ಬಡವರಿಗೆ ಅನ್ನ, ವಸತಿ, ಆರೋಗ್ಯ ಮತ್ತು ಉದ್ಯೋಗ ಒದಗಿಸುವುದು ನಮ್ಮ ಸಂಕಲ್ಪ: ವಿ.ಸೋಮಣ್ಣ

5 years ago

ವಿ.ಸೋಮಣ್ಣ ಜನ ಮತ್ತು ದೇವರು ಮೆಚ್ಚುವ ಕೆಲಸ ಮಾಡುತ್ತಿದ್ದಾರೆ: ಬಸವರಾಜ ಬೊಮ್ಮಾಯಿ

ಕೊವಿಡ್ ಮೂರನೇ ಅಲೆ ತಡೆಗಟ್ಟಲು 24 ಸಾವಿರ ಆಕ್ಸಿಜನ್ ಬೆಡ್ ವ್ಯವಸ್ಥೆ ಹಾಗೂ 5 ಸಾವಿರ ವೆಂಟಿಲೇಟರ್ ಬೆಡ್ ವ್ಯವಸ್ಥೆ

ಗೋವಿಂದರಾಜನಗರ ವಿಧಾನಸಭಾ ಪೊಲೀಸ್ ಠಾಣೆ ಮತ್ತು ಮಾರೇನಹಳ್ಳಿ 80 ಬೆಡ್ ಐ.ಸಿ.ಯು. ಆಸ್ಪತ್ರೆ ಶೀಘ್ರದಲ್ಲಿ ಉದ್ಘಾಟನೆ

ಬೆಂಗಳೂರು: ಬಡವರಿಗೆ ಅನ್ನ, ವಸತಿ ಮತ್ತು ಆರೋಗ್ಯ, ಉದ್ಯೋಗವನ್ನು ಎಲ್ಲರಿಗೂ ಕಲ್ಪಿಸಬೇಕು ಎಂಬುದು ನನ್ನ ಗುರಿ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.

ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ  ಗೋವಿಂದರಾಜ ನಗರ ವಾರ್ಡ್ ನಲ್ಲಿ ಬಡವರು, ಬೀದಿಬದಿಯ ವ್ಯಾಪಾರಿಗಳು, ಆರ್ಥಿಕವಾಗಿ ಹಿಂದುಳಿದವರಿಗೆ ಮತ್ತು ವಿಕಲಚೇತನರಿಗೆ ಆಹಾರ ಕಿಟ್ ವಿತರಣೆ ನಂತರ ಮಾತಾಡಿದ ಅವರು, ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಇನ್ನು 15 ದಿನದಲ್ಲಿ ನೂತನ ಪೊಲೀಸ್ ಠಾಣೆ ಆರಂಭಿಸಲಾಗುವುದು ಮತ್ತು ಮಾರೇನಹಳ್ಳಿ ವಾರ್ಡ್ ನಲ್ಲಿ ಕೊವಿಡ್ ಸೋಂಕಿತರಿಗೆ 80 ಬೆಡ್ ಆಸ್ಪತ್ರೆ ಅತಿ ಶೀಘ್ರದಲ್ಲಿ ಲೋಕರ್ಪಣೆಯಾಗಲಿದೆ ಎಂದರು.

ಕೊವಿಡ್-19 ನಿಯಂತ್ರಣದಲ್ಲಿ ಜನ ಕಡ್ಡಾಯವಾಗಿ ಮಾಸ್ಕ್ ಧರಿಸಿ ಮತ್ತು ಕೊವಿಡ್ ಲಸಿಕೆ ಹಾಕಿಸಿಕೊಳ್ಳಿ. ಪ್ರಧಾನಮಂತ್ರಿ ನರೇಂದ್ರಮೋದಿರವರು ನವಂಬರ್ ವರೆಗೆ 80 ಕೋಟಿ ಬಿ.ಪಿ.ಎಲ್. ಕಾರ್ಡ್ ದಾರರಿಗೆ ಉಚಿತವಾಗಿ ಅಕ್ಕಿ ನೀಡಲಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಮಾತಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ರಾಜ್ಯದಲ್ಲಿ ಸರ್ಕಾರದ ದಿಟ್ಟ ಕ್ರಮದಿಂದ ಕೊವಿಡ್-19 ಸೋಂಕು ನಿಯಂತ್ರಣದಲ್ಲಿ ಇದೆ. ಕೊವಿಡ್ ಮೂರನೇ ಅಲೆ ತಡೆಗಟ್ಟಲು 24 ಸಾವಿರ ಆಕ್ಸಿಜನ್ ಬೆಡ್ ವ್ಯವಸ್ಥೆ ಹಾಗೂ 5 ಸಾವಿರ ವೆಂಟಿಲೇಟರ್ ಬೆಡ್ ವ್ಯವಸ್ಥೆ ಮಾಡಲಾಗಿದೆ ಎಂದರು.

ವಸತಿ ಸಚಿವ ವಿ.ಸೋಮಣ್ಣ ಬಡಜನರಿಗೆ ನೆರವಾಗಲು ಆಹಾರ ಕಿಟ್ ವಿತರಣೆ ಮತ್ತು ಕೊವಿಡ್ ಉಸ್ತುವಾರಿಯಲ್ಲಿ ಸಾಂಕ್ರಮಿಕ ರೋಗ ನಿಯಂತ್ರಣ ಮಾಡಲು ಯಶ್ವಸಿಯಾಗಿದ್ದಾರೆ. ಅವರು ಜನ ಮತ್ತು ದೇವರು ಮೆಚ್ಚುವ ಕೆಲಸ ಮಾಡಿದ್ದಾರೆ ಎಂದರು.

ರಾಜ್ಯ ಬಿ.ಜೆ.ಪಿ. ಯುವ ಮುಖಂಡ ಡಾ.ಅರುಣ್ ಸೋಮಣ್ಣ ಮತ್ತು ಬಿಬಿಎಂಪಿ ಮಾಜಿ ಸದಸ್ಯರಾದ ಕೆ.ಉಮೇಶ್ ಶೆಟ್ಟಿ, ದಾಸೇಗೌಡ, ಶಂಕುತಲ ಡೊಡ್ಡಲಕ್ಕಪ್ಪ, ಜಯರತ್ನ, ಪಲ್ಲವಿ ಚನ್ನಪ್ಪ, ಗೋವಿಂದರಾಜನಗರ ಬಿ.ಜೆ.ಪಿ. ಮಂಡಲ ಅಧ್ಯಕ್ಷ ವಿಶ್ವನಾಥಗೌಡ ಹಾಗೂ ಕೊಳಚೆ ನಿರ್ಮೂಲನ ಮಂಡಳಿ ನಿರ್ದೇಶಕ ಕ್ರಾಂತಿರಾಜು ಮೊದಲಾದವರು ಹಾಜರಿದ್ದರು.

Leave a Reply