24 ಕ್ಷೇತ್ರಗಳ ಜನತೆಯಲ್ಲಿ ಮೊದಲಿಗೆ ಕ್ಷಮೆ ಕೇಳುತ್ತೇವೆ: ರವಿಕೃಷ್ಣಾ ರೆಡ್ಡಿ

3 years ago

ಮನ್ನಿಸಿ

ಈ ಕೆಳಕಂಡ 24 ಕ್ಷೇತ್ರಗಳ ಜನತೆಯಲ್ಲಿ ಮೊದಲಿಗೆ ಕ್ಷಮೆ ಕೇಳುತ್ತೇವೆ. ಅದಕ್ಕೆ ಮೊದಲು…

  • ಬರೋಬ್ಬರಿ 200 ಕ್ಷೇತ್ರಗಳಲ್ಲಿ KRS ಪಕ್ಷದ ಅಭ್ಯರ್ಥಿಗಳಿಂದ ನಾಮಪತ್ರ.
  • ರಾಜ್ಯದ 31 ಜಿಲ್ಲೆಗಳಲ್ಲಿಯೂ ಸ್ಪರ್ಧೆ.
  • 20 ಜಿಲ್ಲೆಗಳಲ್ಲಿ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಕೆ.

ಆದರೆ ಈ ಕೆಳಗೆ ನಮೂದಿಸಿರುವ ಕ್ಷೇತ್ರಗಳ ಮತದಾರರಿಗೆ ನಾವು KRS ಪಕ್ಷದ ಆಯ್ಕೆಯನ್ನು ನೀಡಲು ವಿಫಲರಾದೆವು. ಈ ಕ್ಷೇತ್ರಗಳ ಜನರನ್ನು ತಲುಪಲು ನಮ್ಮಿಂದ ಆಗಲಿಲ್ಲವೋ, ಅಥವ ಅವರನ್ನು ತಲುಪಿಯೂ ಆ ಕ್ಷೇತ್ರದ ಜನರಿಗೆ KRS ಪಕ್ಷದ ಕುರಿತು ವಿಶ್ವಾಸ ಮೂಡಿಸುವಲ್ಲಿ ನಮ್ಮ ಅಸಾಮರ್ಥ್ಯವೋ, ಅಥವ ಯಾವುದೋ ಕಾರಣಗಳಿಂದ ಆ ಕ್ಷೇತ್ರದ ಜನರಿಗೆ ನಮ್ಮ ಪಕ್ಷ ಪ್ರತಿಪಾದಿಸುತ್ತಿರುವ ವಿಚಾರಗಳ ಬಗ್ಗೆ ಇರಬಹುದಾದ ಅಸಡ್ಡೆಯೋ, ಅಥವ ಇನ್ಯಾವ ಕಾರಣವೋ, ಅಂತೂ ಈ ಕ್ಷೇತ್ರಗಳಲ್ಲಿ ನಮ್ಮ #ಶತಪ್ರಯತ್ನದ ಹೊರತಾಗಿಯೂ ನಾವು ಅಭ್ಯರ್ಥಿಗಳನ್ನು ಹಾಕುವಲ್ಲಿ ವಿಫಲರಾದೆವು. ಹಾಗಾಗಿ ಈ 24 ಕ್ಷೇತ್ರಗಳ ಪ್ರಾಮಾಣಿಕ ಮತದಾರರಲ್ಲಿ ನಾವು ಕ್ಷಮೆ ಕೇಳುತ್ತೇವೆ. ಮನ್ನಿಸಿ. ಮುಂದಕ್ಕೆ ಹೀಗೆ ಆಗುವುದಿಲ್ಲ.

ನಿಪ್ಪಾಣಿ, ಕುಡಚಿ, ರಾಯಭಾಗ, ಗೋಕಾಕ್, ಯಮಕನಮರಡಿ, ಆಳಂದ, ಶೋರಾಪುರ, ಬಸವಕಲ್ಯಾಣ, ಹುಮನಾಬಾದ್, ದೇವದುರ್ಗ, ಕುಮಟಾ, ಶಿರಸಿ, ಜಗಳೂರು, ಹರಿಹರ, ಬೈಂದೂರು, ಕುಂದಾಪುರ, ಕಾಪು, ಕಾರ್ಕಳ, ಶೃಂಗೇರಿ, ಮೂಡಿಗೆರೆ, KGF, ಬೆಳ್ತಂಗಡಿ, ಮಂಗಳೂರು, ಬಂಟ್ವಾಳ.

ದಯವಿಟ್ಟು ಈ ಮೇಲಿನ ಕ್ಷೇತ್ರಗಳ ಮತದಾರರು ನಿಮ್ಮ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳಲ್ಲಿ J.C.B ಪಕ್ಷಗಳ ಅಭ್ಯರ್ಥಿಗಳನ್ನು ಹೊರತುಪಡಿಸಿ, ಅರ್ಹ ಮತ್ತು ಪ್ರಾಮಾಣಿಕ ಅಭ್ಯರ್ಥಿಗಳಿಗೆ ಮತ ನೀಡಿ ಎಂದು 🙏 ಮನವಿ ಮಾಡುತ್ತೇವೆ. ಹಾಗೆಯೇ ಇತರೆ ಕ್ಷೇತ್ರಗಳಲ್ಲಿರುವ ನಿಮ್ಮ ಆಪ್ತರಿಗೆ ತಪ್ಪದೇ KRS ಪಕ್ಷಕ್ಕೆ ಮತ ನೀಡಲು ವಿನಂತಿಸಿ.

ಧನ್ಯವಾದಗಳು.

  • ರವಿ ಕೃಷ್ಣಾರೆಡ್ಡಿ
    ರಾಜ್ಯಾಧ್ಯಕ್ಷ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ.

Leave a Reply