂದೆ ಭೂಮಿಗೆ ಬಂದಾಗ ನಿಮ್ಮ ಜಮೀನು ಎಷ್ಟಿತ್ತು? ನೀವು ಎಷ್ಟು ಪಡೆದುಕೊಂಡಿರಿ? ಈಗ ಎಷ್ಟು ಎಕರೆ ಇದೆ? ಯಾರ ಹೆಸರಿನಲ್ಲಿ ಇತ್ತು, ಯಾರ ಹೆಸರಿಗೆ ಬಂತು, ನಿಮ್ಮ ಹೆಸರಿಗೆ ಯಾರಿಂದ ಬಂತು? ಇದಕ್ಕೆಲ್ಲಾ ನಿಮ್ಮ ಬಳಿ ದಾಖಲೆ ಇದೆಯಾ ಎಂದು ಕೇಳಿದರು.
ದೊಡ್ಡಗುಬ್ಬಿ ಚಿಕ್ಕ ಗುಬ್ಬಿ, ಬೆಂಗಳೂರು ಉತ್ತರ, ಯಲಹಂಕ, ಉತ್ತರಹಳ್ಳಿ, ಹಾಸನದಲ್ಲಿ ಜಮೀನು ಎಷ್ಟಿದೆ? ಅದರ ಬೆಲೆ ಎಷ್ಟು? ಬಾಲಕೃಷ್ಣೇಗೌಡ ಆಫೀಸರ್, ನಿಮ್ಮ ತಂದೆ ಗುತ್ತಿಗೆದಾರರು, ನೀವು ಸಿನಿಮಾ ತೋರಿಸುತ್ತಿದ್ದಿರಿ. ನಿಮ್ಮ ತಂದೆ ಗ್ರಾಂಟ್ ಮಾಡಿಸಿಕೊಂಡರು ಎಂದರು.
ಅದೇನೋ ಸಿನಿಮಾ ತೋರಿಸಿದೆ ಎನ್ನುತ್ತಿದ್ದರಲ್ಲಾ ವಿಧಾನಸಭೆಗೆ ಬನ್ನಿ ಎಂದು ಕರೆದೆ. ಆದರೆ, ನೀವು ಸಂಸತ್ತಿಗೆ ಹೋದ್ರಿ. ನಿಮ್ಮ ವಿರುದ್ಧದ ಆರೋಪಗಳ ಬಗ್ಗೆ ಬಹಿರಂಗ ಚರ್ಚೆಗೆ ನಾನು ಈಗಲೂ ಸಿದ್ದ ಎಂದರು.




