ದಲಿತ ಕುಟುಂಬಕ್ಕೆ ದಂಡ: ನಂಜನಗೂಡು ಶಾಸಕ ಬಿ.ಹರ್ಷವರ್ಧನ್ ಖಂಡನೆ

5 years ago

ದಲಿತ ಕುಟುಂಬಕ್ಕೆ ದಂಡ: ನಂಜನಗೂಡು ಶಾಸಕ ಬಿ.ಹರ್ಷವರ್ಧನ್ ಖಂಡನೆ

ಬೆಂಗಳೂರು: ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಮಿಯಾಪುರ ಗ್ರಾಮದಲ್ಲಿ 2 ವರ್ಷದ ಮಗು ದೇವಸ್ಥಾನ ಪ್ರವೇಶಿಸಿದೆ ಎಂಬ ಕಾರಣಕ್ಕೆ ದಲಿತ ಕುಟುಂಬಕ್ಕೆ 25,000 ರೂ. ದಂಡ ವಿಧಿಸಿದ ಘಟನೆಯನ್ನು ಬಿಜೆಪಿ ಶಾಸಕ ಬಿ.ಹರ್ಷವರ್ಧನ್ ಖಂಡಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ನಾವೆಲ್ಲರೂ ದೇಶದ ಸಂವಿಧಾನದ ಅಡಿಯಲ್ಲಿ ಬದುಕಬೇಕು. ಅಸ್ಪೃಶ್ಯತೆ ಆಚರಣೆ ಅಪರಾಧ. ಇಂತಹ ಅಮಾನವೀಯ ಘಟನೆಗಳಿಗೆ ಸುಸಂಸ್ಕೃತ ಸಮಾಜ ತಲೆ ತಗ್ಗಿಸುವಂತಾಗಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಸೆಪ್ಟೆಂಬರ್ 4 ರಂದು ಅವರ ಹುಟ್ಟುಹಬ್ಬದಂದು 2 ವರ್ಷದ ಮಗನನ್ನು ಅವರ ತಂದೆ ಆಂಜನೇಯ ದೇವಸ್ಥಾನಕ್ಕೆ ಕರೆದೊಯ್ದಿದ್ದಾರೆ. ತಂದೆ ದೇವಾಲಯದ ಹೊರಗೆ ನಿಂತು ಪ್ರಾರ್ಥನೆ ಮಾಡುತ್ತಿದ್ದ ಸಮಯದಲ್ಲಿ ಮಗು ದೇವಾಲಯದ ಒಳಗೆ ಓಡಿ ಹೋಗಿ ವಾಪಸ್ ಬಂದಿದೆ. ಈ ಕಾರಣಕ್ಕೆ ದೇವಸ್ಥಾನದ ಅರ್ಚಕರು ಗ್ರಾಮಸ್ಥರೊಂದಿಗೆ ಸೇರಿ ಮಗುವಿನ ಕುಟುಂಬಕ್ಕೆ ದಂಡ ವಿಧಿಸಿದ್ದಾರೆ. ದೇವಾಲಯದ ಶುದ್ಧೀಕರಣಕ್ಕೆ ಹಣ ವ್ಯಯಿಸಲಾಗುತ್ತದೆ ಎಂದು ಕುಟುಂಬದವರಿಗೆ ತಿಳಿಸಲಾಗಿದೆ. ದಲಿತ ಕುಟುಂಬಕ್ಕೆ ದಂಡ ಪಾವತಿಸಲು ಸಾಧ್ಯವಾಗಿಲ್ಲ. ಈಗಾಗಲೇ ಐದು ಜನರ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

Leave a Reply