ಸಮಸ್ಯೆ ಅನಾವರಣಗೊಳಿಸಿದ ಡಾ. ಪ್ರಕಾಶ್ ಮಂಟೇದ
ಇವರು ವೆಂಕಟರಾಮಯ್ಯ ಅಂತ. ಕಾಡಭಕ್ತರ ಹಳ್ಳಿ, ದೊಡ್ಡಬೆಳವಂಗಲ, ದೊಡ್ಡಬಳ್ಳಾಪುರದವರು. ಕೊಳಲು, ಡೋಲು ನುಡಿಸುವ ಸ್ಥಳೀಯ ಕಲಾವಿದರು. ಕೊರೊನ ಲಾಕ್ಡೌನ್ ನಿಂದಾಗಿ ಇವರಿಗೆ ಕೆಲಸ ಇಲ್ಲ. ಈಗ ಮನೆ ಮನೆ ತಿರುಗಿ ಕೊಳಲನ್ನು ನುಡಿಸುತ್ತಿದ್ದಾರೆ. ಬದುಕು ಇಷ್ಟು ದುಸ್ತರವಾಗಿದೆ ಎಂದು ಅಧ್ಯಾಪಕ ಡಾ. ಪ್ರಕಾಶ್ ಮಂಟೇದ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಹರಿಕತೆ, ನಾಟಕ ಹಾಗೂ ಡೋಲು ಬಾರಿಸೋದು ಇವರ ಕಲಾವೃತ್ತಿ. ಇದೇ ಅವರ ಬದುಕು ಕೂಡ. ಆದರೆ ಈಗ ಮದುವೆ, ಕುಟುಂಬಗಳ ಕಾರ್ಯಕ್ರಮಗಳು ಇಲ್ಲದೆ ಇರೋದ್ರಿಂದ ಇವರ ಹೊಟ್ಟೆಪಾಡು ಈ ಸ್ಥಿತಿಗೆ ಬಂದಿದೆ. ಸ್ಥಳೀಯ ಕಲಾವಿದರ ಗೋಳನ್ನು ಕೇಳುವರಾರೂ ಇಲ್ಲ ಎನ್ನುವಂತಾಗಿದೆ ಎಂದಿದ್ದಾರೆ.
ಕೊಳಲನ್ನು ನುಡಿಸ್ತೀರ ಅಂತ ಕೇಳಿದರೆ ಹೌದು ಸ್ವಾಮಿ. ಈ ಯಮ್ಮ ಅಂದರೆ ಕೊಳನ್ನು ನುಡಿಸ್ತಾ ಏನೋ ಹೀಗೆ ತಿರುಗ್ತಿದ್ದೀನಿ ಅಂತ ಅಸಹಾಯಕ ಮುಖಭಾವದಿಂದ ಒಂದೆರಡು ಹಾಡುಗಳನ್ನು ನುಡಿಸಿದರು. ಈ ಕೊರೊನ ಈ ಲಾಕ್ಡೌನ್ ಹಿಂಗೆ ಎಷ್ಟು ಜನರ ಬದುಕನ್ನು ಮೂರಾಬಟ್ಟೆ ಮಾಡಿಬಿಟ್ಟಿದೆ. ರಾಜಕಾರಣಿಗಳು, ಅಧಿಕಾರಿಗಳು ಇಂತಹ ಜೀವಿಗಳ ಸಂಕಷ್ಟವನ್ನು ಊಹೆ ಕೂಡ ಮಾಡಿರಲಾರರು. ಆ ಮಟ್ಟದಲ್ಲಿದೆ ಇವರ ಜೀವನ ಎಂದು ಸಮಸ್ಯೆಗಳನ್ನು ವಿವರಿಸಿದ್ದಾರೆ.




