ಬೆಳೆ ವಿಮೆ ದುರುಪಯೋಗ ದೂರು ದಾಖಲು

4 years ago

ಗದಗ: ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ 2020-21ನೇ ಸಾಲಿನಲ್ಲಿ ಡಂಬಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಶ್ರೀ ನಂದಿವೇರಿಮಠದ ಮಾಲೀಕತ್ವದಲ್ಲಿರುವ ಒಟ್ಟು 14.51 ಹೆ. ಜಮೀನಿಗೆ ನಿಜಲಿಂಗಪ್ಪ ಕೆ. ಆಲೂರ ಎಂಬುವವರು ಅಕ್ರಮವಾಗಿ ತಮ್ಮ ಹೆಸರಿನಲ್ಲಿ ಬೆಳೆ ವಿಮೆ ಯೋಜನೆಯಡಿ ನೋಂದಾಯಿಸಿಕೊಂಡು ಅಂದಾಜು ರೂ. 5,42,115/- ಸರ್ಕಾರದ / ವಿಮಾ ಸಂಸ್ಥೆಯ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದು, ತನಿಖೆಯಿಂದ ತಿಳಿದು ಬಂದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ನಿಜಲಿಂಗಪ್ಪ ಕೆ. ಆಲೂರ ಎಂಬುವವರ ಮೇಲೆ ಸಹಾಯಕ ಕೃಷಿ ಇಲಾಖೆ  ಮುಂಡರಗಿ ಪೋಲೀಸ್ ಠಾಣೆ ಇವರಲ್ಲಿ ಯೋಜನೆಯ ದುರುಪಯೋಗ ಪಡಿಸಿಕೊಂಡಿರುವ ಕುರಿತು ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಿದೆ.

ಜಿಲ್ಲೆಯ ರೈತರು ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ದುರುಪಯೋಗ ಆಗುತ್ತಿರುವ ಕುರಿತು ಹಾಗೂ ತಮ್ಮ ಜಮೀನಿನ ಹೆಸರಿನಲ್ಲಿ ಅನಧಿಕೃತ ವ್ಯಕ್ತಿಗಳು ಬೆಳೆ ವಿಮೆ ಯೋಜನೆಯಡಿ ನೋಂದಾಯಿಸಿಕೊಳ್ಳದಂತೆ ಎಚ್ಚರವಹಿಸಬೇಕೆಂದು ಪ್ರಭಾರಿ ಜಂಟಿ ಕೃಷಿ ನಿರ್ದೇಶಕ ವೀರೇಶ ಹುನಗುಂದ ಹೇಳಿದ್ದಾರೆ.

Leave a Reply