ಬೆಂಗಳೂರು: ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ, ಗೋವಿಂದರಾಜನಗರ ವಾರ್ಡ್-104ರಲ್ಲಿ ಮಹಾತ್ಮಗಾಂಧೀಜಿಯವರ ಜನ್ಮದಿನಾಚರಣೆ ಪ್ರಯುಕ್ತ ಸೇವೆ ಮತ್ತು ಸಮರ್ಪಣಾ ಅಭಿಯಾನ ಕಾರ್ಯಕ್ರಮ ನಡೆಯಿತು.
ರಾಜ್ಯ ಬಿ.ಜೆ.ಪಿ.ಯುವ ಮುಖಂಡ ಡಾ.ಅರುಣ್ ಸೋಮಣ್ಣ, ಬಿ.ಬಿ.ಎಂ.ಪಿ. ಮಾಜಿ ಸದಸ್ಯ ಕೆ.ಉಮೇಶ್ ಶೆಟ್ಟಿ ಮತ್ತು ಗೋವಿಂದರಾಜನಗರ ಬಿ.ಜೆ.ಪಿ. ಮಂಡಲ ಅಧ್ಯಕ್ಷ ವಿಶ್ವನಾಥಗೌಡ ಹಾಗೂ ಬಿ.ಜೆ.ಪಿ. ಯುವ ಮೋರ್ಚಾ, ಮಹಿಳಾ ಮೋರ್ಚಾ ಹಾಗೂ ರೈತ ಮೋರ್ಚಾ ಪದಾಧಿಕಾರಿಗಳು ಕಾರ್ಯಕರ್ತರು ಮತ್ತು ಸ್ಥಳೀಯ ನಿವಾಸಿಗಳು ಪಾಲ್ಗೊಂಡಿದ್ದರು. ಗೋವಿನ ಪೂಜೆ ಮಾಡಿ, ದಾಸಶೇಷ್ಠ ಕನಕದಾಸ, ರಾಷ್ಟಪಿತ ಮಹಾತ್ಮ ಗಾಂಧೀಜಿಯವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು.
ಗೋವಿಂದರಾಜನಗರ ವಾರ್ಡ್ ನ ಪ್ರಮುಖ ರಸ್ತೆಗಳನ್ನು ಸ್ವಚ್ಛಗೊಳಿಸಿ ನಂತರ ಸರ್ಕಾರಿ ಫ್ರೌಡಶಾಲೆ ಅವರಣದಲ್ಲಿ ಸಸಿ ನೆಡಲಾಯಿತು . ಪರಿಸರ ಜಾಗೃತಿ ಮೂಡಿಸಲು ಜಾಥ ಮಾಡಲಾಯಿತು.
ಡಾ. ಅರುಣ್ ಸೋಮಣ್ಣ ಮಾತನಾಡಿ, ಮಹಾತ್ಮ ಗಾಂಧಿಜೀರವರು ಕಂಡ ರಾಮರಾಜ್ಯದ ಕನಸು, ಪ್ರಧಾನಿ ನರೇಂದ್ರಮೋದಿಜೀ ರವರ ಆಡಳಿತದಲ್ಲಿ ಭಾರತ ದೇಶ ರಾಮರಾಜ್ಯದ ಆಡಳಿತ ದತ್ತ ಸಾಗುತ್ತಿದೆ. ಬಡತನ ನಿರ್ಮೂಲನೆಯಾಗಬೇಕು ಗಾಂಧಿಜೀರವರ ಆಸೆಯಾಗಿತ್ತು. ವಸತಿ ಸಚಿವ ವಿ.ಸೋಮಣ್ಣ ಅವರ ನೇತೃತ್ವದಲ್ಲಿ ಕರ್ನಾಟಕ ವಸತಿ ಇಲಾಖೆಯಲ್ಲಿ ಸೂರು ಇಲ್ಲದಿರುವವರಿಗೆ ಮನೆ ನಿರ್ಮಿಸಿ ಅತ್ಯಂತ ಕಡಿಮೆ ವೆಚ್ಚದಲ್ಲಿ ನೀಡಲಾಗುತ್ತಿದೆ. ಬಡವರಿಗೆ ಸೂರು ಮತ್ತು ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ವಿ.ಸೋಮಣ್ಣ ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದರು.
ಕೆ.ಉಮೇಶ್ ಶೆಟ್ಟಿ ಮಾತನಾಡಿ, ಮಹಾತ್ಮಗಾಂಧೀಜಿಯವರ ಸ್ವಚ್ಛ ಭಾರತ ಚಿಂತನೆಯನ್ನು ವಿಶ್ವದ ಬಲಿಷ್ಠ ನಾಯಕ ಪ್ರಧಾನಿ ನರೇಂದ್ರಮೋದಿಯವರ ಆಡಳಿತದಲ್ಲಿ ದೇಶ ವಿಶ್ವಮಾನ್ಯತೆ ಗಳಿಸಿದೆ . ವಸತಿ ಸಚಿವರಾದ ವಿ.ಸೋಮಣ್ಣ ಅವರ ಮಾರ್ಗದರ್ಶನ ಮತ್ತು ನೇತೃತ್ವದಲ್ಲಿ ಆರೋಗ್ಯ, ಪರಿಸರ ಮತ್ತು ಶಿಕ್ಷಣದಲ್ಲಿ ಮಹತ್ವದ ಅಭಿವೃದ್ದಿ ಯೋಜನೆಗಳು ಸಾಕರಗೊಂಡಿವೆ. ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ರಾಜ್ಯದ ಅಭಿವೃದ್ದಿ ಹೊಂದಿದ ಪ್ರಪ್ರಥಮ ವಿಧಾನಸಭಾ ಕ್ಷೇತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.




