ರಾಜ್ಯ INBCWF ರಾಜ್ಯಾಧ್ಯಕ್ಷರಾಗಿ ಜಿ.ಆರ್.ದಿನೇಶ್ ನೇಮಕ

3 years ago

ಬೆಂಗಳೂರು: ಕಟ್ಟಡ ನಿರ್ಮಾಣ, ಅರಣ್ಯ, ಮರಗೆಲಸ ಮಾಡುವ ಕಾರ್ಮಿಕರ ಹಿತರಕ್ಷಣೆ ಮುಖ್ಯ ಎಂದು INBCWF ರಾಜ್ಯಾಧ್ಯಕ್ಷ ಜಿ.ಆರ್.ದಿನೇಶ್ ಹೇಳಿದರು.

ಬೆಂಗಳೂರು, ಕಾಂಗ್ರೆಸ್ ಭವನದಲ್ಲಿ ಕಾಂಗ್ರೆಸ್ ಪಕ್ಷದ ಅಂಗ ಸಮಿತಿಯಾದ
ಇಂಡಿಯನ್ ನ್ಯಾಷನಲ್ ಬಿಲ್ಡಿಂಗ್ ಕನ್ಸಷ್ಟ್ರಕ್ಷನ್ ಫಾರೆಸ್ಟ್ ಅಂಡ್ ವುಡ್ ವರ್ಕರ್ಸ್ ಫೆಡರೇಷನ್ ಕರ್ನಾಟಕದಲ್ಲಿ ಶಾಖೆಯ ರಾಜ್ಯಾಧ್ಯಕ್ಷರಾಗಿ ನೇಮಕವಾದ ನಂತರ INBCWF ರಾಷ್ಟ್ರೀಯ ಅಧ್ಯಕ್ಷ ಆರ್.ಸಿ.ಕುಂಟಿಯಾ, ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಅಧಿಕಾರ ಪದಗ್ರಹಣ ಮಾಡಿದ ನಂತರ ಮಾತಾಡಿ, ಕಟ್ಟಡ ನಿರ್ಮಾಣ, ಫಾರೆಸ್ಟ್ ಮತ್ತು ಮರಗೆಲಸ ಮಾಡುವವರು ರಾಜ್ಯದಲ್ಲಿ ಲಕ್ಷಾಂತರ ಜನರು ಇದ್ದಾರೆ. ಐ.ಎನ್.ಬಿ.ಸಿ.ಡಬ್ಯೂಎಫ್ (INBCWF) ಶ್ರಮಿಕ ವರ್ಗವನ್ನು ಗುರುತಿಸಿ ಸಾಮಾಜಿಕ ನ್ಯಾಯದ ಆಧಾರದಲ್ಲಿ, ಸ್ವಾವಲಂಬಿ ಜೀವನಕ್ಕೆ ಸಹಾಯ ಹಸ್ತ ನೀಡುವುದು ಎಂದರು.

ಕಾಂಗ್ರೆಸ್ ಪಕ್ಷದ ಅಂಗ ಸಂಸ್ಥೆಯಾದ ಐ.ಎನ್.ಬಿ.ಸಿ.ಡಬ್ಯೂ.ಎಫ್. ಕಳೆದ 26 ವರ್ಷಗಳ ಹಿಂದೆ ಸ್ಥಾಪನೆಯಾಗಿದೆ. ದೇಶದಲ್ಲಿ 26 ಲಕ್ಷ ಮತ್ತು ರಾಜ್ಯದಲ್ಲಿ 16 ಲಕ್ಷ ಸದಸ್ಯರನ್ನು ಹೊಂದಿದೆ. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ಸಿದ್ದಾಂತದಂತೆ ನಮ್ಮ ಸಂಘಟನೆ ನಡೆಯುತ್ತದೆ ಎಂದರು.

ಕಟ್ಟಡ ನಿರ್ಮಾಣ, ಅರಣ್ಯ ಮತ್ತು ವುಡ್ ಕೆಲಸ ಮಾಡುವವರು ಇಂದು ಆರ್ಥಿಕವಾಗಿ ಸಂಕಷ್ಟದಲ್ಲಿ ಇದ್ದಾರೆ. ಸಮರ್ಪಕ ಕೆಲಸವಿಲ್ಲ, ಕೆಲಸಕ್ಕೆ ತಕ್ಕಂತೆ ವೇತನವಿಲ್ಲ ಹಲವಾರು ಸಮಸ್ಯೆಗಳು ಕಾಡುತ್ತಿದೆ. ಕಾಂಗ್ರೆಸ್ ಪಕ್ಷದ ಅಂಗ ಸಮಿತಿ ಐ.ಎನ್.ಬಿ.ಸಿ.ಡಬ್ಯೂ.ಎಫ್ ಶ್ರಮಿಕ ವರ್ಗದವರನ್ನ ರಾಜ್ಯದ್ಯಂತ ಸಂಘಟನೆ ಮಾಡಲಾಗುವುದು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ INBCWF ಮಹತ್ವವಾದ ಹೋರಾಟ, ಸಂಘಟನೆ ಮಾಡಿ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವಂತೆ ಹಗಲಿರುಳು ಶ್ರಮಿಸಲಾಗುವುದು ಎಂದರು.

ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ರವರನ್ನು ಭೇಟಿ ಮಾಡಿ ಚುನಾವಣೆ ಪ್ರಣಾಳಿಕೆಯಲ್ಲಿ ಕಟ್ಟಡ ನಿರ್ಮಾಣ, ಫಾರೆಸ್ಟ್ ಕೆಲಸ ಮಾಡುವವರು, ಮರಕೆಲಸ ಮಾಡುವವರಿಗೆ ಪ್ರೋತ್ಯಾಹ ಧನ ಮತ್ತು ಸಾಲ ಸೌಲಭ್ಯ ಯೋಜನೆ ಮತ್ತು ಉಚಿತ ವಿಮಾ ಯೋಜನೆ ನೀಡಬೇಕು ಎಂಬುದು ಮನವಿ ಸಲ್ಲಿಸಲಾಗುವುದು ಎಂದರು.

ಕರ್ನಾಟಕ ಪ್ರದೇಶ ಪರಿಶಿಷ್ಟ ವಿಭಾಗದ ಅಧ್ಯಕ್ಷ ಧರ್ಮಸೇನ, ಕಾಂಗ್ರೆಸ್ ಪಕ್ಷ ಕಾರ್ಮಿಕ ಘಟಕದ ಅಧ್ಯಕ್ಷರಾದ ಪುಟ್ಟಸ್ವಾಮಿಗೌಡ, ಐ.ಎನ್.ಟಿ.ಯು.ಸಿ. ಅಧ್ಯಕ್ಷ ಲಕ್ಷ್ಮೀವೆಂಕಟೇಶ್, ಕಾಂಗ್ರೆಸ್ ಪಕ್ಷದ ಮುಖಂಡರು ಪಾಲ್ಗೊಂಡಿದ್ದರು.

Leave a Reply