ಬೆಂಗಳೂರು ನಗರವನ್ನು Zero Waste Cityಯನ್ನಾಗಿ ಮಾಡುವ ಗುರಿ: ಎ.ಎನ್.ನಟರಾಜ್ ಗೌಡ

3 months ago

ರೈತರಿಗೆ ಉತ್ತಮ ಇಳುವರಿಗಾಗಿ ಸಕಾಲಕ್ಕೆ ಕಾಂಪೋಸ್ಟ್ ಗೊಬ್ಬರ ವಿಲೇವಾರಿ ನಮ್ಮ ಗುರಿ

ಸಾರ್ವಜನಿಕರು ಹಸಿಕಸ, ಒಣಕಸ ವಿಂಗಡಣೆ ಮಾಡಿ

ಬೆಂಗಳೂರು: ಕಳೆದ ಎರಡು ತಿಂಗಳಲ್ಲಿ 5 ಸಾವಿರ ಟನ್ ಹಸಿ ಕಸವನ್ನು ಕಾಂಪೋಸ್ಚ್ ಗೊಬ್ಬರ ಮಾಡಿ ವಿವಿಧ ಜಿಲ್ಲೆಯ ರೈತರಿಗೆ ಸಬ್ಸಿಡಿ ಮೂಲಕ  ರೈತರಿಗೆ ನೀಡಲಾಗಿದೆ ಎಂದು ಕರ್ನಾಟಕ ಕಾಂಪೋಸ್ಟ್ ಅಭಿವೃದ್ದಿ ನಿಗಮ ನಿಯಮಿತ ಅಧ್ಯಕ್ಷ  ಎ.ಎನ್.ನಟರಾಜ್ ಗೌಡ ಹೇಳಿದರು.

ಜಿಬಿಎ ಕೇಂದ್ರ ಕಛೇರಿಯಲ್ಲಿರುವ ಕರ್ನಾಟಕ ಕಾಂಪೋಸ್ಟ್ ಅಭಿವೃದ್ದಿ ನಿಗಮ ನಿಯಮಿತದ ಕಾರ್ಯ ಯೋಜನೆ ರೂಪುರೇಷೆ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ  ಅವರು, ಪ್ರತಿ ಟನ್ ಕಾಂಪೋಸ್ಟ್ ಗೊಬ್ಬರಕ್ಕೆ 3600 ರೂ. ನಿಗದಿ ಮಾಡಲಾಗಿದೆ. ರಿಯಾಯಿತಿ ದರದಲ್ಲಿ 2000 ರೂ.ಗೆ ನೀಡಲಾಗಿದೆ ಎಂದರು.

ಕಾಂಪೋಸ್ಟ್  ಗೊಬ್ಬರದಿಂದ ಬಳಕೆಯಿಂದ ಮಣ್ಣಿನ ಫಲವತ್ತತೆ ಬರುತ್ತದೆ. ಉತ್ತಮ ಬೆಳೆ ಸಿಗುತ್ತದೆ. ರೈತರಿಗೆ ಸಕಾಲಕ್ಕೆ ಗೊಬ್ಬರ ಸಿಗಬೇಕು. ಉತ್ತಮ ಇಳುವರಿಯಾಗಬೇಕು ಎಂಬುದು ಸಂಸ್ಥೆಯ ಉದ್ದೇಶವಾಗಿದೆ ಎಂದರು.

ಬೆಂಗಳೂರು ನಗರದ ನಾಗರಿಕರು ಹಸಿ ಕಸ, ಒಣಕಸ ವಿಂಗಡಣೆ ಮಾಡುವುದರಿಂದ ನಗರ ಸ್ವಚ್ಚತೆ ಜೊತೆಗೆ ಕಾಂಪೋಸ್ಟ್ ಗೊಬ್ಬರ ತಯಾರಿಕೆಗೆ ಸಹಕಾರಿಯಾಗಲಿದೆ. ಜಿಬಿಎ ವ್ಯಾಪ್ತಿಯ 5 ಪಾಲಿಕೆಯ 369 ವಾರ್ಡ್ ಗಳಲ್ಲಿ ಹಸಿಕಸ, ಒಣಕಸ ವಿಂಗಡಣೆ ಜನ ಜಾಗೃತಿ ಅಭಿಯಾನ ಮತ್ತು ಪಾಲಿಕೆ ವ್ಯಾಪ್ತಿಯಲ್ಲಿ ಕಾಂಪೋಸ್ಟ್ ಗೊಬ್ಬರ ತಯಾರಿಕೆ ಮಾಡುವ ಘಟಕಗಳಿಗೆ ಸ್ಥಾಪನೆ ಒತ್ತು ನೀಡಲಾಗುವುದು ಎಂದರು.

ಬೃಹತ್ ತ್ಯಾಜ್ಯ ಉತ್ಪಾದಕರ ನಿರ್ವಹಣೆ: ನಗರದ ಪ್ರಮುಖ ವಾಣಿಜ್ಯ ಸಂಕೀರ್ಣಗಳು (Commercial Complexes) ಹಾಗೂ ವಸತಿ ಸಮುಚ್ಚಯಗಳಲ್ಲಿ (Apartments) ಸ್ಥಳೀಯವಾಗಿಯೇ ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ಅಳವಡಿಸುವ ಮೂಲಕ ತ್ಯಾಜ್ಯ ಸಾಗಾಣಿಕೆ ಹೊರೆಯನ್ನು ತಗ್ಗಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದರು

ಉದ್ಯಾನವನಗಳಲ್ಲಿ ಹಸಿರು ಗೊಬ್ಬರ: ನಗರದ ದೊಡ್ಡ ಉದ್ಯಾನವನಗಳಲ್ಲಿ (Big Parks) ಕಾಂಪೋಸ್ಟ್ ಘಟಕಗಳನ್ನು ಸ್ಥಾಪಿಸಿ, ಅಲ್ಲಿ ಉದುರುವ ಎಲೆಗಳು ಮತ್ತು ಹಸಿ ತ್ಯಾಜ್ಯವನ್ನು ಗೊಬ್ಬರವನ್ನಾಗಿ ಪರಿವರ್ತಿಸಿ, ಅದನ್ನು ಉದ್ಯಾನವನದ ಗಿಡಮರಗಳ ಪೋಷಣೆಗೆ ಬಳಸಲು ಯೋಜನೆ ರೂಪಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಬೆಂಗಳೂರು ನಗರವನ್ನು “Zero Waste City” (ಶೂನ್ಯ ತ್ಯಾಜ್ಯ ನಗರ) ಯನ್ನಾಗಿ ಮಾಡುವ ಗುರಿ ಹೊಂದಲಾಗಿದೆ ಎಂದರು.

ಸಾಮರ್ಥ್ಯ ಹೆಚ್ಚಳ: ಪ್ರತಿನಿತ್ಯ ಉತ್ಪತ್ತಿಯಾಗುವ ಹಸಿ ತ್ಯಾಜ್ಯವನ್ನು ತ್ವರಿತವಾಗಿ ಗೊಬ್ಬರವನ್ನಾಗಿ ಪರಿವರ್ತಿಸಲು ಆಧುನಿಕ ತಂತ್ರಜ್ಞಾನ ಅಳವಡಿಕೆ ಮಾಡಲಾಗುವುದು ಎಂದರು.

ದುರ್ವಾಸನೆ ನಿಯಂತ್ರಣ: ತ್ಯಾಜ್ಯ ಸಂಸ್ಕರಣಾ ಘಟಕದ ಸುತ್ತಮುತ್ತಲಿನ ನಿವಾಸಿಗಳಿಗೆ ತೊಂದರೆಯಾಗದಂತೆ ವಾಸನೆ ನಿಯಂತ್ರಣಕ್ಕೆ (Odour Control) ಹೊಸ ವೈಜ್ಞಾನಿಕ ಕ್ರಮಗಳು ಜಾರಿ ಮಾಡಲಾಗುವುದು. ಆಧುನಿಕ ತಂತ್ರಜ್ಞಾನ , ವೈಜ್ಞಾನಿಕ ಕ್ರಮ ಅಳವಡಿಕೆ ಮಾಡಿ, ಗೊಬ್ಬರ ತಯಾರಿಕೆ ಹೆಚ್ಚು ಮಾಡಲಾಗುವುದು ಎಂದರು.

ರೈತರಿಗೆ ಸಕಾಲಕ್ಕೆ ಗೊಬ್ಬರ ತಲುಪಿಸಲು ರೈತ ಸಂಪರ್ಕ ಕೇಂದ್ರ ಮೂಲಕ ಗೊಬ್ಬರ ತಲುಪಿಸುವ ವಿಶೇಷ ಅಭಿಯಾನ ಮೂಲಕ ತಲುಪಿಸಲಾಗುವುದು.

ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಸಹಕಾರ, ಬೆಂಬಲದಿಂದ ಸುಂದರ, ಸ್ವಚ್ಚ ನಗರ ನಿರ್ಮಾಣ, ರೈತ ಸ್ನೇಹಿ ಆಡಳಿತ ನಮ್ಮ ಗುರಿ ಎಂದರು.

Leave a Reply