ಬೆಂಗಳೂರು: ಅಖಿಲ ಕರ್ನಾಟಕ ಕನ್ನಡ ಚಳುವಳಿ ಕೇಂದ್ರ ಸಮಿತಿ ವತಿಯಿಂದ ಕನ್ನಡ ಹೋರಾಟಗಾರ ಜಿ.ನಾರಾಯಣ ಕುಮಾರ್ ಸಂಸ್ಮರಣೆ ಹಾಗೂ ಜೀನಾಕು ಪ್ರಶಸ್ತಿ ಪ್ರಧಾನ ಸಮಾರಂಭವನ್ನು ವಿಜಯನಗರದ ಶ್ರೀಬಾಲಗಂಗಾಧರನಾಥಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜಿಸಲಾಯಿತು. ಸಮಾರಂಭವನ್ನು ವಸತಿ ಸಚಿವವಿಸೋಮಣ್ಣಉದ್ಘಾಟಿಸಿದರು.
ಸಾಹಿತ್ಯಪರಿಷತ್ ಅಧ್ಯಕ್ಷ ಮಹೇಶ್ ಜೋಷಿ, ನಿರ್ಮಾಪಕ ಸಾ.ರಗೋವಿಂದು, ರಂಗತಜ್ಞ ಹಾಗೂ ಪ್ರಗತಿಪರ ಚಿಂತಕ ಡಾ.ಎ.ಆರ್.ಗೋವಿಂದಸ್ವಾಮಿ, ವಿಧಾನಪರಿಷತ್ ಸದಸ್ಯ ಶರವಣ, ಸಂಘದ ಅಧ್ಯಕ್ಷ ಗುರುದೇವ್ ನಾರಾಯಣ್ ಮುಂತಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಪ್ರವೀಣ್ ಕುಮಾರ್ ಶೆಟ್ಟಿ, ಡಾ.ಬಿ.ಆರ್.ಕಿಶೋರ್ ಅವರಿಗೆ ಜೀನಾ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇದೆ ಸಂದರ್ಭದಲ್ಲಿ ಕನ್ನಡ ಚಳುವಳಿಗಾರರು, ಕಲಾವಿದರು, ಸಮಾಜಸೇವಕರನ್ನು, ಪ್ರಗತಿಪರ ಚಿಂತಕರನ್ನುಗೌರವಿಸಲಾಯಿತು.



