ಎಂ.ನಾಗರಾಜ್ ಸ್ಮರಣೆಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

4 years ago

ಬೆಂಗಳೂರು: ಮಹಾಲಕ್ಷ್ಮೀಲೇಔಟ್ ವಿಧಾನಸಭಾ ಕ್ಷೇತ್ರದ ನಂದಿನಿ ಬಡಾವಣೆ, ಜೈ ಮಾರುತಿನಗರ ಬಯಲು ರಂಗ ಮಂದಿರದಲ್ಲಿ ಮಾಜಿ ವಿರೋಧ ಪಕ್ಷದ ನಾಯಕ ಎಮ್.ನಾಗರಾಜ್ ಸ್ಮರಣೆ ಮತ್ತು ಹುಟ್ಟುಹಬ್ಬದ ಅಚರಣೆ ಮತ್ತು ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಎಂ.ನಾಗರಾಜ್ ಸೇವಾ ಕೇಂದ್ರ ವತಿಯಿಂದ ಆಯೋಜಿಸಲಾಗಿತ್ತು.

ಎಂ.ನಾಗರಾಜ್ ಸೇವಾ ಕೇಂದ್ರದ ಅಧ್ಯಕ್ಷ, ಮಂಡಲ ಬಿ.ಜೆ.ಪಿ. ಪ್ರಧಾನ ಕಾರ್ಯದರ್ಶಿ ರಾಘವೇಂದ್ರ, ಶಿಲ್ಪಿ ರಾಘವೇಂದ್ರರವರು ಮತ್ತು ಸ್ಥಳೀಯರು ಎಂ.ನಾಗರಾಜ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಉಚಿತ ಆರೋಗ್ಯ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿದರು.

ರಾಘವೇಂದ್ರ ಮಾತನಾಡಿ, ಅಬಕಾರಿ ಸಚಿವ ಗೋಪಾಲಯ್ಯರವರ ಸಹಕಾರ ಮತ್ತು ಸಮಾಜ ಸೇವಕರಾದ ಎಂ.ನಾಗರಾಜ್ ರವರು ಮೂರು ಬಾರಿ ಪಾಲಿಕೆ ಸದಸ್ಯರಾಗಿ ಜನಾನುರಾಗಿ ಬಡವರ ಸೇವೆ ಮಾಡಿದರು. ಎಂ.ನಾಗರಾಜ್ ರವರು 40 ವರ್ಷಗಳ ಕಾಲ ಬಡವರ ಸೇವೆಯಲ್ಲಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು. ಅವರ ಸ್ಮರಣೆಯಲ್ಲಿ ಎಂ.ನಾಗರಾಜ್ ಸೇವಾ ಕೇಂದ್ರ ಆರಂಭಿಸಲಾಗಿದೆ ಎಂದರು.

ನಮ್ಮ ಸಂಸ್ಥೆಯಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ ಮತ್ತು ವಿದ್ಯಾರ್ಥಿ ವೇತನ ಮತ್ತು ಉಚಿತ ಪುಸ್ತಕ ವಿತರಣೆ ಮತ್ತು ಸರ್ಕಾರದ ವಿವಿಧ ಸೌಲಭ್ಯಗಳನ್ನು ಜನರಿಗೆ ತಲುಪಿಸಲು ಸೇವಾ ಕೇಂದ್ರ ಶ್ರಮಿಸುತ್ತಿದೆ. ಆರ್ಥಿಕವಾಗಿ ಹಿಂದುಳಿದ, ಧ್ವನಿ ಇಲ್ಲದಿರುವ ಜನರಿಗೆ ಧ್ವನಿಯಾಗಿ ತಮ್ಮ ಜೀವನ ಉದ್ದಕ್ಕೂ ಶ್ರಮಿಸಿದ ಎಂ.ನಾಗರಾಜ್ ರವರ ಆದರ್ಶ, ಮಾರ್ಗದರ್ಶನದಲ್ಲಿ ಸಮಾಜಮುಖಿ ಕಾರ್ಯಗಳು ನಡೆಯುತ್ತಿವೆ ಎಂದರು.

ಉಚಿತ ಆರೋಗಯ ತಪಾಸಣೆ ಶಿಬಿರದಲ್ಲಿ ಸಕ್ಕರೆ ಖಾಯಿಲೆ, ಬಿ.ಪಿ., ನೇತ್ರ ಪರೀಕ್ಷೆ, ಇ.ಸಿ.ಜಿ. ಪರೀಕ್ಷೆ ಮತ್ತು ವಿವಿಧ ಖಾಯಿಲೆಗಳಿಗೆ ತಪಾಸಣೆ  ಹಾಗೂ ಉಚಿತವಾಗಿ ಔಷಧಿ ವಿತರಣೆ ಮಾಡಲಾಯಿತು.

Leave a Reply